ರಾಷ್ಟ್ರೀಯ

ದೀಪಾವಳಿ ಆಫರ್: 699 ರೂ.ಗೆ 4G ಜಿಯೋ ಮೊಬೈಲ್​ ಫೋನ್

Pinterest LinkedIn Tumblr


ಹಬ್ಬದ ಪ್ರಯುಕ್ತ ಇದೀಗ ರಿಲಯನ್ಸ್​ ಜಿಯೋ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ. ಈ ದೀಪಾವಳಿ ವೇಳೆ ನೀವು ಯಾರಿಗಾದರೂ ಡಿಜಿಟಲ್ ಉಡುಗೊರೆ ನೀಡಬೇಕೆಂದು ಬಯಸಿದ್ದರೆ, ಜಿಯೋಫೋನ್​ಗಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ. ಏಕೆಂದರೆ ರಿಲಯನ್ಸ್ ಕಂಪೆನಿ ಇತ್ತೀಚೆಗೆ ತನ್ನ 4ಜಿ ಜಿಯೋ ಫೋನ್​ ಬೆಲೆಯನ್ನು ಶೇ. 50 ರಷ್ಟು ಕಡಿತಗೊಳಿಸಿದೆ.

ಈ ಹಿಂದೆ 1500 ರೂ.ನಲ್ಲಿ ಲಭ್ಯವಿದ್ದ ಜಿಯೋ ಫೋನ್ ಇದೀಗ ಕೇವಲ 699 ರೂಗಳಿಗೆ ಲಭ್ಯವಿದೆ. ಇದನ್ನೇ ಕೇವಲ ಮೂರು ಹಂತಗಳಲ್ಲಿ ನಿಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆಯಾಗಿ ನೀಡಬಹುದು. ಅದಕ್ಕಾಗಿ ನೀವು ಮಾಡಬೇಕಿರುವುದು ಇಷ್ಟೇ.

-ಮೊದಲು ನೀವು jio.com/gift-jiophone ವೆಬ್​ಸೈಟ್​ಗೆ ಹೋಗಬೇಕು.

– ಅಲ್ಲಿ ನಿಮಗೆ ಜಿಯೋಫೋನ್‌ನ ಬ್ಯಾನರ್ ಕಾಣಿಸುತ್ತದೆ. ಅದರಲ್ಲಿ ‘ಗಿಫ್ಟ್ ನೌ’ ಆಯ್ಕೆಯನ್ನು ಟ್ಯಾಪ್ ಮಾಡಬೇಕು. ಇದರ ನಂತರ ನೀವು 3 ಹಂತಗಳನ್ನು ಅನುಸರಿಸಬೇಕು.

ಹಂತ 1- ಮೊದಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಬಳಿಕ ನೀವು ಜಿಯೋಫೋನ್ ಉಡುಗೊರೆಯಾಗಿ ನೀಡಲು ಬಯಸುವ ವ್ಯಕ್ತಿಯ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.

ಹಂತ 2- ಇದರ ನಂತರ, ನಿಮ್ಮದೇ ಆದ ಪ್ರಕಾರ ಉಡುಗೊರೆ (Gift Bundle) ಒಂದನ್ನು ಆರಿಸಿ ಆನ್‌ಲೈನ್‌ ಮೂಲಕ ಪಾವತಿ ಮಾಡಿ. ಆ ಗಿಫ್ಟ್ ವೋಚರ್​​ನ್ನು ನಿಮ್ಮ ಪ್ರೀತಿ ಪಾತ್ರರಿಗೆ ಕಳುಹಿಸಿ.

ಹಂತ 3- ಈಗ ನೀವು ಈ ಚೀಟಿಯನ್ನು ಕಳುಹಿಸಿದ್ದೀರಿ. ಆ ವೋಚರ್​ ತೋರಿಸಿ ಯಾವುದೇ ಜಿಯೋ ಸ್ಟೋರ್​ನಿಂದ ಜಿಯೋಫೋನ್ ಅನ್ನು ಖರೀದಿಸಬಹುದು.

Comments are closed.