ದಪ್ಪಗಿರುವ ಇರುವ ಮಹಿಳೆ ಸ್ವರ್ಗಕ್ಕೆ ಹೋಗಲ್ಲ ಎಂದ ಫಾದರ್ ನನ್ನು ಮಹಿಳೆಯೊಬ್ಬಳು ವೇದಿಕೆಯಿಂದ ಕೆಳಗೆ ತಳ್ಳಿದ ಘಟನೆಯೊಂದು ಬ್ರೆಜಿಲ್‍ನಲ್ಲಿ ನಡೆದಿದೆ.ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದ್ದು, 94 ಲಕ್ಷಕ್ಕೂ ಹೆಚ್ಚು ವ್ಯೂ ಪಡೆದುಕೊಂಡಿದೆ.
ಹೌದು , ಬ್ರೆಜಿಲ್‍ನ ಕಾರ್ಯಕ್ರಮಯೊಂದರಲ್ಲಿ ಮಾತನಾಡುತ್ತಿದ್ದ ಫಾದರ್ ಒಬ್ಬರು, ದಪ್ಪಗಿರುವ ಮಹಿಳೆಯರು ಸ್ವರ್ಗಕ್ಕೆ ಹೋಗಲ್ಲ ಎಂದು ಬೋಧಿಸುತ್ತಿದ್ದರು. ಈ ವೇಳೆ ರೊಚ್ಚಿಗೆದ್ದ ಮಹಿಳೆಯೊಬ್ಬರು ಪಾದ್ರಿ ಮಾರ್ಸೆಲ್ಲೋ ರೊಸ್ಸಿ ಅವರನ್ನು ವೇದಿಕೆಯಿಂದ ತಳ್ಳಿದ್ದಾರೆ. 32 ವರ್ಷದ ಮಹಿಳೆ ಯುವ ಶಿಬಿರದಲ್ಲಿ ಭಾಗವಹಿಸಲು ರಿಯೋ ಡಿ ಜನೈರೊದಿಂದ ಬಂದಿದ್ದಳು. ಮಹಿಳೆ ಮಾನಸಿಕ ಅಸ್ವಸ್ಥೆ ಎಂದು ಹೇಳಲಾಗುತ್ತಿದೆ. ಸದ್ಯ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನು ವೇದಿಕೆಯಿಂದ ಬಿದ್ದ ದ್ರಿ ಗಂಭೀರವಾಗಿ ಗಾಯಗೊಂಡಿಲ್ಲ ಎಂದು ವರದಿಯಾಗಿದೆ.ಪಾದ್ರಿ ತಮ್ಮ ಧರ್ಮೋಪದೇಶವನ್ನು ಪೂರ್ಣಗೊಳಿಸಲು ಮತ್ತೆ ವೇದಿಕೆಗೆ ಮರಳಿದರು. ವೇದಿಕೆಗೆ ಮರಳಿದ ನಂತರ ಪಾದ್ರಿ ಮಹಿಳೆಯ ಹಲ್ಲೆ ಬಗ್ಗೆ ತಮ್ಮ ಧರ್ಮೋಪದೇಶದಲ್ಲಿ ಉಲ್ಲೆಖಿಸಿದ್ದರು. ಇದು ನನಗೆ ನೋವುಂಟು ಮಾಡಿದೆ ಎಂದು ಫಾದರ್ ಹೇಳಿದ್ದಾರೆ.
ಇನ್ನು ಈ ಉದ್ದೇಶ ಪೂರಕವಾಗಿ ಮಾಡಿದ್ದಳ ಇಲ್ಲ ನಿಜವಾಗಿಯೂ ಮಾನಸಿಕ ಮಹಿಳೆ ಮಾನಸಿಕ ಅಸ್ವಸ್ಥೆಳ ಎಂದು ಸಂದೇಹ ಉಂಟಾಗಿದೆ.ಈ ರೀತಿ ಮಾಡಿ ಇರುವುದರಿಂದ ನೇರಪ್ರಸಾರದ ವೇಳೆಯಲ್ಲಿ ನೇರೆದಿದ್ದ ಜನರಿಗೆ ನಗು ತಂದಿದೆ ಎನ್ನಲಾಗಿದೆ.
Comments are closed.