
ಶಿವಮೊಗ್ಗ: ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಶಾಲಾ ಮಕ್ಕಳು ನೀರುಪಾಲಾಗಿರುವ ಘಟನೆ ಶಿರಾಳಕೊಪ್ಪ ಎಂಬಲ್ಲಿ ಶನಿವಾರ ಸಂಭವಿಸಿದೆ.
ಬೆಲವಂತನಕೊಪ್ಪ ಗ್ರಾಮದ ನಡುವಲಕಟ್ಟೆ ಕೆರೆಗೆ ಈಜಲು ಹೋಗಿದ್ದ ಶಂಭು(14) ಹಾಗೂ ಉದಯ್ (15) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಆರು ಮಕ್ಕಳು ಶಾಲೆ ಮುಗಿಸಿ ನೇರವಾಗಿ ಕೆರೆಗೆ ಈಜಲು ತೆರಳಿದ್ದರು.ಆರು ಮಕ್ಕಳಲ್ಲಿ ಇಬ್ಬರು ನೀರುಪಾಲಾಗಿದ್ದಾರೆ ಎನ್ನಲಾಗಿದೆ.
ಮಕ್ಕಳಿಗೆ ಕೆರೆಯ ಅಳ ತಿಳಿದಿರದ ಕಾರಣ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಶಿರಾಳಕೊಪ್ಪ ಠಾಣೆಯ ಪೊಲೀಸರು ಭೇಟಿ ನೀಡಿ ,ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Comments are closed.