
ಹಾಸನ: ದೇವಾಲಯದ ಆವರಣದಲ್ಲಿಯೇ ಪ್ರೇಮಿಗಳು ಮುತ್ತಿಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ಇದೀಗ ಭಾರೀ ವೈರಲ್ ಆಗಿದೆ.
ಹಾಸನದ ಚನ್ನರಾಯಪಟ್ಟಣ ತಾಲೂಕಿನ ಆಂಜನೇಯಸ್ವಾಮಿ ದೇವಾಲಯದಲ್ಲಿ ಈ ಘಟನೆ ನಡೆದಿದ್ದು, ದೇವಾಲಯದಲ್ಲಿ ಕುಳಿತು ವಿದ್ಯಾರ್ಥಿಗಳು ಮುತ್ತಿಡುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಯಾರಾದರೂ ಬಂದರೆ ಹೇಳು ಎಂದು ಕಾವಲಿಗೆ ಮತ್ತೊಬ್ಬ ಹುಡುಗನನ್ನು ಕುರಿಸಿ ದೇವಾಲಯದಲ್ಲಿಯೇ ಪ್ರೇಮ ಸಲ್ಲಾಪ ನಡೆಸಿದ್ದಾರೆ, ಆದರೆ ಜನರ ಕಣ್ಣು ತಪ್ಪಿಸಿ ನಡೆಸಿದ ಪ್ರೇಮಸಲ್ಲಾಪ ಇದೀಗ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ತನ್ನ ಪ್ರಿಯತಮೆಯ ಹುಟ್ಟುಹಬ್ಬಕ್ಕೆಂದು ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ , ಸ್ವಲ್ಪ ಹೊತ್ತು ದೇವಾಲಯದ ಒಳಾಂಗಣದಲ್ಲಿ ಕುಳಿತು ಈ ಪ್ರೇಮಿಗಳು ಮಾತುಕತೆ ನಡೆಸಿದ್ದಾರೆ. ಬಳಿಕ ದೇವಾಲಯದಲ್ಲಿ ಯಾರು ಇಲ್ಲದ ಸಮಯದಲ್ಲಿ ತನ್ನ ಹುಟ್ಟುಹಬ್ಬವನ್ನು ಆಚರಿಸಿದ ಪ್ರಿಯತಮನ ಕೈಹಿಡಿದು ಆಕೆ ನಾಲ್ಕು ಬಾರಿ ಮುತ್ತಿಟ್ಟಿದ್ದಾಳೆ.
Comments are closed.