ಕರ್ನಾಟಕ

ಡಿಕೆಶಿ ಕ್ಷಮೆ ಕೇಳಬೇಕು- ಯಡಿಯೂರಪ್ಪ

Pinterest LinkedIn Tumblr


ಬೆಂಗಳೂರು: ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀಮಂತ್ ಪಾಟೀಲ್ ತಾನು ಕ್ಷೇಮವಾಗಿದ್ದೇನೆ ಎಂದಿದ್ದಾರೆ. ಈ ಬಗ್ಗೆ ಸದನದಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಗದ್ದಲ ಎಬ್ಬಿಸಿದ್ದರು, ಹೀಗಾಗಿ ಅವರು ಕ್ಷೆಮೆ ಕೇಳಬೇಕು ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರಿನ ಯಲಹಂಕ ರಮಡ ರೆಸಾರ್ಟ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ಮುಂಬೈನಲ್ಲಿದ್ದಾರೆ. ಅವರ ಬಳಿ ಪೊಲೀಸರು ಮಾತಾಡಿ ವಾಪಸ್ ಬಂದಿದ್ದಾರೆ ಹೀಗಾಗಿ ಡಿ.ಕೆ ಶಿವಕುಮಾರ್ ಕ್ಷಮೆ ಕೇಳಬೇಕು ಎಂದು ಯಡಿಯೂರಪ್ಪ ಆಗ್ರಹ ಮಾಡಿದ್ದಾರೆ.

ವಿಪ್ ಉಲ್ಲಂಘನೆಯಾಗಿಲ್ಲ, ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ರಾಜ್ಯದ ಹೊರಗಿರುವ ಶಾಸಕರು ಸದನಕ್ಕೆ ಬರಬಹುದು, ಬಿಡಬಹುದು ಅವರ ಇಷ್ಟ ಎಂದಿದೆ ಎಂದು ತಿಳಿಸಿದರು.

ಕೋಲಾರ ಶಾಸಕ ಶ್ರೀನಿವಾಸ್ ಗೌಡ ದುರುದ್ದೇಶದಿಂದ 5 ಕೋಟಿ ಹಣ ನೀಡಿದ್ದಾರೆ ಎಂದು ಆರೋಪ ಮಾಡಿದ್ದಾರೆ ಇದು ಶುದ್ಧ ಸುಳ್ಳು, ಅಷ್ಟು ಹಣವನ್ನು ಸ್ವೀಕರಿಸುವುದು ತಪ್ಪು, ಅಷ್ಟೊಂದು ದಿನ ಹಣ ತಮ್ಮ ಬಳಿ ಇಟ್ಟುಕೊಂಡಿದ್ದು ಮತ್ತೆ ದೊಡ್ಡ ತಪ್ಪು, ಈ ನಿಟ್ಟಿನಲ್ಲಿ ಯಲಹಂಕ ಶಾಸಕ ಎಸ್. ಆರ್. ವಿಶ್ವನಾಥ್ ಹಕ್ಕುಚ್ಯುತಿಮಂಡನೆಗೆ ಅವಕಾಶ ಕೇಳಿದ್ದಾರೆ. ಹಾಗೆಯೇ ಹೆಚ್. ವಿಶ್ವನಾಥ್ ಬಗ್ಗೆ ಸಾ.ರಾ.ಮಹೇಶ್ ಬಗೆಗಿನ ಕೋಟ್ಯಾಂತರ ಹಣಕಾಸಿನ ವ್ಯವಹಾರ ಆರೋಪ ಕೂಡ ಸುಳ್ಳು ಎಂದರು.

ಸಮ್ಮಿಶ್ರ ಸರ್ಕಾರ ರಾಜಕೀಯ ದೊಂಬರಾಟ ಮಾಡ್ತಿದೆ. ಇನ್ನೆಷ್ಟು ದಿನ ಈ ಪ್ರಹಸನ ನಡೆಯುತ್ತೆ ..!?ಸೋಮವಾರ ವಿಶ್ವಾಸ ಮತಯಾಚನೆ ಮಾಡಲಿದ್ದಾರೆ. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಎಲ್ಲರೂ ವಿಶ್ವಾಸ ಮತ ಯಾಚನೆಗೆ ಭರವಸೆ ನೀಡಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಯಡಿಯೂರಪ್ಪ ಸ್ಪಷ್ಟನೆ ನೀಡಿದರು.

Comments are closed.