ಕರ್ನಾಟಕ

‘ಕುಮಾರಸ್ವಾಮಿ ಇಂದಿನ ಪರಿಸ್ಥಿತಿಗೆ ನಾನೇ ಪರೋಕ್ಷ ಕಾರಣ’

Pinterest LinkedIn Tumblr

0
ಮೈಸೂರು: ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಸಾ.ರಾ.ಮಹೇಶ್, ವಿಶ್ವನಾಥ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಾನು 30ವರ್ಷಗಳ ರಾಜಕೀಯ ಇತಿಹಾಸದಲ್ಲಿ ಯಾರ ಬಗ್ಗೇನೂ ವೈಕ್ತಿಕವಾಗಿ ಟೀಕೆ ಮಾಡಿಲ್ಲ. ನಾನು ಪುರಸಭೆಯಲ್ಲಿ ಆರು ಜನರಿಗೆ ಟಿಕೆಟ್ ಕೊಟ್ಟಿದ್ದೆ. ಒಂದು ವೇಳೆ ನಾನು ಅವರಿಗೆ ವಿರುದ್ಧವಾಗಿ ನಡೆದಿದ್ದರೆ, ಪಕ್ಷದ ಮುಖಂಡರ ಜತೆ ಚರ್ಚೆ ಮಾಡಬಹುದಿತ್ತು. ಅದು ಬಿಟ್ಟು ಅವರು ಆಪರೇಷನ್ ಕಮಲಕ್ಕೆ ಒಳಗಾಗಲು ನಾನೇ ಕಾರಣ ಅಂತ ಹೇಳಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಮೊನ್ನೆ ನಾನು ಆಕಸ್ಮಿಕವಾಗಿ ಬಿಜೆಪಿಯ ಗೆಳೆಯರನ್ನ ಭೇಟಿ ಮಾಡಿದ್ದಕ್ಕೆ, ನನ್ನ ಬಗ್ಗೆ ಅವನು ಬಿಜೆಪಿ ಹಳೆಗಿರಾಕಿ ಅಂತ ಹೇಳಿದ್ದಾರೆ. ಇವತ್ತು ಕುಮಾರಸ್ವಾಮಿ ಈ ಪರಿಸ್ಥಿತಿಗೆ ಪರೋಕ್ಷವಾಗಿ ನಾನೇ ಕಾರಣ. ಅವತ್ತು ಅವರನ್ನ ನಮ್ಮ ಪಕ್ಷಕ್ಕೆ ಕರೆತರಲು ಜಿಟಿ ದೇವೇಗೌಡರಿಗೆ ಇಷ್ಟವಿರಲಿಲ್ಲ.

ಹುಣಸೂರಿನಲ್ಲಿ ಜಿ.ಟಿ ದೇವೇಗೌಡರ ಮಗ ಹರೀಶ್ ಗೌಡ, ಅಥವಾ ಪ್ರಜ್ವಲ್ ರೇವಣ್ಣ ಅಭ್ಯರ್ಥಿ ಆಗ್ತಿದ್ರು. ಆದ್ರೆ ನಮ್ಮ ಪಕ್ಷದ ಹಿರಿಯರಾದ ಪುಟ್ಟರಾಜು ಅವರು ನನಗೆ ಹೇಳಿದ್ದರು. ಹೆಚ್ ವಿಶ್ವನಾಥ್ ಜೆಡಿಎಸ್‌ಗೆ ಬರ್ತಾರೆ ಅಂತ. ನಾನು ಈ ಬಗ್ಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರ ಜೊತೆ ಮಾತನಾಡಿ ಕರೆದುಕೊಂಡು ಬಂದೆ. ಅದಕ್ಕೆ ಇವತ್ತು ನಮ್ಮ ಪಕ್ಷಕ್ಕೆ ಈ ಗತಿ ಬಂತು ಎಂದು ಸುದ್ದಿಗೋಷ್ಠಿ ವೇಳೆ ಬೇಸರ ವ್ಯಕ್ತಪಡಿಸಿದ್ದಾರೆ.

Comments are closed.