ಕರ್ನಾಟಕ

ಸರಕಾರ ಉಳಿಬಾರದು, ಉರುಳಬೇಕು: ಕಾಂಗ್ರೆಸ್ ಮುಖಂಡ ಕೆ.ಎನ್​ ರಾಜಣ್ಣ

Pinterest LinkedIn Tumblr

ತುಮಕೂರು: ಶಾಸನ ಸಭೆಯಲ್ಲಿ ಮಾತನಾಡೋದು ಶಾಸಕರ ಹಕ್ಕು, ಹಾಗಂತ ಸುಖಾಸುಮ್ಮನೆ ಕಾಲಹರಣ ಮಾಡಬಾರದು ಎಂದು ಕಾಂಗ್ರೆಸ್​​ ಮಾಜಿ ಶಾಸಕ ಕೆ.ಎನ್​ ರಾಜಣ್ಣ ಅವರು ಹೇಳಿದರು.

ತುಮಕೂರಲ್ಲಿ ಶನಿವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ಈಗ ಶಾಸಕರು ಮಾಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ ತರುವಂತಹದ್ದು, ಸರ್ಕಾರ ಉಳಿಬಾರದು, ಸರ್ಕಾರ ಉರುಳಬೇಕು ಅನ್ನೋದು ನನ್ನ ಅಭಿಪ್ರಾಯ ಎಂದು ಅವರು ತಿಳಿಸಿದರು.

ಇನ್ನು ಮೈತ್ರಿ ಮಾಡಿಕೊಂಡು ನಾವು ನೆಲಕಚ್ಚಿದ್ದೇವೆ. ಈಗಿರುವಾಗ ಸಿಎಂ ಕುಮಾರಸ್ವಾಮಿ ಅವರನ್ನು ಸಮರ್ಥಿಸಿಕೊಳ್ಳುವ ನಮ್ಮವರಿಗೆ ಬುದ್ದಿ ಇಲ್ಲ, ಬಿಜೆಪಿ ಅವರಿಗೆ ಬೈದರೇ ಮಾತ್ರ ಮುಸ್ಲಿಂರು ಕಾಂಗ್ರೆಸ್​​ಗೆ ವೋಟ್ ಹಾಕೋದು, ಹಾಗಾಗಿ ಕಾಂಗ್ರೆಸ್-ಜೆಡಿಎಸ್ ಜಗಳ ಇದಾಗಿದ್ರೂ ಬಿಜೆಪಿಗೆ ಬೈಯೋದು ಎಂದು ಅವರು ನುಡಿದರು.

ಸದ್ಯ ಯಾವುದೇ ಕಾರಣಕ್ಕೂ ಬಹುಮತ ಬರಲ್ಲ, ಕಾಂಗ್ರೆಸ್​ನ ಒಂದಿಬ್ಬರು ಶಾಸಕರು ಮತ್ತು ದೇವೇಗೌಡರ ಕುಟುಂಬದವರಿಗೆ ಮಾತ್ರ ಈ ಸರ್ಕಾರ ಬೇಕಾಗಿದೆ. ಇನ್ನೂ ಕೆಲವು ದೋಸ್ತಿ ಶಾಸಕರು ರಾಜೀನಾಮೆ ನೀಡಲಿದ್ದಾರೆ. ಹೆಸರು ಹೇಳಿದರೆ ಅವರು ಅಲರ್ಟ್​​ ಆಗುತ್ತಾರೆ, ಹಾಗಾಗಿ ಅವರ ಹೆಸರು ಹೇಳಲ್ಲ ಎಂದು ಅವರು ಹೇಳಿದ್ದಾರೆ.

ಅಷ್ಟೇ ಅಲ್ಲದೇ 1989ರಲ್ಲಿ 20 ಜನ ಶಾಸಕರಿಗೆ ರಾಜೀನಾಮೆ ಕೊಡಿಸಿ ದೇವೇಗೌಡರು ಎಸ್.ಆರ್ ಬೊಮ್ಮಯಿ ಸರ್ಕಾರ ಉರುಳಿಸಿದರು. ಆಗ ದೇವೇಗೌಡರಿಗೆ ಪ್ರಜಾಪ್ರಭುತ್ವದ ಕಗ್ಗೊಲೆ ಆಗಿರಲಿಲ್ಲ, ಇವತ್ತು ಪ್ರಜಾಪ್ರಭುತ್ವದ ಕಗ್ಗೊಲೆ ಅಂತಾರೆ ಎಂದು ಮಧುಗಿರಿ ಕ್ಷೇತ್ರದ ಮಾಜಿ ಕಾಂಗ್ರೆಸ್​ ಶಾಸಕ ಕೆ.ಎನ್​ ರಾಜಣ್ಣ ಅವರು ಮಾತನಾಡಿದ್ದಾರೆ.

Comments are closed.