ಕರ್ನಾಟಕ

ಚಂದನ್​ ಶೆಟ್ಟಿ ಪರ ಬ್ಯಾಟಿಂಗ್ ಮಾಡಿದ ಪ್ರಮೋದ್ ಮುತಾಲಿಕ್ !

Pinterest LinkedIn Tumblr


ರಾಜ್ಯದಲ್ಲಿ ಉಂಟಾದ ನೆರೆ ಪರಿಹಾರ ವಿಚಾರವಾಗಿ ಮಾತಾಡಿದ ಚಿಂತಕ ಚಕ್ರವರ್ತಿ ಸೂಲಿಬೆಲೆಯನ್ನ ದೇಶದ್ರೋಹಿ ಅಂದದ್ದು ತಪ್ಪು. ರಾಜಕೀಯದವರು ತಮ್ಮ ಮೂಗಿನ ನೇರಕ್ಕೆ ಯೋಚಿಸುತ್ತಾರೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್​ ಅವರು ಸೂಲಿಬೆಲೆ ಪರ ಬ್ಯಾಟಿಂಗ್ ಮಾಡಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು, ಸಂಘ ಪರಿವಾರ ಈ ವಿಚಾರವನ್ನ ಗಂಭೀರವಾಗಿ ಪರಿಗಣಿಸಬೇಕು. ಇನ್ನು ದಸರಾ ವೇದಿಕೆಯಲ್ಲಿ ನಿವೇದಿತಾಗೆ ಪ್ರೇಮ ನಿವೇದನೆ ಮಾಡಿದ್ದ ಚಂದನ್​ ಶೆಟ್ಟಿ ವಿಷಯ ಪ್ರಸ್ತಾಪಿಸಿದ ಅವರು, ದಸರಾ ವೇದಿಕೆಯಲ್ಲಿ ಪ್ರಪೊಸ್ ಮಾಡಬಾರದು ಎಂಬ ನಿಯಮವಿದೆಯೇ? ಇದ್ದರೆ ತೋರಿಸಿ ಎಂದು ದಸರಾ ಆಯೋಜಕರಿಗೆ ಸವಾಲು ಹಾಕಿದರು.

ಇಬ್ಬರ ಮೇಲೆ ಚಾಮುಂಡೇಶ್ವರಿ ಆಶೀರ್ವಾದ ಇದೆ. ಇಷ್ಟಕ್ಕೂ ವೇದಿಕೆಯಲ್ಲಿ ಇಂತದ್ದು ಮಾಡಬಾರದು, ಇಂತದ್ದು ಮಾಡಬೇಕೆಂಬ ನಿಯಮಗಳಿದ್ದರೆ ಸಚಿವ ಸೋಮಣ್ಣ ಅವರು ಹೇಳಲಿ. ಹೆಚ್ಚು ಎಳೆಯದೆ ಪ್ರಕರಣ ಮುಗಿಸಿಬಿಡಿ. ಕೇಸು ವಾಪಸ್ ಪಡೆಯಿರಿ. ಈ ವಿಚಾರವನ್ನು ಅನಾವಶ್ಯಕವಾಗಿ ಎಳೆಯುತ್ತಿದ್ದಾರೆ. ಇವರ ಮೇಲೆ ಕೇಸು ಹಾಕಿದ್ದು ತಪ್ಪು ಎಂದ ಅವರು ಮದುವೆಯಾಗುತ್ತಿರುವ ಇಬ್ಬರಿಗೂ ಶುಭಾಶಯ ಕೋರಿದರು.

Comments are closed.