ಕರ್ನಾಟಕ

ಮಂಡ್ಯ ಮದ್ದೂರು ಬಳಿ ಕೆಎಸ್‌ಆರ್‌ಟಿಸಿಗೆ ಕಾರು ಡಿಕ್ಕಿ: ಒಂದೇ ಕುಟುಂಬದ ನಾಲ್ವರ ಸಾವು

Pinterest LinkedIn Tumblr

ಮಂಡ್ಯ: ಕಾರೊಂದು ಕೆಎಸ್​ಆರ್​ಟಿಸಿ ಬಸ್​ಗೆ ಡಿಕ್ಕಿ ಹೊಡೆದು ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದು, ಇನ್ನೋರ್ವರು ತೀವ್ರ ಗಾಯಗೊಂಡಿದ್ದಾರೆ. ಮದ್ದೂರಿನ ಗೆಜ್ಜಲಗೆರೆ ಸಮೀಪದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಘಟನೆ ನಡೆದಿದೆ.

ಮೃತಪಟ್ಟವವರನ್ನು ಮಂಡ್ಯ ತಾಲೂಕಿನ ಹೆಬ್ಬಕವಾಡಿ ಗ್ರಾಮದ ರವಿ 31 ವರ್ಷ, ಹೆಂಡತಿ ಮಂಜುಳಾ 28 ವರ್ಷ, ಮಗು ಸಾಗರ್ 8 ವರ್ಷ, ಮಗಳು ಸುಕನ್ಯಾ 6 ವರ್ಷ ಎಂದು ಗುರುತಿಸಲಾಗಿದೆ.

ಕಾರು ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿತ್ತು. ಕೆಎಸ್​ಆರ್​ಟಿಸಿ ಬಸ್​ ಬೆಂಗಳೂರು ಕಡೆಗೆ ಹೋಗುತ್ತಿತ್ತು. ಈ ಮಧ್ಯೆ ಅಲ್ಲೊಂದು ಕಾರು ಅಪಘಾತವಾಗಿ ನಿಂತಿತ್ತು. ಅದನ್ನು ತಪ್ಪಿಸಲು ಕಾರು ಚಾಲಕ ಪ್ರಯತ್ನಿಸಿದ್ದಾನೆ. ಆಗ ಸ್ವಿಫ್ಟ್​ ಕಾರು ಡಿವೈಡರ್​ಗೆ ಡಿಕ್ಕಿಯಾಗಿ ಹೆದ್ದಾರಿಯ ಮತ್ತೊಂದು ಕಡೆಗೆ ಹಾರಿದೆ. ಅದೇ ವೇಳೆ ಆಗಮಿಸುತ್ತಿದ್ದ ಬಸ್​ಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.

ಅಪಘಾತದ ಪರಿಣಾಮ ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸ್ಥಳಕ್ಕೆ ಬಂದ ಪೊಲೀಸರು ಸಂಚಾರ ಸುಗಮಗೊಳಿಸಿದರು.

Comments are closed.