ಅಂತರಾಷ್ಟ್ರೀಯ

ಫಿಲಿಫೈನ್ಸ್ ನಲ್ಲಿ ಪ್ರಬಲ ಭೂಕಂಪ: ಮೃತಪಟ್ಟವರ ಸಂಖ್ಯೆ 8 ಕ್ಕೆ ಏರಿಕೆ, 60 ಮಂದಿಗೆ ಗಾಯ

Pinterest LinkedIn Tumblr

ಮನಿಲಾ: ಫಿಲಿಪೈನ್ಸ್‌ನ ಮುಖ್ಯ ಲುಪನ್ ದ್ವೀಪದ ಉತ್ತರದ ಬಟಾನೆಸ್ ಬಳಿ ಶನಿವಾರ ರಾತ್ರಿ ಸಂಭವಿಸಿದ ಅವಳಿ ಭೂಕಂಪನದಲ್ಲಿ ಮೃತಪಟ್ಟವರ ಸಂಖ್ಯೆ 8 ಕ್ಕೆ ಏರಿಕೆಯಾಗಿದೆ ಈ ಘಟನೆಯಲ್ಲಿ ಇತರೆ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶನಿವಾರ ಸಂಭವಿಸಿದ 5.4 ತೀವ್ರತೆಯ ಮೊದಲ ಭೂಕಂಪದಲ್ಲಿ ಐವರು ಸಾವನ್ನಪ್ಪಿದ್ದು, 12 ಮಂದಿಗೆ ಗಾಯಗಳಾಗಿವೆ ಎಂದು ಬಟಾನೆಸ್ ಗವರ್ನರ್ ಮರಿಲೌ ಸೈಕೊ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಕಂಪನದಿಂದ ಚರ್ಚ್ ಮತ್ತು ಇತರ ಮನೆಗಳಿಗೆ ವ್ಯಾಪಕ ಹಾನಿಯಾಗಿದೆ ಎಂದು ಅವರು ಹೇಳಿದರು.

6.4 ತೀವ್ರತೆಯ ಎರಡನೇ ಭೂಕಂಪನ ಇಟ್ಬಯತ್‌ನ ವಾಯುವ್ಯಕ್ಕೆ 19 ಕಿಲೋಮೀಟರ್ ದೂರದಲ್ಲಿ ಸಂಭವಿಸಿದೆ ಎಂದೂ ವರದಿಯಾಗಿದೆ.

Comments are closed.