ರಾಷ್ಟ್ರೀಯ

ವರದಕ್ಷಿಣೆಗಾಗಿ ಹೆಂಡತಿಗೆ ಕಿರುಕುಳ! ಪತ್ನಿ ಮೇಲೆ ಕಣ್ಣಿಡಲು ಈತ ಮಾಡಿದ್ದೇನು ಗೊತ್ತಾ?!

Pinterest LinkedIn Tumblr


ವರದಕ್ಷಿಣೆ ಈ ಸಮಾಜವನ್ನು ತಲೆತಲಾಂತರದಿಂದಲೂ ಕಾಡುತ್ತಿರುವ ಸಮಸ್ಯೆ. ಇದಕ್ಕೆ ಪತ್ನಿಯನ್ನು ಹೊಡೆಯೋದು, ಬಡಿಯೋದು, ಕೊಲೆ ಮಾಡೋದನ್ನು ನೋಡಿರ್ತೀರಾ. ಆದರೆ ಇದೀಗ ಪತಿಯೊಬ್ಬ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡೋದರ ಜೊತೆಗೆ ಆಕೆಯ ಚಲನವಲನದ ಮೇಲೆ ನಿಗಾ ಇಡೋಕೆ ಮನೆತುಂಬ ಸಿಸಿಟಿವಿ ಅಳವಡಿಸಿ ವಿಕೃತಿ ಮೆರೆದಿದ್ದಾನೆ.

ಹೌದು ತ್ರಿಪುರಾದಲ್ಲಿ ಇಂತಹದೊಂದು ಅಸಹ್ಯದ ಕೃತ್ಯ ಎಸಗಿರುವ ಪತಿ ಸುದ್ದಿಯಾಗಿದ್ದಾನೆ. ತ್ರಿಪುರಾದ ಚಂದನ್ ಕಾಂತಿಧರ್ ಎಂಬಾತ ಮೂರು ವರ್ಷಗಳ ಹಿಂದೆ ರತ್ನಾರನ್ನು ಮದುವೆಯಾಗಿದ್ದ. ಆದರೆ ಮದುವೆ ಬಳಿಕ ಚಂದನ್​ ಕುಟುಂಬದವರ ಜೊತೆ ಸೇರಿ ರತ್ನಾಗೆ ಕಿರುಕುಳ ನೀಡುತ್ತಿದ್ದಾನೆ.

ಮದುವೆ ಸಮಯದಲ್ಲಿ ವರದಕ್ಷಿಣೆಯನ್ನು ನಿರಾಕರಿಸಿದ್ದ ಈತ ಮದುವೆಯಾದ ಕೆಲ ತಿಂಗಳುಗಳ ನಂತರ ವರದಕ್ಷಿಣೆ ಹಣವಾಗಿ ತನ್ನ ತವರಿನಿಂದ ಎರಡು ಲಕ್ಷ ರೂಪಾಯಿಗಳನ್ನು ರತ್ನಾಗೆ ಒತ್ತಾಯಿಸಿದ್ದಾನೆ. ಅಷ್ಟೇ ಅಲ್ಲ ಪತ್ನಿ ಮೇಲೆ ಅನುಮಾನ ಹೊಂದಿರುವ ಈತ ಮನೆಯ ಟಾಯ್ಲೆಟ್​, ಬಾತ್​ರೂಂ ಬೆಡ್​ ರೂಂ ಹೀಗೆ ಎಲ್ಲೆಡೆಯೂ ಸಿಸಿಟಿವಿ ಅಳವಡಿಸಿದ್ದಾನೆ.

ಇಷ್ಟೇ ಅಲ್ಲ, ಮನೆಯ ಮೇನ್ ಎಂಟ್ರನ್ಸ್, ಕಾರಿಡಾರ್, ಅತ್ತೆ ರೂಮ್, ಹಾಗು ತಮ್ಮ ಬೆಡ್ ರೂಮ್ ನಲ್ಲಿ ಸಿಸಿಟಿವಿ ಅಳವಡಿಸಿದ್ದಾರೆ, ಇದರ ಮಾನಿಟರ ಅತ್ತೆಯ ರೂಮ್ ನಲ್ಲಿದೆ ಎಂದು ರತ್ನಾ ಆರೋಪಿಸಿದ್ದಾಳೆ. ಅಷ್ಟೇ ಅಲ್ಲ ಇದರಿಂದ ಬದುಕುವುದೇ ದುಸ್ತರವಾಗಿದ್ದು, ತನಗೆ ನ್ಯಾಯದೊರಕಿಸಬೇಕೆಂದು ರತ್ನಾ ಪೊಲೀಸರು ಹಾಗೂ ಮಹಿಳಾ ಆಯೋಗದ ಮೊರೆ ಹೋಗಿದ್ದಾರೆ.

Comments are closed.