ಕರ್ನಾಟಕ

ವಿಶ್ವಾಸಮತ ಸಾಬೀತು ಕುರಿತು ಶಾಸಕ ಸಿ.ಎನ್ ಬಾಲಕೃಷ್ಣ ಹೇಳಿದ್ದು ನಿಜವಾಗುತ್ತದೆಯೇ?

Pinterest LinkedIn Tumblr


ಬೆಂಗಳೂರು: ಸೋಮವಾರ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ವಿಶ್ವಾಸ ಮತ ಸಾಬೀತುಪಡಿಸುತ್ತಾರೆ ಇದರಲ್ಲಿ ಯಾರಿಗೂ ಯಾವುದೇ ಅನುಮಾನ ಬೇಡ ಎಂದು ಶ್ರವಣಬೆಳಗೊಳ ಶಾಸಕ ಬಾಲಕೃಷ್ಣ ಅವರು ಶನಿವಾರ ಹೇಳಿದರು.

ನಗರದಲ್ಲಿ ಸಿಎಂ ಭೇಟಿ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ಅವರು ಅತ್ಯಂತ ಆತ್ಮವಿಶ್ವಾಸದಿಂದ ಇದ್ದಾರೆ ಸರ್ಕಾರ ಉರುಳಿಸೋ ಬಿಜೆಪಿಯ ವಾಮಾ ಮಾರ್ಗ ಯಶಸ್ವಿ ಆಗೋದಿಲ್ಲ, ಮುಂಬೈಯಲ್ಲಿರೋ ಶಾಸಕರನ್ನು ಮನವೊಲಿಸೋ ಪ್ರಯತ್ನ ನಡೆಯುತ್ತಿದೆ ಎಂದರು.

ಇನ್ನು ಪಕ್ಷದ ನಾಯಕರು ದೂರವಾಣಿ ಮೂಲಕ ಸಂಪರ್ಕಿಸೋ ಪ್ರಯತ್ನ ಮಾಡುತ್ತಿದ್ದಾರೆ. ಆ ಶಾಸಕರು ಕೂಡ ಸೋಮವಾರ ಸದನಕ್ಕೆ ಬರೋ ನಂಬಿಕೆಯಿದ್ದು, ಸಿಎಂ ಮುಂಬೈಗೆ ಹೋಗೋ ಬಗ್ಗೆ ನನಗೆ ಮಾಹಿತಿ ಇಲ್ಲ, ಆದರೆ, ಬೇರೆ ನಾಯಕರು ಮತ್ತೆ ಮುಂಬೈ ಗೆ ಅತೃಪ್ತರನ್ನು ಕರೆತರಲು ಹೋಗಬಹುದು ಎಂದು ಶ್ರಾವಣಬೆಳಗೊಳ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎನ್​ ಬಾಲಕೃಷ್ಣ ಅವರು ಪ್ರತಿಕ್ರಿಯೆ ನೀಡಿದ್ದಾರೆ.

Comments are closed.