ಕರ್ನಾಟಕ

ಈಗ ಮೈಸೂರು ವಿಭಜನೆ ಮಾತನಾಡಿದ್ದಾರೆ ಅಂದ್ರೆ ಏನು? ಸಿದ್ದರಾಮಯ್ಯ ಪ್ರಶ್ನೆ

Pinterest LinkedIn Tumblr


ಮೈಸೂರು (ಅ.20): ಹುಣಸೂರು ಕ್ಷೇತ್ರದಲ್ಲಿ ಉಪ ಚುನಾವಣೆಯನ್ನು ನಾವು ಯಾರು ನಿರೀಕ್ಷೆ ಮಾಡಿರಲಿಲ್ಲ. ಆದರೆ ಹಣ, ಅಧಿಕಾರದ ಆಮಿಷಕ್ಕೆ ಒಳಗಾದ ಕಾಂಗ್ರೆಸ್​ ಜೆಡಿಎಸ್​ ಶಾಸಕರ ರಾಜೀನಾಮೆಯಿಂದ ಈಗ ಚುನಾವಣೆ ಎದುರಾಗಿದೆ ಎಂದು ಸಿದ್ದರಾಮಯ್ಯ ಹೆಸರೆಳದೇ ಅನರ್ಹ ಶಾಸಕ ವಿಶ್ವನಾಥ್​ ವಿರುದ್ಧ ವಾಗ್ದಾಳಿ ನಡೆಸಿದರು.

ಹುಣಸೂರಿನಲ್ಲಿ ಕುರುಬ ಸಮುದಾಯಸ್ಥರ ಸಭಾರಂಭದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾದ ಅವರು, ಅರಸು ಶಿಷ್ಯನಂತೆ ವಿಶ್ವನಾಥ್​ ಇದ್ದರು. ಅವರು ಹೋದ ಬಳಿಕ ಗುಂಡುರಾವ್​ ಜೊತೆ ಇದ್ದರು. 40 ವರ್ಷದ ರಾಜಕೀಯ ಜೀವನದಲ್ಲಿ ಮೈಸೂರು ವಿಭಜನೆ ಮಾತನಾಡದವರು ಈಗ ಚುನಾವಣೆಗೋಸ್ಕರ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ವಿಭಜನೆ ಕುರಿತು ಮೊದಲಿನಿಂದಲೂ ಮಾತನಾಡದವರು ಈಗ ಈ ವಿಚಾರ ಕುರಿತು ಮಾತನಾಡುತ್ತಿದ್ದರೆ ಎಂದರೆ ಇದರ ಹಿಂದೆ ದುರುದ್ಧೇಶ ಜನರಿಗೆ ಅರ್ಥವಾಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ನಾನು ಕೂಡ ಪಕ್ಷಾಂತರ ಮಾಡಿದ್ದೇನೆ. ಆದರೆ, ನನ್ನನ್ನು ಉಚ್ಛಾಟನೆ ಮಾಡಿದಾಗ ನಾನೇಲ್ಲಿಗೂ ಹೋಗಲಿಲ್ಲ. ಸೋನಿಯಾ ಗಾಂಧಿ ಆಹ್ವಾನ ಮಾಡಿದ ಬಳಿಕ ಅಹಮದ್​ ಪಟೇಲ್​ರಿಂದಾಗಿ ನಾನು ಕಾಂಗ್ರೆಸ್​ ಸೇರಿದೆ. ಪಕ್ಷ ನನಗೆ ಸ್ಥಾನ ಮಾನ ನೀಡಿತು. ಆ ಋಣ ತೀರಿಸಬೇಕಿದೆ, ಆದ್ದರಿಂದ ಮಂಜುನಾಥ್​ ಗೆಲ್ಲಿಸಿಕೊಳ್ಳುವುದು ನನ್ನ ಜವಾಬ್ದಾರಿ. ನೀವು ನನ್ನನ್ನು ಗೆಲ್ಲಿಸಿದಂತೆ ಮಂಜುನಾಥ್​ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಎಲ್ಲಾ ಚುನಾವಣೆಗಳಲ್ಲಿ ಮೈಸೂರು ಚಾ.ನಗರ ರಾಜ್ಯದಲ್ಲಿ ನೀವು ಕೈ ಹಿಡಿದಿದ್ದೀರಾ. ನಿಮ್ಮ ಋಣ ನನಗೆ ಬೆಟ್ಟದಷ್ಟಿದೆ. ನಿಮ್ಮ ಆಶೀರ್ವಾದ ಇರುವವರೆಗೂ ನಾನು ರಾಜಕೀಯದಲ್ಲಿ ಶಕ್ತಿಯುತನಾಗಿರುತ್ತೇನೆ. ಕೈ ಬಿಟ್ಟರೆ ಶಕ್ತಿ ಕಳೆದುಕೊಳ್ಳುತ್ತೇನೆ ಎಂದು ಭಾವನಾತ್ಮಕವಾಗಿ ಮನವಿ ಮಾಡಿದರು.

ಮಂಜುನಾಥ್ ಗೆದ್ದರೆ ನಾನು ಗೆದ್ದಂತೆ. ನಾನು ಬೇಕಾ ? ಬಿಜೆಪಿ ಅಭ್ಯರ್ಥಿ ಬೇಕಾ ನಿರ್ಧರಿಸಿ. ನಾನೇನು ಸಿಎಂ ಮಾಡಿದವರಿಗೆ ಅನ್ಯಾಯ ಮಾಡಿದ್ದೀನಾ ? ನನ್ನನ್ನು ನಾನು ಮಾರಾಟ ಮಾಡಿಕೊಂಡಿದ್ದೀನಾ ? ನಾನು ಕೇವಲ ಒಂದೇ ದಿನ ಹುಣಸೂರಿಗೆ ಪ್ರಚಾರಕ್ಕೆ ಬರುತ್ತೇನೆ. ಒಂದು ಸಾರ್ವಜನಿಕೆ ಸಭೆ ಒಂದು ಕಾರ್ಯಕರ್ತರ ಸಭೆ ಮಾಡುತ್ತೇನೆ. ಅಪಪ್ರಚಾರಕ್ಕೆ ಕಿವಿಗೊಡದೇ ಮಂಜುನಾಥ್​ ರನ್ನು 20 ಸಾವಿರ ಅಂತರದಲ್ಲಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

Comments are closed.