ಕರಾವಳಿ

ಹೊಟ್ಟೆಯ ಮೇಲೆ ತಣ್ಣೀರಿನ ಬಟ್ಟೆ ಹಾಕಿದ್ದಲ್ಲಿ ಮಲಬದ್ಧತೆ ಸಮಸ್ಯೆಯಿಂದ ಮುಕ್ತಿ

Pinterest LinkedIn Tumblr

ಹೊಟ್ಟೆ ಮೇಲೆ ತಣ್ಣೀರಿನ ಬಟ್ಟೆ ಹಾಕೊಂಡ್ರೆ ಏನೆಲ್ಲಾ ಆಗುತ್ತೆ ಗೊತ್ತಾ, ಆರೋಗ್ಯಕ್ಕೆ ಸಂಬಂಧಿಸದಂತೆ ಹೊಟ್ಟೆ ಮೇಲೆ ತನ್ನೂರು ಬಟ್ಟೆ ಹಾಕಿದ್ರೆ ಎಷ್ಟೆಲ್ಲ ಲಾಭಗಳಿವೆ ಅನ್ನೋದು ಇಲ್ಲಿದೆ ನೋಡಿ.

ತೂಕ ಕಡಿಮೆ ಮಾಡಲು: ಊಟ ಮುಂಚೆ ೧೫ ನಿಮಿಷಗಳ ಕಾಲ ಹೊಟ್ಟೆಗೆ ತಣ್ಣೀರಿನ ಪಟ್ಟಿಯನ್ನು ಹಾಕಿದ್ದಲ್ಲಿ ಹಸಿವು ಕಡಿಮೆಯಾಗು ವುದಲ್ಲದೆ ಸೇವಿಸುವ ಆಹಾರದ ಪ್ರಮಾಣವು ಕಡಿಮೆಯಾಗುವುದು. ಇದರಿಂದ ಅಧಿಕ ಕ್ಯಾಲೊರಿ ಸೇವನೆಯು ನಿಯಂತ್ರಣಕ್ಕೆ ಬಂದು ತೂಕವು ಇಳಿಕೆಯಾಗುತ್ತದೆ.

ಜೀರ್ಣ ಶಕ್ತಿ ಹೆಚ್ಚಾಗಲು: ಖಾಲಿ ಹೊಟ್ಟೆಯ ಮೇಲೆ ತಣ್ಣೇರಿನ ಬಟ್ಟೆಯನ್ನು ಹಾಕಿ ಕಟ್ಟಿದಲ್ಲಿ ಜೀರ್ಣಾಂಗಗಳಿಗೆ ರಕ್ತ ಪರಿಚಲನೆ ಅಧಿಕವಾಗಿ ಅವುಗಳ ಕಾರ್ಯಕ್ಷಮತೆ ಹೆಚ್ಚುತ್ತದೆ. ಜೀರ್ಣರಸವು ಅಧಿಕವಾಗಿ ಸ್ರವಿಸಿ ಸೇವಿಸಿದ ಆಹಾರವು ಸಂಪೂರ್ಣವಾಗಿ ಪಚನವಾಗುತ್ತದೆ.

ಹೊಟ್ಟೆಯ ಬೊಜ್ಜು ಕಡಿಮೆ ಮಾಡಲು: ಏನ್ ಮಾಡಿದ್ರು ಹೊಟ್ಟೆ ಕರಗಿಸಲು ಆಗ್ತಾ ಇಲ್ವಾ? ಹಾಗಿದ್ರೆ ಹೊಟ್ಟೆ ಮೇಲೆ ತಣ್ಣೇರಿನ ಬಟ್ಟೆನ 1 ಗಂಟೆಗಳ ಕಾಲ ಹಾಕಿಡಿ. ಇದರಿಂದ ಅಲ್ಲಿರುವ ಸ್ನಾಯುಗಳು ಸಂಕುಚಿತಗೊಂಡು ಬೊಜ್ಜು ರಕ್ತಗತವಾಗುತ್ತದೆ ಮತ್ತು ಕ್ಯಾಲೊರಿ ಬರ್ನಿಂಗ್ ಅಧಿಕವಾಗಿ ಸಂಗ್ರಹಗೊಂಡ ಬೊಜ್ಜು ಕಡಿಮೆಯಾಗುತ್ತದೆ. ಇದರಿಂದ ಸೊಂಟದ ಮತ್ತು ಹೊಟ್ಟೆಯ ಸುತ್ತಳತೆಯು ಕಡಿಮೆಯಾಗುತ್ತದೆ.

ಮಲಬದ್ಧತೆ ನಿವಾರಣೆಗೆ: ಊಟವಾದ ಎರಡು ಗಂಟೆಗಳ ನಂತರ ಕೆಲ ಹೊಟ್ಟೆಯ ಮೇಲೆ ತಣ್ಣೀರಿನ ಬಟ್ಟೆ ಹಾಕಿದ್ದಲ್ಲಿ ಕರುಳಿನ ಚಾಲನೆ ಅಧಿಕವಾಗಿ ಮಲವಿಸರ್ಜನೆ ಸರಾಗವಾಗಿ ಆಗುತ್ತದೆ. ದಿನವೂ ಇದನ್ನು ಪಾಲಿಸಿದ್ದಲ್ಲಿ ಮಲಬದ್ಧತೆಯಿಂದ ಮುಕ್ತಿಪಡೆಯಬಹುದು.

ನಿದ್ರಾಹೀನತೆಗೆ: ದಿನವೂ ರಾತ್ರಿ ಮಲಗುವ ಮೊದಲು 20 ನಿಮಿಷಗಳ ಕಾಲ ಹೊಟ್ಟೆಯ ಮೇಲೆ ತಣ್ಣೇರಿನ ಪಟ್ಟಿ ಹಾಕಿದ್ದಲ್ಲಿ ದೇಹದ ವಿಶ್ರಾಂತಿ ಕ್ರಿಯೆಯು ಅಧಿಕವಾಗಿ ನಿದ್ರೆಯು ಚೆನ್ನಾಗಿ ಬರುವುದು.

ಕಿಡ್ನಿಯನ್ನು ಉತ್ತೇಜಿಸುವುದು: ಹೊಟ್ಟೆಯ ಮೇಲೆ ತಣ್ಣೀರಿನ ಬಟ್ಟೆ ಹಾಕಿದ್ದಲ್ಲಿ ಮೂತ್ರಕೋಶಗಳಿಗೆ ರಕ್ತ ಸಂಚಾರ ಅಧಿಕವಾಗಿ ಮೂತ್ರ ಹೆಚ್ಚು ಉತ್ಪತ್ತಿಯಾಗುತ್ತದೆ. ಇದರಿಂದ ದೇಹದಲ್ಲಿನ ಕಲ್ಮಶಗಳು ಅಧಿಕವಾಗಿ ಹೊರ ಹಾಕಲ್ಪಡುತ್ತದೆ.

Comments are closed.