ಕರ್ನಾಟಕ

ಖರ್ಜೂರ ವ್ಯಾಪಾರಿಗಳ ವೇಷ ಧರಿಸಿ ಮನ್ಸೂರ್‌ನನ್ನು ಬಂಧಿಸಿದ ಎಸ್‌ಐಟಿ ಅಧಿಕಾರಿಗಳು..!

Pinterest LinkedIn Tumblr


ಬೆಂಗಳೂರು: ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ರೂವಾರಿ ಮನ್ಸೂರ್ ಖಾನ್, ತಲೆಮರೆಸಿಕೊಂಡು ದುಬೈನಲ್ಲಿ ಅಡಗಿದ್ದ. ಭಾರತಕ್ಕೆ ಬರಲು ಸೂಚಿಸಿದಾಗ, ನಾನು ಟೈಮ್ ಬಂದಾಗ ಬರುತ್ತೇನೆ. ನನಗೆ ಜೀವ ಬೆದರಿಕೆ ಇದೆ ಎಂದಿದ್ದ. ಆದ್ರೆ ಆತನನ್ನು ಕರೆತರಲು ಎಸ್‌ಐಟಿ ಪೊಲೀಸರು ಖರ್ಜೂರ ವ್ಯಾಪಾರಿಗಳಾಗಿ, ದುಬೈಗೆ ತೆರಳಬೇಕಾಯ್ತು.

ಸಾಕಷ್ಟು ಡ್ರೈಫ್ರೂಟ್ಸ್‌ ವ್ಯಾಪಾರಿಗಳನ್ನು ಭೇಟಿಯಾದ ನಂತರ, ಮನ್ಸೂರ್ ಖಾನ್ ದುಬೈನ ಅಲ್ ಬಶೀರ್‌ನಲ್ಲಿರೋದನ್ನ ಖಚಿತಪಡಿಸಿಕೊಂಡಿತ್ತು ಎಸ್‌ಐಟಿ ತಂಡ. ಮನ್ಸೂರ್ ತನ್ನ ಸ್ನೇಹಿತ ಮೊಹಮ್ಮದ್ ಅಬ್ದುಲ್ ಅಪಾರ್ಟ್‌ಮೆಂಟ್‌ನಲ್ಲಿ ಅಡಗಿದ್ದು, ದುಬೈ ನಿವಾಸಿಯೊಬ್ಬರ ಸಹಾಯದಿಂದ ಅಬ್ದುಲ್‌ನನ್ನು ಎಸ್‌ಐಟಿ ಅಧಿಕಾರಿಗಳು ಭೇಟಿಯಾಗಿ, ಹಲವು ಸುತ್ತಿನ ಮಾತುಕತೆ ನಡೆಸಿ, ನಂತರ ಮನ್ಸೂರ್‌ ಖಾನ್‌ನನ್ನು ಭೇಟಿ ಮಾಡಿಸಲು ಅಬ್ದುಲ್ ಒಪ್ಪಿಕೊಂಡಿದ್ದ. ಮೊದಲ ಭೇಟಿಯಲ್ಲೇ ಮನ್ಸೂರ್ ಖಾನ್ ಅಂಡರ್‌ ಕವರ್ ಏಜೆಂಟ್‌ರನ್ನ ಪೊಲೀಸರೆಂದು ಕಂಡುಹಿಡಿದಿದ್ದು, ನಿಮ್ಮೊಂದಿಗೆ ಬರಲು ಸಾಧ್ಯವೇ ಇಲ್ಲ ಎಂದು ಹೇಳಿದ್ದ.

ಆದ್ರೆ ಪಾಸ್ ಪೋರ್ಟ್ ಅಮಾನತ್ತಾಗಿದೆ, ಬೇರೆ ವಿಧಿ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದು, ಕಡೆಗೂ ಭಾರತಕ್ಕೆ ವಾಪಸ್ಸಾಗಲು ಮನ್ಸೂರ್ ಒಪ್ಪಿದ್ದ. ಕೂಡಲೇ ಎಸ್‌ಐಟಿ ಟೀಂ ದುಬೈ ಇಮಿಗ್ರೇಷನ್ ಅಧಿಕಾರಿಗಳನ್ನ ಭೇಟಿ ಮಾಡಿ ಸಹಾಯ ಕೇಳಿತು. ಇಮಿಗ್ರೇಷನ್ ಅಧಿಕಾರಿಗಳು ಭಾರತೀಯ ರಾಯಭಾರಿ ಕಚೇರಿಗೆ ಮಾಹಿತಿ ರವಾನಿಸಿದ್ದರು.

ಕೂಡಲೇ ದುಬೈ ಇಮಿಗ್ರೇಷನ್ ಅಧಿಕಾರಿಗಳನ್ನು ಭೇಟಿ ಮಾಡಿದ ಎಸ್‌ಐಟಿ ಟೀಂ ಅವರ ಸಹಾಯ ಕೇಳಿತ್ತು. ಅಲ್ಲಿನ ಇಮಿಗ್ರೇಷನ್ ಅಧಿಕಾರಿಗಳು ಭಾರತೀಯ ರಾಯಭಾರಿ ಕಚೇರಿಗೆ ಕರೆ ಮಾಡಿ, ಮನ್ಸೂರ್ ಬಗ್ಗೆ ಮಾಹಿತಿ ನೀಡಿದ್ದರು.ಇಡಿ ಅಧಿಕಾರಿಗಳು ಈ ಕೂಡಲೇ ಮನ್ಸೂರ್‌ನನ್ನ ದೆಹಲಿ ಫ್ಲೈಟ್‌ನಲ್ಲಿ ಕಳಿಸುವಂತೆ ಸೂಚನೆ ನೀಡಿದ್ದರು.

ಆದ್ರೆ ಎಸ್‌ಐಟಿ ಟೀಮ್, ದುಬೈ-ಮಂಗಳೂರು ಮೂಲಕ ಬೆಂಗಳೂರಿಗೆ ಕರೆತರುವ ಪ್ಲಾನ್‌ನಲ್ಲಿದ್ದರು. ಇಮಿಗ್ರೇಷನ್ ಅಧಿಕಾರಿಗಳು ಒಪ್ಪದ ಕಾರಣ ಎಸ್ಐಟಿ ಅಧಿಕಾರಿಗಳೂ ಸಹ ದೆಹಲಿ ಫ್ಲೈಟ್‌ನಲ್ಲೇ ವಾಪಸ್ ಆಗಿದ್ದರು.

ವಿಮಾನ ಲ್ಯಾಂಡ್ ಆದ ಮೇಲೆ ಮನ್ಸೂರ್‌ನನ್ನ ಮೊದಲು ಇಳಿಸುವಂತೆ ಪೈಲಟ್‌ಗೆ ಇಮಿಗ್ರೇಷನ್ ಅಧಿಕಾರಿಗಳು ಸೂಚನೆ ನೀಡಿದ್ದರು. ಆದ್ದರಿಂದ ವಿಮಾನ ಸಿಬ್ಬಂದಿ ಕೇವಲ ಮನ್ಸೂರ್‌ನನ್ನು ಇಳಿಸಿ, ಎಸ್‌ಐಟಿ ಅಧಿಕಾರಿಗಳನ್ನು ಇಳಿಯಲು ಬಿಡಲಿಲ್ಲ. ಹೀಗಾಗಿ ತಮ್ಮ ಪ್ರಯತ್ನದಿಂದಲೇ ಮನ್ಸೂರ್ ವಾಪಸ್ಸಾದರೂ ಎಸ್‌ಐಟಿ ಅಧಿಕಾರಿಗಳು ಬರಿಗೈಲಿ ವಾಪಸ್ ಬರಬೇಕಾ

Comments are closed.