ಕರ್ನಾಟಕ

ಬೆಂಗಳೂರಿನಲ್ಲಿ ಯುವತಿ ತುಂಡುಡುಗೆ ಧರಿಸಿದಕ್ಕಾಗಿ ಹೀಗೊಂದು ನೈತಿಕ ಪೊಲೀಸ್‌ಗಿರಿ

Pinterest LinkedIn Tumblr


ಬೆಂಗಳೂರು: ಯುವತಿ ಧರಿಸಿದ ವಸ್ತ್ರ ಸರಿ ಇಲ್ಲ. ಇದು ಭಾರತೀಯ ಸಂಸ್ಕೃತಿ ಅಲ್ಲ ಎಂದು ನಡು ರಸ್ತೆಯಲ್ಲೇ ವ್ಯಕ್ತಿಯೊಬ್ಬ ಯುವತಿಯನ್ನು ತಡೆದು ‘ನೈತಿಕ ಪೊಲೀಸ್‌ಗಿರಿ’ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಈ ಘಟನೆ ನಡೆದಿದ್ದು ವಿಡಿಯೋ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ.

ಮುಂಬೈ ಮೂಲದ ಟೆಕ್ಕಿ ಯುವತಿ ಆಕೆಯ ಸ್ನೇಹಿತನೊಂದಿಗೆ ಶಾಪಿಂಗ್ ಹೋಗಿದ್ದರು. ಬೈಕಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಇವರು ಪ್ರಯಾಣಿಸುತ್ತಿದ್ದ ಬೈಕನ್ನು ತಡೆದು ಯುವತಿ ಧರಿಸಿರುವ ವಸ್ತ್ರದ ಬಗ್ಗೆ ಆಕ್ಷೇಪ ಎತ್ತಿದ್ದಾನೆ.

ಮನೆಯಲ್ಲಿ ಬೇರೆ ವಸ್ತ್ರ ಇಲ್ಲವೇ ಎಂದು ಯುವತಿಯ ಜೊತೆಗೆ ವಾಗ್ವಾದಕ್ಕಿಳಿದ ವ್ಯಕ್ತಿ ಭಾರತೀಯ ಮಹಿಳೆಯವರು ಇಂತಹಾ ವಸ್ತ್ರವನ್ನು ಧರಿಸುವುದು ದೇಶದ ಸಂಸ್ಕೃತಿಗೆ ವಿರುದ್ಧ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾನೆ ಎಂದು ನೈತಿಕ ಪೊಲೀಸ್‌ಗಿರಿಗೆ ಒಳಗಾದ ಯುವತಿ ಆರೋಪಿಸಿದ್ದಾರೆ.

ವ್ಯಕ್ತಿಯ ವರ್ತನೆಯನ್ನು ಯುವತಿ ಹಾಗೂ ಆಕೆಯ ಸ್ನೇಹಿತ ಪ್ರಶ್ನಿಸಿದ್ದು ಈ ಸಂದರ್ಭದಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ವಿಡಿಯೋದಲ್ಲೂ ನೈತಿಕ ಪೊಲೀಸ್‌ಗಿರಿ ನಡೆಸಿದ ಅನಾಮಿಕ ವ್ಯಕ್ತಿ ಯುವತಿ ಧರಿಸಿರುವ ವಸ್ತ್ರದ ಬಗ್ಗೆ ಆಕ್ಷೇಪವೆತ್ತಿ ಇಂತಹಾ ಉಡುಗೆ ನಮ್ಮ ಸಂಸ್ಕೃತಿಯ ಭಾಗ ಅಲ್ಲ ಎಂದು ವಾದ ಮಾಡಿದ್ದಾನೆ. ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡ ಯುವತಿ ಹಾಗೂ ಆಕೆಯ ಸ್ನೇಹಿತ ದೇಶದ ಸಂವಿಧಾನ ನಮಗೆ ಹಕ್ಕು ಕೊಟ್ಟಿದೆ ಅದನ್ನು ಪ್ರಶ್ನಿಸುವ ಅಧಿಕಾರ ನಿಮಗಿಲ್ಲ ಎಂದಿದ್ದಾರೆ.

ಬೆಂಗಳೂರು ನಗರದಲ್ಲೂ ಈ ರೀತಿ ಸಂಸ್ಕೃತಿಯ ಹೆಸರಿನಲ್ಲಿ ನೈತಿಕ ಪೊಲೀಸ್‌ಗಿರಿ ನಡೆದಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಯುವತಿಯ ವಸ್ತ್ರದ ಬಗ್ಗೆ ಆಕ್ಷೇಪ ಎತ್ತಿರುವ ಅನಾಮಿಕ ವ್ಯಕ್ತಿಯ ವಿರುದ್ಧ ನೆಟ್ಟಿಗರು ಹರಿಹಾಯ್ದಿದ್ದಾರೆ. ಜನರ ವೈಯಕ್ತಿಕ ಬದುಕಿನ ಹಕ್ಕುಗಳ ಬಗ್ಗೆ ಪ್ರಶ್ನಿಸುವ ಇಂತಹಾ ಮನೋಭಾವದ ಜನರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿದ್ದಾರೆ.

Comments are closed.