ಮುಂಬೈ

ಮಾಲೀಕರಿಗೆ ವಂಚಿಸಿ 300 ಕೋಟಿ ಆಸ್ತಿ ಮಾರಿದ ಕೆಲಸಗಾರರು!

Pinterest LinkedIn Tumblr


ಮುಂಬೈ: ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ಪರರ ಭೂಮಿಯನ್ನು ವಂಚಿಸುವುದನ್ನು ನೋಡಿದ್ದೇವೆ. ಮಾಲೀಕನ ಕೈಕೆಳಗೆ ಕೆಲಸ ಮಾಡುತ್ತಿದ್ದ ಕೆಲಸಗಾರರೆ ತಮ್ಮ ಕಂಪನಿಯ 300 ಕೋಟಿ ರೂ. ಬೆಲೆ ಬಾಳುವ ಮಹಲ್ ಅನ್ನು ಮಾರಿರುವ ಘಟನೆ ಹೈದರಾಬಾದಿನಲ್ಲಿ ನಡೆದಿದೆ.

ಮುಂಬೈನ ನಿಹಾರಿಕಾ ಇನ್‍ಫ್ರಾಸ್ಟ್ರಕ್ಚರ್ ಕಂಪನಿ ವಂಚನೆಯ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ತನ್ನ ಹಳೆಯ ಉದ್ಯೋಗಿಗಳ ವಿರುದ್ಧ ದೂರು ದಾಖಲಿಸಿದೆ. ನಿಹಾರಿಕಾ ಇನ್‍ಫ್ರಾಸ್ಟ್ರಕ್ಚರ್ ನವೀ ಮುಂಬೈನ ವಸತಿ ಮತ್ತು ವಾಣಿಜ್ಯ ಸಮುಚ್ಛಯ ನಿರ್ಮಿಸುವ ಕೆಲಸ ಮಾಡುತ್ತಿದೆ.

ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಕಂಪನಿಯ ಮಾಜಿ ಉದ್ಯೋಗಿಗಳಾದ ಸುರೇಶ್ ಮತ್ತು ರವಿಂದ್ರ ಎಂಬವರು ಮಾಲೀಕರಿಗೆ ತಿಳಿಯದಂತೆ ಹೈದರಾಬಾದ್ ನಲ್ಲಿದ್ದ ತಮ್ಮ ಒಡೆತನದ 300 ರೂ ಕೋಟಿ ರೂ. ಆಸ್ತಿಯನ್ನು ಕಾಶ್ಮೀರದ ಐರಿಸ್ ಆಸ್ಪತ್ರೆ ಮಾಲೀಕರಿಗೆ ಮಾರಿದ್ದಾರೆ.

ನಿಹಾರಿಕಾ ಕಂಪನಿಯು ಮೂರು ವರ್ಷಗಳ ಹಿಂದೆ 100 ವರ್ಷಗಳ ಹಳೆಯ ನಝ್ರಿ ಬಾಗ್ ಪ್ಯಾಲೇಸ್ ಅನ್ನು ಸ್ಥಳೀಯ ಟ್ರಸ್ಟ್ ಒಂದರ ಮೂಲಕ ಖರೀದಿಸಲಾಗಿತ್ತು. ಈ ವರ್ಷದ ಜೂನ್ ನಲ್ಲಿ ಸಂಸ್ಥೆಯ ಕೆಲ ಅಧಿಕಾರಿಗಳು ಆಸ್ತಿಗಳ ಪರಿಶೀಲನೆಗಾಗಿ ಹೈದರಾಬಾದ್ ಗೆ ತೆರಳಿದಾಗ ವಂಚನೆಯ ಪ್ರಕರಣ ಬೆಳಕಿಗೆ ಬಂದಿದೆ.

ಇಬ್ಬರು ಉದ್ಯೋಗಿಗಳು 8 ತಿಂಗಳ ಹಿಂದೆಯೇ ಕೆಲಸ ಬಿಟ್ಟಿದ್ದಾರೆ. ಇವರಿಬ್ಬರು ಹೈದರಾಬಾದ್ ಮೂಲದ ವ್ಯಕ್ತಿಯ ಸಹಾಯದಿಂದ ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಮಾರಾಟ ಮಾಡಿದ್ದಾರೆ. 2.5 ಲಕ್ಷ ಚದರ ಅಡಿ ವಿಸ್ತಾರದಲ್ಲಿರುವ ಕೋಟೆ ಇದಾಗಿದ್ದು, ಸ್ವತಂತ್ರಕ್ಕೂ ಮೊದಲು ಇಲ್ಲಿ ಹೈದರಾಬಾದ್ ನಿಜಾಮರು ವಾಸ ಮಾಡುತ್ತಿದ್ದರು.

Comments are closed.