
ಬೆಂಗಳೂರು: ಸ್ಪೀಕರ್ ರಮೇಶ್ ಕುಮಾರ್ ಆ ಪೀಠದಲ್ಲಿ ಕೂತು ಸಂವಿಧಾನಕ್ಕೆ ವಿರುದ್ಥವಾದ ಹೇಳಿಕೆ ಕೊಟ್ಟಿದ್ದಾರೆ. “ನಾನು ನೃತ್ಯಗಾರ್ತಿ ಅಲ್ಲ” ಅಂತಾ ಸ್ಪೀಕರ್ ಹೇಳಿಕೆಗೆ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.
ಸ್ಪೀಕರ್ ಕ್ಷಮೆಯಾಚನೆಗೆ ಆಗ್ರಹ
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಸೋಮವಾರ ಮಾತನಾಡಿದ ಅವರು, ಸ್ಪೀಕರ್ ಕ್ಷಮೆಯಾಚನೆಗೆ ಆಗ್ರಹ ಮಾಡಿದ್ದಾರೆ. ಕಳೆದ ಬಾರಿ ಅದೇ ಪೀಠದಲ್ಲಿ ಕೂತು ರಮೇಶ್ ಕುಮಾರ್ ವೇಶ್ಯೆಯರ ಬಗ್ಗೆ ಮಾತಾನಾಡಿದ್ದಾರೆ. ಈಗ ನೃತ್ಯಗಾತಿ ಅಲ್ಲ ಅಂತಾ ಮಾತಾನಾಡಿದ್ದಾರೆ. ಆ ಜಾಗದಲ್ಲಿ ಕೂತು ಹಗುರವಾಗಿ ಮಾತಾನಾಡಿದ್ದಾರೆ. ನೃತ್ಯಗಾರ್ತಿ ಎಂದರೇ ಯಾರು, ಕಥಕಳಿ, ಭರತನಾಟ್ಯದ ಮೂಲಕ ದೇವರನ್ನು ಒಲಿಸಿಕೊಂಡು ಸಾರ್ಥಕತ್ಯೆಯನ್ನು ಪಡೆದುಕೊಳ್ಳುವವರು. ಅವರ ಬಗ್ಗೆ ಹಗುರುವಾಗಿ, ಹೆಣ್ಣುಮಕ್ಕಳ ಬಗ್ಗೆ ಹಗುರವಾಗಿ ಮಾತಾನಾಡಿದ್ದಾರೆ. ಸ್ಪೀಕರ್ ಕಾಂಗ್ರೆಸ್ ಏಜೆಂಟ್ ರಂತೆ ವರ್ತನೆ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ರಾಜೀನಾಮೆ ಕೊಟ್ಟು ತೆರಳಿದರೆ ಸಿಎಂಗೆ ಗೌರವ
ನಂತರ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಇವತ್ತು ರಾಜೀನಾಮೆ ಕೊಟ್ಟು ತೆರಳಿದರೆ ಸಿಎಂಗೆ ಗೌರವ ಇರಲಿದೆ. ಬಹುಮತವನ್ನು ಕಳೆದುಕೊಂಡಿದ್ದಾರೆ. ಅಸಮಾಧಾನಗೊಂಡ ಶಾಸಕರು ಈಗ ಇವರಿಗೆ ಭೇಟಿ ಮಾಡಲೂ ಅವಕಾಶ ಕೊಟ್ಟಿಲ್ಲ, ಏಕೆಂದರೆ ಈ ಹಿಂದೆ ಮುಖ್ಯಮಂತ್ರಿಗಳು ಹಾಗೂ ಸಚಿವರುಗಳು ಅವರನ್ನು ದರ್ಪದಿಂದ ನಡೆಸಿಕೊಂಡರು. ಅವರ ಕ್ಷೇತ್ರಗಳಿಗೆ ಅನುದಾನ ಕೊಡದೇ ಹೀನಾಯವಾಗಿ ನಡೆಸಿಕೊಂಡರು. ಈಗ ಈ ನಾಯಕರು ಅತೃಪ್ತರನ್ನು ಭೇಟಿಯಾಗಲು ಗೋಗರೆದರು ಅವರು ಸಿಗುತ್ತೀಲ್ಲ. ಅವರ ಭೇಟಿಯನ್ನು ರಿಜೆಕ್ಟ್ ಮಾಡಿದ್ದಾರೆ. ದೇಶದಲ್ಲಿ ಮೊದಲ ಮಹಾಘಟ್ಬಂಧನ್ ಹೇಗೆ ನಡೆಯುತ್ತೇ ಅನ್ನೋದನ್ನು ಮೈತ್ರಿ ಸರ್ಕಾರ ಸಾಬೀತು ಮಾಡಿದೆ ಎಂದು ಮೈತ್ರಿ ಸರ್ಕಾರದ ವಿರುದ್ಥ ಶೋಭಾ ಕರಂದ್ಲಾಜೆ ಕಿಡಿಕಾರಿದರು.
Comments are closed.