ರಾಷ್ಟ್ರೀಯ

ನಿಮ್ಮ ಆಧಾರ್ ಮಾಹಿತಿ ಯಾರು ಬಳಸಿದ್ದಾರೆ? ಹೀಗೆ ಪತ್ತೆ ಮಾಡಿ

Pinterest LinkedIn Tumblr


ಇತ್ತೀಚಿನ ದಿನಗಳಲ್ಲಿ ನಾವು ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಿಲ್ಲ. ಅಗತ್ಯ ಸೇವೆಗಳಿಗಾಗಿ ನಾವು ಎಲ್ಲೆಡೆ ಆಧಾರ್ ಕಾರ್ಡ್ ಅನ್ನು ಬಳಸುತ್ತಲೇ ಇರುತ್ತೇವೆ, ಆದರೆ ಅದರ ಸುರಕ್ಷತೆಯ ಬಗ್ಗೆ ನಾವು ವಿಚಾರಿಸುವುದೇ ಇಲ್ಲ. ತಮ್ಮ ಆಧಾರ್ ಅನ್ನು ಎಲ್ಲಿ ಬಳಸಲಾಗಿದೆ ಅಥವಾ ತಮ್ಮ ಆಧಾರ್ ಅನ್ನು ಆಥೆಂಟಿಕೇಶನ್ ಗಾಗಿ ಯಾರು ಬಳಸಿದ್ದಾರೆಂದು ಕೆಲವೇ ಜನರಿಗೆ ತಿಳಿದಿರುತ್ತದೆ. ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆಯಾಗುತ್ತಿದೆ ಎಂಬುದನ್ನು ಕಂಡುಹಿಡಿಯಲು ಇಂದು ನಾವು ನಿಮಗೆ ಸುಲಭ ಮಾರ್ಗವೊಂದನ್ನು ಹೇಳಿಕೊಡಲಿದ್ದೇವೆ.

ಯುಐಡಿಎಐ ಸೂಚಿಸಿರುವ ವಿಧಾನ ಏನು?
ನಿಮ್ಮ ಆಧಾರ್ ಕಾರ್ಡ್ ಎಲ್ಲಿ ಮತ್ತು ಯಾವಾಗ ಬಳಕೆಯಾಗಿದೆ ಎಂಬುದನ್ನು ತಿಳಿಯಲು ಯುಐಡಿಎಐ ಸುಲಭವಾದ ಮಾರ್ಗವೊಂದನ್ನು ಸಿದ್ಧಪಡಿಸಿದೆ. ನಿಮ್ಮ ಡಾಕ್ಯುಮೆಂಟ್‌ನ ಗೌಪ್ಯತೆಯನ್ನು ನೀವೆಲ್ಲರೂ ಸಂಪೂರ್ಣವಾಗಿ ನೋಡಿಕೊಳ್ಳಬೇಕು. ಡಾಕ್ಯುಮೆಂಟ್‌ನ ಸುರಕ್ಷತೆಯ ಕೊರತೆಯಿಂದಾಗಿ, ಅನೇಕ ಬಾರಿ ಜನರು ಭಾರಿ ನಷ್ಟ ಅನುಭವಿಸುತ್ತಾರೆ. ಇದನ್ನೇ ಗಮನದಲ್ಲಿಟ್ಟುಕೊಂಡು ಯುಐಡಿಎಐ ಈ ಮಾರ್ಗವನ್ನು ನೀಡಿದೆ.

ನಿಮ್ಮ ಆಧಾರ್ ಕಾರ್ಡನ್ನು ಹೀಗೆ ಸುರಕ್ಷಿತಗೊಳಿಸಿ
ಇದಕ್ಕಾಗಿ ನೀವು ಮೊದಲು https://resident.uidai.gov.in ವೆಬ್ಸೈಟ್ ಗೆ ಭೇಟಿ ನೀಡಬೇಕು. ಬಳಿಕ ಆಧಾರ್ ಆಥೆಂಟಿಕೇಶನ್ ಹಿಸ್ಟರಿ ಪುಟಕ್ಕೆ ಭೇಟಿ ನೀಡಲು ಅಲ್ಲಿರುವ ಲಿಂಕ್ ಮೇಲೆ ಕ್ಲಿಕ್ಕಿಸಿ. ನಂತರ ಅಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆ ಹಾಗೂ ಗೌಪ್ಯ ಕೋಡ್ ಅನ್ನು ನಮೂದಿಸಿ, ‘Generate OTP’ ಮೇಲೆ ಕ್ಲಿಕ್ಕಿಸಿ.

ಅಧಿಕೃತ ಮೊಬೈಲ್ ಗೆ ಒಟಿಪಿ ಬರಲಿದೆ
ಈ ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ, ನೀವು ಅಧಿಕೃತವಾಗಿ ನೋಂದಣಿ ಮಾಡಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದೆ. ಈ ಒಟಿಪಿ ಸಂಖ್ಯೆಯನ್ನು ನಮೂದಿಸಿದ ನಂತರ ನಿಮಗೆ ಸೈಟ್‌ನಲ್ಲಿ ಹಲವು ಆಯ್ಕೆಗಳು ಬರಲಿವೆ. ಇದರಲ್ಲಿ, ನೀವು ಮಾಹಿತಿಯ ಅವಧಿ ಮತ್ತು ಅವುಗಳಲ್ಲಿನ ವಹಿವಾಟುಗಳ ಸಂಖ್ಯೆಯ ವಿವರ ನೀಡಬೇಕು.

ನಿಮ್ಮ ಮಾಹಿತಿ ಸಬ್ಮಿಟ್ ಮಾಡಿದ ನಂತರ ನೀವು ಪತ್ತೆಹಚ್ಚಬಹುದು
ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ನಂತರ, ನೀವು ‘ಸಬ್ಮಿಟ್’ ಗುಂಡಿಯನ್ನು ಕ್ಲಿಕ್ಕಿಸಬೇಕು. ಆಥೆಂಟಿಕೇಶನ್ ವಿನಂತಿಯ ದಿನಾಂಕ, ಸಮಯ ಮತ್ತು ಪ್ರಕಾರ ನಿಮಗೆ ತಿಳಿದು ಬರಲಿದೆ. ಆದರೆ, ನಿಮ್ಮ ಆಧಾರ ಮಾಹಿತಿಯನ್ನು ಯಾರು ಕೋರಿದ್ದಾರೆ ಎಂಬುದು ಈ ಪುಟದಲ್ಲಿ ನಿಮಗೆ ತಿಳಿಯುವುದಿಲ್ಲ.

ಮಾಹಿತಿಯನ್ನು ಲಾಕ್ ಹಾಗೂ ಅನ್ಲಾಕ್ ಮಾಡುವುದು ಹೇಗೆ?
ಈ ಪುಟದಲ್ಲಿ ನೀವು ನಿಮ್ಮ ಆಧಾರ್ ಮಾಹಿತಿಯನ್ನು ಲಾಕ್ ಮತ್ತು ಅನಲಾಕ್ ಕೂಡ ಮಾಡಬಹುದಾಗಿದೆ. ನಿಮಗೆ ಅವಶ್ಯಕವೆನಿಸಿದರೆ ನೀವು ನಿಮ್ಮ ಮಾಹಿತಿಯನ್ನು ಅನ್ಲಾಕ್ ಮಾಡಿ.

ನಿಮ್ಮ ಆಧಾರ್ ನಂಬರ್ ಅನ್ನು ಪ್ಯಾನ್ ಗೆ ಲಿಂಕ್ ಮಾಡುವುದು ಹೇಗೆ?
ಇದಕ್ಕಾಗಿ ಮೊದಲು ನೀವು ಆದಾಯ ತೆರಿಗೆ ಇಲಾಖೆಯ ವೆಬ್ಸೈಟ್ ಗೆ ಭೇಟಿ ನೀಡಬೇಕು. ಬಳಿಕ ಆಧಾರ್ ಮತ್ತು ಪ್ಯಾನ್ ನಂಬರ್ ಲಿಂಕ್ ಗಾಗಿ ನೀಡಲಾಗಿರುವ ಗುಂಡಿಯನ್ನು ಕ್ಲಿಕ್ಕಿಸಬೇಕು. ಇಲ್ಲಿ ನಿಮ್ಮ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ವಿವರವನ್ನು ಸಲ್ಲಿಸಿ, ಈ ಎರಡೂ ಕಾರ್ಡ್ ಗಳನ್ನು ಲಿಂಕ್ ಮಾಡಬಹುದು.

Comments are closed.