ಕರ್ನಾಟಕ

ಎಂಟಿಬಿ ಮುಂಬೈ ಪಲಾಯನದ ಹಿಂದೆ ಸಿದ್ಧು ಕೈವಾಡ?!

Pinterest LinkedIn Tumblr


ಡಿಕೆಶಿ ಮಿಡ್​ ನೈಟ್​ ಆಫರೇಶನ್​ ಬಳಿಕ ಕಾಂಗ್ರೆಸ್​ ಜೊತೆ ನಿಲ್ಲೋದಾಗಿ ಭರವಸೆ ನೀಡಿದ್ದ ಅತೃಪ್ತ ಸಚಿವ ಎಂಟಿಬಿ ನಾಗರಾಜ್ ಕೊನೆಗೂ ಕೈಪಾಳಯವನ್ನು ಯಾಮಾರಿಸಿ ಮುಂಬೈ ಸೇರಿದ್ದಾರೆ. ಈ ಮಧ್ಯೆ ಎಂಟಿಬಿ ಅತೃಪ್ತರನ್ನು ಸೇರಿಕೊಳ್ಳೋಕೆ ಮಾಜಿ ಸಿಎಂ ಸಿದ್ಧರಾಮಯ್ಯ ಎನ್ನಲಾಗಿದ್ದು, ಸಿದ್ದು ವಿರುದ್ಧ ಆಕ್ರೋಶ ಭುಗಿಲೆದ್ದಿದೆ.

ಹೌದು ಮಧ್ಯರಾತ್ರಿ ಡಿಕೆಶಿ ಆಫರೇಶನ್​ ನಡೆಸಿ, ಎಂಟಿಬಿಯವರನ್ನು ಮನವೊಲಿಸಿ ಸಿದ್ಧು ಮನೆಗೆ ಕರೆತಂದಿದ್ದರು. ಈ ವೇಳೆ ಕಾಂಗ್ರೆಸ್​ನಲ್ಲೇ ಉಳಿಯುವುದಾಗಿ ವಾಗ್ದಾನ ಮಾಡಿದ್ದ ಎಂಟಿಬಿ, ಡಾ.ಸುಧಾಕರ್ ಅವರನ್ನು ಕರೆತರೋದಾಗಿ ಭರವಸೆ ನೀಡಿದ್ದರು.
ಈ ವೇಳೆ ಎಂಟಿಬಿಯವರನ್ನು ಸಿದ್ಧರಾಮಯ್ಯ ಮನೆಗೆ ಕರೆತಂದಿದ್ದ ಡಿಕೆಶಿ ಅವರನ್ನು ಕಾಯ್ದುಕೊಳ್ಳುವ ಜವಾಬ್ದಾರಿಯಲ್ಲಿ ಸಚಿವ ಜಮೀರ್ ಅಹ್ಮದ್ ಗೆ ನೀಡಿದ್ದರು. ಆದರೇ ಸಿದ್ಧು ಅವರನ್ನು ಮನವೊಲಿಸುವಲ್ಲಿ ವಿಫಲವಾಗಿದ್ದು ಮಾತ್ರವಲ್ಲದೇ ಎಂಟಿಬಿಯವರನ್ನು ಏಕಾಂಗಿಯಾಗಿ ಬಿಟ್ಟಿದ್ದರು.

ಇದರಿಂದ ಸುಲಭವಾಗಿ ಬಿಜೆಪಿ ನಾಯಕರ ಸಂಪರ್ಕಕ್ಕೆ ಬಂದ ಎಂಟಿಬಿ ತಡರಾತ್ರಿಯೇ ಮುಂಬೈಗೆ ಪಲಾಯನ ಮಾಡಿದ್ದಾರೆ. ಸಿದ್ಧರಾಮಯ್ಯನವರಿಗೆ ಸರ್ಕಾರ ಉಳಿಸಿಕೊಳ್ಳುವಲ್ಲಿ ಯಾವುದೇ ಆಸಕ್ತಿ ಇಲ್ಲ. ಇದೇ ಕಾರಣಕ್ಕೆ ಕಷ್ಟ ಪಟ್ಟು ಕರೆದುಕೊಂಡ ಎಂಟಿಬಿಯವರನ್ನು ಉಳಿಸಿಕೊಳ್ಳದೇ ಹೊರ ಬಿಟ್ಟಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದು, ಹೈಕಮಾಂಡ್ ಗೆ ಕೂಡ ದೂರು ನೀಡಿದ್ದಾರೆ.

Comments are closed.