
ಮೈತ್ರಿ ಸರ್ಕಾರದ ರಾಜಕೀಯ ಅಸ್ಥಿರತೆಯ ಕ್ಲೈಮ್ಯಾಕ್ಸ್ಗೆ ಗುರುವಾರ ಮುಹೂರ್ತ ಫಿಕ್ಸ್ ಆಗ್ತಿದ್ದಂತೆ ಬಿಜೆಪಿ ಹೊಸ ಬಾಂಬ್ ಸಿಡಿಸಿದೆ. ಇಷ್ಟು ದಿನ ಅತೃಪ್ತ ಶಾಸಕರಿಗೂ ನಮಗೂ ಸಂಪರ್ಕವೇ ಇಲ್ಲ ಎಂದಿದ್ದ ಬಿಜೆಪಿ ಇದೀಗ ಇನ್ನು 3 ಶಾಸಕರು ಬಿಜೆಪಿ ಸೇರ್ತಾರೆ ಎನ್ನುವ ಮೂಲಕ ದೋಸ್ತಿಗೆ ಶಾಕ್ ನೀಡಿದೆ.
ಹೌದು ಇಂದಿನ ವಿಧಾನಸಭೆ ಅಧಿವೇಶನದಲ್ಲಿ ಸ್ಪೀಕರ್ ರಮೇಶ್ ಕುಮಾರ್, ಸಮ್ಮಿಶ್ರ ಸರ್ಕಾರದ ವಿಶ್ವಾಸ ಮತ ಯಾಚನೆಗೆ ದಿನಾಂಕ ಹಾಗೂ ಸಮಯ ನಿಗದಿ ಮಾಡ್ತಿದ್ದಂತೆ ಬಿಜೆಪಿಯಲ್ಲಿ ಕುಮಾರಸ್ವಾಮಿ ಸರ್ಕಾರ ಸೋಲಲಿದೆ ಎಂಬ ವಿಶ್ವಾಸ ಮನೆ ಮಾಡಿದೆ.
ಹೀಗಾಗಿ ಹೊಸ ಉತ್ಸಾಹದಲ್ಲಿ ಸರ್ಕಾರ ರಚನೆವರೆಗೂ ಪ್ಲ್ಯಾನ್ ಮಾಡುತ್ತಿರುವ ಬಿಜೆಪಿ ನಾಯಕರು, ಇಷ್ಟು ದಿನಗಳ ಕಾಲ ಅತೃಪ್ತರು ನಮ್ಮ ಸಂಪರ್ಕದಲ್ಲಿಲ್ಲ ಎಂಬ ಭಜನೆ ಬಿಟ್ಟು ರಾಜಾರೋಶವಾಗಿ ಆಫರೇಶನ್ ಕಮಲ ಮಾಡಿರೋದನ್ನು ಒಪ್ಪಿಕೊಂಡಿದ್ದಾರೆ.
ನಮ್ಮ ಸಂಪರ್ಕದಲ್ಲಿ 17 ಶಾಸಕರಿದ್ದಾರೆ. ಇದು ಇನ್ನೂ 3 ಶಾಸಕರು ಬಿಜೆಪಿ ಸೇರ್ತಾರೆ ಎನ್ನುವ ಮೂಲಕ ಬಿಎಸ್ವೈ ಹೊಸ ಬಾಂಬ್ ಸಿಡಿಸಿದ್ದಾರೆ. ಅಷ್ಟೇ ಅಲ್ಲ ವಿಶ್ವಾಸಮತ ಯಾಚನೆಯಂದೂ ಕುಮಾರಸ್ವಾಮಿ ಸೋಲುತ್ತಾರೆ ಎಂದು ಬಿಎಸ್ವೈ ಭವಿಷ್ಯ ನುಡಿದಿದ್ದಾರೆ.
Comments are closed.