ಕರ್ನಾಟಕ

ಪೊಲೀಸ್ ಅಧಿಕಾರಿಗಳಿಂದ ಸರಕಾರಿ ಪ್ರೌಢಶಾಲೆ ದತ್ತು

Pinterest LinkedIn Tumblr


ಗಂಗಾವತಿ: ನಗರದ ಎಪಿಎಂಸಿ ಗಂಜ್ ಹಮಾಲಿ ಕಾರ್ಮಿಕರ ಏರಿದಲ್ಲಿರುವ ಸರಕಾರಿ ಪ್ರೌಢಶಾಲೆಯನ್ನು ಗಂಗಾವತಿ ಉಪವಿಭಾಗದ ಡಿವೈಎಸ್ಪಿ ಡಾ.ಚಂದ್ರಶೇಖರ ನೇತೃತ್ವದಲ್ಲಿ ದತ್ತು ಪಡೆದು ಕೊಂಡು ಶಾಲೆಯಲ್ಲಿ ಗ್ರಂಥಾಲಯ ಸೇರಿ ಮೂಲಸೌಕರ್ಯ ಕಲ್ಪಿಸಲು ಮುಂದಾಗಿದ್ದಾರೆ.

ಮಂಗಳವಾರ ಶಾಲೆಯಲ್ಲಿ ಆಯೋಜಿಸಿದ್ದ ಅಪರಾಧ ತಡೆ ಮಾಸಾಚಾರಣೆಯಲ್ಲಿ ಗ್ರಾಮೀಣ ಸಿಪಿಐ ಸುರೇಶ ತಳವಾರ ನಗರ ಪಿಐ ಉದಯರವಿ ತಮ್ಮ ಒಂದು ತಿಂಗಳ ವೇತನದಲ್ಲಿ ಗ್ರಂಥಾಲಯ ಹಾಗೂ ಇದಕ್ಕೆ ಬೇಕಾಗುವ ಪುಸ್ತಕಗಳನ್ನು ಖರೀದಿ ಮಾಡಲು ಹಣ ನೀಡುವುದಾಗಿ ಭರವಸೆ ನೀಡಿದರು. ಇಡೀ ಶಾಲೆಗೆ ಸುಣ್ಣಬಣ್ಣ ಹಚ್ಚಿ ಶಾಲೆಯ ಗೋಡೆಗಳ ಮೇಲೆ ಸಾಹಿತ್ಯ ವಿಜ್ಞಾನ,ಕಲೆ ಜ್ಞಾನಪೀಠ ಪುರಸ್ಕೃತರು ನೊಬೆಲ್ ಪ್ರಶಸ್ತಿ ಪಡೆದ ದೇಶದ ಪ್ರಧಾನಿ,ರಾಜ್ಯದ ಸಿಎಂ ಸೇರಿ ಸಾಮಾನ್ಯ ಜ್ಞಾನ ಕ್ಕೆ ಸಂಬಂಧಿಸಿದಂತೆ ಮಾಹಿತಿಯನ್ನು ಡಿವೈಎಸ್ಪಿ ಡಾ.ಚಂದ್ರಶೇಖರ್ ಬರೆಯಿಸಿದ್ದಾರೆ.

ಬೇರೆಯವರು ಸಹ ಸರಕಾರಿ ಶಾಲೆಗಳನ್ನು ದತ್ತು ಪಡೆದು ಸೌಲಭ್ಯ ಒದಗಿಸುವಂತೆ ಬಿಇಒ ಸೋಮಶೇಖರ್ ಗೌಡ ಹೇಳಿದ್ದಾರೆ.

Comments are closed.