ಅಂತರಾಷ್ಟ್ರೀಯ

ಈ ಅಧಿಕಾರಿಯ ಮನೆಯಲ್ಲಿ ಸಿಕ್ಕಿದ್ದು 13.5 ಟನ್ ಚಿನ್ನ!

Pinterest LinkedIn Tumblr


ಬೀಜಿಂಗ್: ಕಮ್ಯೂನಿಸ್ಟ್ ದೇಶದಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆ. ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಅಧಿಕಾರಿಯೊಬ್ಬನ ಮನೆ ದಾಳಿ ನಡೆಸಿದಾಗ ಸಿಕ್ಕಿದ್ದು ಬರೋಬ್ಬರಿ 13.5 ಟನ್ ಚಿನ್ನದ ಗಟ್ಟಿಗಳು.

ಭಾರಿ ಚಿನ್ನದ ಗಟ್ಟಿಗಳನ್ನು ನೋಡಿ ಅಧಿಕಾರಿಗಳೇ ಬಿಚ್ಚಿಬಿದ್ದಿದ್ದಾರೆ. ಹೈಕೊನಲ್ಲಿರುವ ಕಮ್ಯುನಿಸ್ಟ್​ ಪಕ್ಷದ ಕಚೇರಿಯಲ್ಲಿ ಕಾರ್ಯದರ್ಶಿಯಾಗಿರುವ ಝಾಂಗ್ ಕಿ ಮನೆ ಮೇಲೆ ಅಧಿಕಾರಿಗಳ ತಂಡ ದಾಳಿ ಮಾಡಿದಾಗ 13.5 ಟನ್ ಚಿನ್ನದ ಗಟ್ಟಿಗಳು ಹಾಗೂ ಸಾವಿರಾರು ಕೋಟಿ ರೂಪಾಯಿ ನಗದು ದೊರಕಿದೆ.

ಇಷ್ಟು ನಗದು, ಚಿನ್ನವನ್ನು ಲೆಕ್ಕ ಹಾಕಿದರೆ ಈತನ ಆಸ್ತಿ 30 ಶತಕೋಟಿ ಪೌಂಡ್​ ಗೂ ಹೆಚ್ಚಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈತ ಭ್ರಷ್ಟಾಚಾರದ ಮೂಲಕ ಚೀನಾದ ಅತ್ಯಂತ ಶ್ರೀಮಂತ ಜಾಕ್ ಮಾ ಅವರ ಆಸ್ತಿಗೂ ಮೀರಿ ಶ್ರೀಮಂತನಾಗಿದ್ದಾನೆ ಎನ್ನಲಾಗಿದೆ.

ಈತನ ಮನೆ ಮೇಲಿನ ದಾಳಿ, ಅಲ್ಲಿ ಪತ್ತೆಯಾಗಿರುವ ಸಂಪತ್ತಿನ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿವೆ. ಝಾಂಗ್​ನನ್ನು ವಶಕ್ಕೆ ಪಡೆದಿರುವ ಪೊಲೀಸರು ಉನ್ನತ ಮಟ್ಟದ ತನಿಖೆ ನಡೆಸುತ್ತಿದ್ದಾರೆ.

Comments are closed.