ಕರ್ನಾಟಕ

ರೈತರಿಗೆ ಸರ್ಕಾರದಿಂದ ಸಹಾಯಧನ! ಆರಂಭದಲ್ಲೇ ಭರ್ಜರಿ ಕೊಡುಗೆ ನೀಡಿದ ನೂತನ ಸಿಎಂ ಬಿಎಸ್ ವೈ!!

Pinterest LinkedIn Tumblr


ರಾಜ್ಯದ ನೂತನ ಮುಖ್ಯಮಂತ್ರಿ ಯಾಗಿ ಅಧಿಕಾರ ಸ್ವೀಕರಿಸಿದ ಮರುಕ್ಷಣದಲ್ಲೇ ಸರ್ಕಾರ ರೈತರ ಪರವಾಗಿದೆ ಎಂದು ಸಾಬೀತುಪಡಿಸಿದ ಬಿಎಸ್ ವೈ, ರೈತರಿಗೆ ಸಹಾಯಧನ ಹಾಗೂ ನೇಕಾರರ ಸಂಪೂರ್ಣ ಸಾಲಮನ್ನಾ ಘೋಷಿಸಿದ್ದಾರೆ.

ರಾಜಭವನದಲ್ಲಿ ಪ್ರಮಾಣವಚನ ಸ್ವೀಕರಿಸಿ ವಿಧಾನಸೌಧದಲ್ಲಿ ಮೊದಲ ಕ್ಯಾಬಿನೆಟ್ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಬಿಎಸ್ ವೈ ಕೇಂದ್ರದಿಂದ ನೀಡಲಾಗುವ ಕಿಸಾನ್ ಸನ್ಮಾನ್ ಯೋಜನೆಯ ೨ ಸಾವಿರ ರೂಪಾಯಿಗಳಂತೆ ಒಟ್ಟು ೬ ಸಾವಿರ ರೂಪಾಯಿ ಯೋಜನೆಯೊಂದಿಗೆ ರಾಜ್ಯ ಸರ್ಕಾರದ ವತಿಯಿಂದಲೂ ೨ ಎರಡು ಸಾವಿರ ರೂಪಾಯಿಗಳಂತೆ ಒಟ್ಟು ನಾಲ್ಕು ಸಾವಿರ ರೂಪಾಯಿ ಧನಸಹಾಯವನ್ನು ಹೆಚ್ಚುವರಿ ಯಾಗಿ‌ ನೀಡುವುದಾಗಿ ಘೋಷಿಸಿದರು.

ಇದಲ್ಲದೇ ರಾಜ್ಯದ ಇನ್ನೊಂದು ಪ್ರಮುಖ ಶಕ್ತಿಯಾಗಿರುವ ನೇಕಾರ ಸಮುದಾಯಕ್ಕೆ‌ ನೆರವಾಗುವ ನಿಟ್ಟಿನಲ್ಲಿ ಮಾರ್ಚ್ ೩೧ ,೨೦೧೯ ಕ್ಕೆ ಅನ್ವಯವಾಗುವಂತೆ ನೇಕಾರರ ಒಟ್ಟು ೧೦೦ ಕೋಟಿ ರೂಪಾಯಿ ಸಾಲಮನ್ನಾ ಮಾಡುವುದಾಗಿ ಹೇಳಿದ್ದಾರೆ ‌.

ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಜನತೆಗೆ ಹಾಗೂ ವಿಪಕ್ಷಗಳಿಗೆ ಭರವಸೆ ನೀಡಿದ ಬಿಎಸ್ ವೈ, ಸೋಮವಾರ ಮುಂಜಾನೆ ೧೦ ಗಂಟೆಗೆ ವಿಧಾನಮಂಡಳ ಅಧಿವೇಶನ ನಡೆಸಿ ವಿಶ್ವಾಸಮತ ಸಾಬೀತು ಪಡಿಸಿ ಬಳಿಕ ಲೇಖಾನುದಾನ ಅಂಗೀಕರಿಸಲಾಗುವುದು ಎಂದರು.
ಅಲ್ಲದೇ ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂದು ಆರೋಪಿಸಿದ ಯಡಿಯೂರಪ್ಪ ಆಡಳಿತ ಯಂತ್ರಕ್ಕೆ ಚುರುಕು ನೀಡಲು ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದಿದ್ದಾರೆ‌.

ಒಟ್ಟಿನಲ್ಲಿ ನೀರಿಕ್ಷೆಯಂತೆ ನಾಲ್ಕನೇ ಭಾರಿ ಸಿಎಂ ಪಟ್ಟಕ್ಕೆ ಏರಿದ ಬಿಎಸ್ ವೈ ಸರ್ಕಾರ ರೈತ,ಕೃಷಿಕ,ನೇಕಾರ,ಮೀನುಗಾರ ಹೀಗೆ ನಾನಾವರ್ಗದ ಜನರ ಪರವಾಗಿದೆ ಎಂಬ ಭರವಸೆ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ‌.

Comments are closed.