ಕರ್ನಾಟಕ

ರಾಷ್ಟ್ರಪತಿ ಅಂಗಳದಲ್ಲಿ ರಾಜ್ಯದ ಭವಿಷ್ಯ!!

Pinterest LinkedIn Tumblr


ಈಗಾಗಲೇ ವಿಶ್ವಾಸಮತ ಸಾಬೀತುಪಡಿಸಲು ಸರ್ಕಸ್​ ನಡೆಸುತ್ತಿರುವ ದೋಸ್ತಿ ಸರ್ಕಾರಕ್ಕೆ ರಾಜ್ಯಪಾಲರು ಮತ್ತೊಂದು ಶಾಕ್​ ನೀಡಿದ್ದಾರೆ. ತಮ್ಮ ಎರಡೆರಡು ಸೂಚನೆಗೂ ಕ್ಯಾರೇ ಎನ್ನದ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಗೌರ್ವನರ್​ ಕೇಂದ್ರ ರಿಪೋರ್ಟ್​ ರವಾನಿಸಿದ್ದು, ರಾಜ್ಯದ ಸ್ಥಿತಿಗತಿಯ ಚಿತ್ರಣ ನೀಡಿದ್ದಾರೆ.

ಹೌದು ವಿಶ್ವಾಸಮತ ಯಾಚನೆ ಪ್ರಕ್ರಿಯೆಯಲ್ಲಿ ವಿನಾಕಾರಣ ವಿಳಂಬ ಧೋರಣೆ ಅನುಸರಿಸುತ್ತಿರುವ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರಾದ ವಜೂಬಾಯಿ ವಾಲಾ ಎರಡೆರಡು ಬಾರಿ ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದರು. ಆದರೆ ಸರ್ಕಾರ ಅದಕ್ಕೆ ಸ್ಪಂದಿಸದೇ ಇನ್ನು ಕೂಡ ವಿಶ್ವಾಸಮತ ಪ್ರಕ್ರಿಯೆಯನ್ನು ಮುಗಿಸದೇ ಸೋಮವಾರಕ್ಕೆ ಮುಂದೂಡಿದೆ.

ಹೀಗಾಗಿ ರಾಜ್ಯ ಸರ್ಕಾರದ ವರ್ತನೆ ವಿರುದ್ಧ ಗರಂ ಆಗಿರುವ ರಾಜ್ಯಪಾಲರು, ಕೇಂದ್ರ ಸರ್ಕಾರಕ್ಕೆ ಖಡಕ್ ವರದಿ ರವಾನಿಸಿದ್ದಾರೆ. ಸಂವಿಧಾನದಂತೆ ಸರ್ಕಾರ ನಡೆಯುತ್ತಿಲ್ಲ ಎಂದು ಉಲ್ಲೇಖಿಸಿದ್ದಾರೆ. ಅಲ್ಲದೇ ಒಂದು ವಾರದಿಂದ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳ ಮಾಹಿತಿಯನ್ನುರವಾನಿಸಿದೆ. ಈಗಾಗಲೇ ವರದಿ ರಾಷ್ಟ್ರಪತಿ ಹಾಗೂ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಕೈಸೇರಿದೆ. ಹೀಗಾಗಿ ರಾಜ್ಯ ಸರ್ಕಾರದ ಬಗ್ಗೆ ಕೇಂದ್ರ ಸರ್ಕಾರ ಸಧ್ಯದಲ್ಲೇ ಮಹತ್ವದ ನಿರ್ಧಾರ ಕೈಗೊಳ್ಳಲಿದೆ ಎಂದು ನೀರಿಕ್ಷಿಸಲಾಗುತ್ತಿದೆ.

Comments are closed.