ಕರ್ನಾಟಕ

ನೆರೆ ಪರಿಹಾರ ನೀಡಿದ ಮೋದಿ, ಶಾಗೆ ಅಭಿನಂದನೆ: ಯಡಿಯೂರಪ್ಪ

Pinterest LinkedIn Tumblr


ವಿಜಯಪುರ: ರಾಜ್ಯದಲ್ಲಿ ಪ್ರವಾಹ ನಷ್ಟ ಪರಿಹಾರದ ಕುರಿತು ಸಮೀಕ್ಷೆ‌ ಮುಗಿದಿದೆ. ಅಲ್ಲಲ್ಲಿ ಆಗಿರುವ ಕೆಲ ಲೋಪ ಸರಿಪಡಿಸುವ ಕೆಲಸ ಆಗಬೇಕಿದೆ. ಸಂತ್ರಸ್ತರಿಗೆ ನೆರವು ನೀಡಲು ತಕ್ಷಣ ಅಗತ್ಯ ಅನುದಾನ ಬಿಡುಗಡೆ ಮಾಡಿದ್ದು ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹಣ ಜಮೆ ಇದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.

ನಿಡಗುಂದಿ ತಾಲೂಕಿನ ಕೃಷ್ಣೆಗೆ ಬಾಗಿನ ಅರ್ಪಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರತಿಪಕ್ಷಗಳ ನಾಯಕರು ಸರಕಾರ ನೆರೆ ಸಂತ್ರಸ್ತರಿಗೆ ಪರಿಹಾರ ಕೊಡಲಿಲ್ಲ, ಕೇಂದ್ರ ಸರ್ಕಾರ ನೆರವಿಗೆ ಬರಲಿಲ್ಲ ಎಂದು ಟೀಕೆ ಮಾಡಿದ್ದವು. ಕೇಂದ್ರದಿಂದ ಮಧ್ಯಂತರ ಪರಿಹಾರವಾಗಿ 1200 ಕೋಟಿ ಬಿಡುಗಡೆ ಆಗಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರನ್ನು ರಾಜ್ಯದ ಜನತೆಯ ಪರವಾಗಿ ಅಭಿನಂದಿಸುವುದಾಗಿ ಹೇಳಿದರು.

ನೆರೆ‌ ಪೀಡಿತ ಪ್ರದೇಶಗಳಲ್ಲಿ ನಿನ್ನೆಯಿಂದ ಜಿಲ್ಲಾಡಳಿತಗಳು ಮನೆಗಳ ಹಾನಿ ಸಮೀಕ್ಷೆ ಕೈಗೊಂಡಿವೆ. ಎ-ಬಿ ಕೆಟಗರಿ ಮಾಡಿ, ಪೂರ್ಣ‌ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಕೊಳ್ಳಲು 5 ಲಕ್ಷ ರೂ. ನೆರವು ನೀಡಲಾಗುತಗತಿದ್ದು, ಹಂತ ಹಂತವಾಗಿ ಹಣ ಕೊಡಲಾಗುತ್ತದೆ ಎಂದರು.

ನೆರೆ ಹಾನಿಗೆ ಹೆಚ್ಚಿನ ರೀತಿಯಲ್ಲಿ ಪರಿಹಾರ ಕೈಗೊಳ್ಳಲು ಕೇಂದ್ರದಿಂದ ಹೆಚ್ಚಿನ ನೆರವು ಪಡೆಯಲಾಗುತ್ತದೆ. ಒಂದು ಅಂದಾಜಿನ ಪ್ರಕಾರ ನೆರೆ ನಷ್ಟಕ್ಕಾಗಿ 34 ಸಾವಿರ ಕೋಟಿ ರೂ. ಹಣ ಬೇಕು. ನಮ್ಮ ಅಂದಾಜು ಮಾಡಲಾಗಿದೆ. ದೆಹಲಿಗೆ ಹೋದಾಗ ಪ್ರಧಾನಮಂತ್ರಿ ಗಳು ನನ್ನನ್ನು ಭೇಟಿ ಮಾಡಲಿಲ್ಲ ಎಂಬುದು ಮುಖ್ಯವಲ್ಲ. ನಾವು ಹೇಳಿದ ಕೆಲಸ ಕೇಂದ್ರ ಮಾಡುತ್ತಿದೆ. ಆದರೂ ಅಧಿಕಾರ ಕಳೆದುಕೊಂಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಧಿಕಾರ ಕಳೆದುಕೊಂಡು ಭ್ರಮನಿರಶನರಾಗಿ ಏನೇನೋ ಮಾತಾಡುತ್ತಿದ್ದಾರೆ ಎಂದು ಟೀಕಿಸಿದರು.

Comments are closed.