ಕರ್ನಾಟಕ

ಪ್ರಯಾಣಿಕರಿಗೆ ಸಿಹಿ ಸುದ್ದಿ​​- ಕಡಿಮೆ ದರ ವೇಗದ ರೈಲು ಸೌಲಭ್ಯ

Pinterest LinkedIn Tumblr


ಮೈಸೂರು: ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್. ಈ ಮಾರ್ಗಕ್ಕೆ ಹೊಸದೊಂದು ರೈಲು ಸೇರ್ಪಡೆಯಾಗಿದ್ದು, ಸಿಲಿಕಾನ್​ ಸಿಟಿಯಿಂದ ಸಾಂಸ್ಕೃತಿಕ ನಗರಿಗೆ ರವಿವಾರ ಹೊರತುಪಡಿಸಿ ಉಳಿದ ಆರು ದಿನಗಳು ಈ ಸೇವೆ ಲಭ್ಯವಿರಲಿದೆ.

ನಿನ್ನೆಯೇ ಘೋಷಿಸಬೇಕೆಂದು ಯೋಚಿಸಿದ್ದೆ, ಆರ್ಡರ್ ಕಾಪಿ ಸಿಗೋದು ಲೇಟ್ ಆಯಿತು. ಇನ್ನು ಮುಂದೆ ಮೆಮು ರೈಲು ಬೆಂಗಳೂರಿಂದ ಸಂಜೆ 5.20 ಕ್ಕೆ ಹೊರಟು ಮೈಸೂರಿಗೆ 8ಕ್ಕೆ ಬರುತ್ತದೆ, ಪುನಃ 8.30ಕ್ಕೆ ಹೊರಟು ರಾತ್ರಿ 11ಕ್ಕೆ ತಲುಪಲಿದೆ. ಸೋಮವಾರದಿಂದ ಶನಿವಾರದವರೆಗೆ ಈ ಸೇವೆ ಲಭ್ಯ! ಬರೀ 30 ರೂಪಾಯಿ!! ಇನ್ನೊಂದು ಘೋಷಣೆಯಿದೆ, ವಾರ ಕಾಯಿರಿ!! pic.twitter.com/dVwxPAkJLz

ಬೆಂಗಳೂರಿಂದ ಸಂಜೆ 5.20ಕ್ಕೆ ಈ ರೈಲು ಹೊರಟು ಮೈಸೂರಿಗೆ 8ಕ್ಕೆ ತಲುಪುತ್ತದೆ. ಮತ್ತೆ 8:30ಕ್ಕೆ ಹೊರಟು ರಾತ್ರಿ 11ಕ್ಕೆ ಬರುತ್ತದೆ. 149 ಕಿ.ಮೀ ದೂರವನ್ನು ಕೇವಲ 2:40 ನಿಮಿಷದಲ್ಲಿ ಮುಟ್ಟಲಿದೆ. ಇನ್ನು ರೈಲಿನ ಪ್ರಯಾಣ ದರ ಕೇವಲ 30ರೂ. ನಿಗದಿ ಮಾಡಲಾಗಿದೆ. ಈ ವಿಷಯವನ್ನು ಮೈಸೂರು-ಕೊಡುಗು ಬಿಜೆಪಿ ಸಂಸದ ಪ್ರತಾಪ ಸಿಂಹ ತಮ್ಮ ಅಧಿಕೃತ ಟ್ವಿಟರ್​ ಖಾತೆಯ ಮೂಲಕ ಬಹಿರಂಗಪಡಿಸಿದ್ದಾರೆ.

ಸದ್ಯ ಈ ಉಗಿಬಂಡಿಗೆ’ ಮೆಮು’ ಎಂಬ ಹೆಸರಿಟ್ಟಿದ್ದು ಇದರಲ್ಲಿ ಪ್ರಯಾಣಿಕರಿಗೆ ಬೇಕಾದ ಅಲ್ಲ ಹೊಸ ಅನುಕೂಲಗಳು ಲಭ್ಯವಿರಲಿದೆ. ಅಷ್ಟೇ ಅಲ್ಲದೇ ಇದರ ಬೆನ್ನಲ್ಲೆ ಮತ್ತೊಂದು ಹೊಸ ಯೋಜನೆ ಘೋಷಣೆಯನ್ನು ಮುಂದಿವಾರ ರಿವೀಲ್ ಮಾಡುವುದಾಗಿ ಸಂಸದ ಪ್ರತಾಪ್​ ಸಿಂಹ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Comments are closed.