ಕರ್ನಾಟಕ

ಅ.10ರೊಳಗೆ ಈ ಸಮಸ್ಯೆ ಬಗೆಹರಿಯದಿದ್ದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಕುರ್ಚಿಗೆ ಕಂಟಕ!

Pinterest LinkedIn Tumblr


ಬೆಂಗಳೂರು : ಅನರ್ಹ ಶಾಸಕರ ಚುನಾವಣೆ ದಿನಾಂಕ ಮುಂದೂಡಿಕೆ, ಕೇಂದ್ರದಿಂದ ಮಧ್ಯಂತರ ನರೆ ಪರಿಹಾರ ಘೋಷಣೆ ನಂತರ ಕೊಂಚ ನಿರಾಳವಾಗಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಮತ್ತೆ ಸಂಕಷ್ಟ ಎದುರಾಗಿದೆ.

ಬಿಎಸ್ ವೈ ಅವರು ಅನರ್ಹ ಶಾಸಕರಿಗೆ ಹೆಚ್ಚು ಒಲವು ತೋರಿಸುತ್ತಿದ್ದಾರೆ ಎಂದು 30ಕ್ಕೂ ಹೆಚ್ಚು ಶಾಸಕರು ಹೈಕಮಾಂಡಿಗೆ ದೂರು ನೀಡಿದ್ದಾರೆ. ಕಾಂಗ್ರೆಸ್​-ಜೆಡಿಎಸ್​ ಅನರ್ಹರಿಗಾಗಿ ಪಕ್ಷದ ಹಿತ ಬಲಿಯಾಗುತ್ತಿದೆ. ಅನರ್ಹರು ಹೇಳಿದಂತೆ ವರ್ಗಾವಣೆಗಳು ನಡೆಯುತ್ತಿವೆ. ಅನರ್ಹರ ಎಲ್ಲ ಕಡತಗಳಿಗೆ ಮುಖ್ಯಮಂತ್ರಿಗಳು ಕಣ್ಮುಚ್ಚಿ ಸಹಿ ಹಾಕುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ಅನರ್ಹರ ಕ್ಷೇತ್ರಗಳಿಗೆ ಕೋಟಿ ಕೋಟಿ ಅನುದಾನ ಬಿಡುಗಡೆಯಾಗುತ್ತಿದೆ. ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಅನುದಾನವನ್ನೇ ರಿಲೀಸ್ ಮಾಡಿಲ್ಲ. ಹೀಗಾದರೆ ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷದ ಶಾಸಕರು ಗೆಲ್ಲೋದು ಹೇಗೆ, ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಸರ್ಕಾರ ಬಂದು 3 ತಿಂಗಳಾದರೂ ನಯಾಪೈಸೆ ಕಾಮಗಾರಿ ನಡೆದಿಲ್ಲ. ಇಡೀ ಸರ್ಕಾರದ ಬಲವನ್ನು ಕೇವಲ ಅನರ್ಹರಿಗೆ ಮೀಸಲಿಡಲಾಗಿದೆ. ಅ.10ರೊಳಗೆ ಅವರ ಕಡತಗಳನ್ನು ಕಡಿಮೆ ಮಾಡಿ. ನಮ್ಮ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಬೇಕು. ನಾವು ನೀಡುವ ವರ್ಗಾವಣೆಯ ಶಿಫಾರಸುಗಳನ್ನು ಮಾನ್ಯ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಐದು ದಿನಗಳ ಒಳಗೆ ಸಮಸ್ಯೆ ಬಗೆಹರಿಸದಿದ್ದರೆ ಅಸಮಾಧಾನಿತರ ಗುಂಪು ಪ್ರತ್ಯೇಕ ಸಭೆ ನಡೆಸುವ ಮೂಲಕ ಬಂಡಾಯವೇಳುವ ಸೂಚನೆ ನೀಡಿದ್ದಾರೆ.

Comments are closed.