ರಾಷ್ಟ್ರೀಯ

ಶೀಲಾ ದೀಕ್ಷಿತ್​ ನಿಧನಕ್ಕೆ ಪ್ರಧಾನಿ ಒಳಗೊಂಡು ಹಲವು ರಾಜಕೀಯ ಗಣ್ಯರಿಂದ ಸಂತಾಪ

Pinterest LinkedIn Tumblr


ನವದೆಹಲಿ: ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್​ನ ಹಿರಿಯ ನಾಯಕಿ ಶೀಲಾ ದೀಕ್ಷಿತ್ ಅವರು (81) ದೆಹಲಿ ಆಸ್ಪತ್ರೆಯಲ್ಲಿ ಹೃದಯಾಘತದಿಂದಾಗಿ ಶನಿವಾರ ವಿಧಿವಶರಾಗಿದ್ದಾರೆ.

ದೆಹಲಿಯಲ್ಲಿ ಶೀಲಾ ದೀಕ್ಷಿತ್​ ಅವರು 1998 ರಿಂದ 2013, 15 ವರ್ಷ ಕಾಲ ಮೂರು ಬಾರಿ ಮುಖ್ಯಮಂತ್ರಿ ಆಗಿ ಸೇವೆ ಸಲ್ಲಿದ್ದು, ಕೇರಳದ ರಾಜ್ಯಪಾಲರಾಗಿಯೂ ಕಾರ್ಯ ನಿರ್ವಹಿಸಿದ್ದರು. ಸದ್ಯ ಅವರಿಗೆ 81 ವರ್ಷ ವಯಸ್ಸು ಆಗಿತ್ತು. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ದೀಕ್ಷಿತ್​ ಅವರು ದೆಹಲಿಯ ಪ್ರದೇಶ ಕಾಂಗ್ರೆಸ್​ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.

ದೇಶದ ರಾಷ್ಟ್ರಪತಿಗಳಾದ ರಾಮನಾಥ್​ ಕೋವಿಂದ್​ ಮತ್ತು ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರು ಸೇರಿದಂತೆ ಹಲವು ರಾಜಕೀಯ ಗಣ್ಯರು ಶೀಲಾ ದೀಕ್ಷಿತ್ ಅವರ​ ನಿಧನಕ್ಕೆ ಟ್ವಿಟರ್​ ಮೂಲಕ ಸಂತಾಪ ಸೂಚಿಸಿದ್ದಾರೆ.

ಶೀಲಾ ದೀಕ್ಷಿತ್ ಜೀ ಅವರೇ ನಿಮ್ಮ ನಿಧನದಿಂದ ತೀವ್ರ ದುಃಖವಾಗುತ್ತಿದೆ. ನೀವು ಸ್ನೇಹಪರ ವ್ಯಕ್ತಿತ್ವವುಳ್ಳವರು, ನೀವು ದೆಹಲಿಯ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡಿದವರು. ನಿಮ್ಮ ಕುಟುಂಬ ಮತ್ತು ಬೆಂಬಲಿಗರಿಗೆ ದು:ಖ ಭರಿಸುವ ಶಕ್ತಿ ಆ ದೇವರು ನೀಡಲಿ, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೀಕ್ಷಿತ್​ ಜೊತೆ ಇರುವ ಪೋಟೋ ಪೋಸ್ಟ್​ ಮಾಡಿ ಸಂತಾಪ ಸೂಚಿಸಿದ್ದಾರೆ.

Comments are closed.