ಕರ್ನಾಟಕ

ಮುಂಬೈಗೆ ಸುಧಾಕರ್ ಕರೆದುಕೊಂಡು ಬರಲು ಹೋದ ಶಾಸಕ ಎಂಟಿಬಿ ನಾಗರಾಜ್!

Pinterest LinkedIn Tumblr


ಬೆಂಗಳೂರು: ಸಚಿವ ಎಂಟಿಬಿ ನಾಗರಾಜ್ ಮುಂಬೈಗೆ ಶಾಸಕ ಸುಧಾಕರ್ ಕರೆದುಕೊಂಡು ಬರಲು ಹೋಗಿದ್ದಾರೆ ಎಂದು ಹೆಚ್ ಕೆ ಪಾಟೀಲ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸುಧಾಕರ್ ಕರೆದುಕೊಂಡು ಬಂದು ರಾಜೀನಾಮೆ ಪಡೆದುಕೊಳ್ಳುತ್ತೇನೆ ಅಂತ ಹೇಳಿದ್ದಾರೆ. ಹಾಗಾಗಿ ಮುಂಬೈಗೆ ಸುಧಾಕರ್​ನ್ನು ಕರೆದುಕೊಂಡು ಬರಲು ಹೋಗಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷ ಸಂಕಷ್ಟದಲ್ಲಿದೆ. ರಾಮಲಿಂಗರೆಡ್ಡಿ ಪಕ್ಷದ ನಾಯಕರು. ಪಕ್ಷಕ್ಕೆ ಅವರ ಅಗತ್ಯ ಹೆಚ್ಚಾಗಿದೆ.ರಾಮಲಿಂಗರೆಡ್ಡಿ ರಾಜೀನಾಮೆ ವಾಪಸ್ ಪಡೆಯಬೇಕು. ಸ್ನೇಹದ ಮನವಿ ಮಾಡಿದ್ದೇವೆ. ಎಲ್ಲಾ ನಾಯಕರು ಅವರ ಜೊತೆ ಮಾತನಾಡಿದ್ದಾರೆ. ಡಿಸಿಎಂ ಪರಮೇಶ್ವರ್. ಡಿ. ಕೆ ಶಿವಕುಮಾರ್ ಅವರ ಜೊತೆ ಮಾತನಾಡಿದ್ದಾರೆ.

ರಾಮಲಿಂಗರೆಡ್ಡಿ40 ವರ್ಷಗಳ ಸಂಬಂಧ, ಸ್ನೇಹಿತರ ಮನವಿಯನ್ನು ಒಪ್ಪಿಕೊಳ್ಳುತ್ತಾರೆ. ಕಾಂಗ್ರೆಸ್ ಬಗ್ಗೆ ರಾಮಲಿಂಗರೆಡ್ಡಿಗೆ ಕಳಕಳಿ ಇದೆ. ಕಾಂಗ್ರೆಸ್ ಪಕ್ಷದಲ್ಲಿ ತಪ್ಪು ಆಗಿರಬಹುದು. ಈ ಬಗ್ಗೆ ಆದರ ಬಗ್ಗೆ ಚರ್ಚೆ ಬೇಡ, ರಾಮಲಿಂಗರೆಡ್ಡಿ ಗೆ ನೋವಾಗಿದೆ ಅದನ್ನ ನಾವು ಒಪ್ಪಿಕೊಳ್ಳುತ್ತೇನೆ ಎಂದರು.

ಸೌಮ್ಯಾ ರೆಡ್ಡಿ ಸೋನಿಯಾ ಗಾಂಧಿ ಭೇಟಿ ಮಾಡಿದ್ದಾರೆ. ಸೌಮ್ಯಾ ರೆಡ್ಡಿ ರಾಜೀನಾಮೆ ನೀಡಲ್ಲ ಪಕ್ಷದಲ್ಲಿ ಇರುತ್ತಾರೆ ಎಂದು ಇದೇ ವೇಳೆ ತಿಳಿಸಿದರು.

ಮೈತ್ರಿ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಇಡೀ ದಿನ ನಡೆಸಿದ ಸಂಧಾನ ಪ್ರಯತ್ನ ಕೊನೆಗೂ ವಿಫಲಾಗಿದೆ. ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಸಚಿವ ಎಂಟಿಬಿ ನಾಗರಾಜ್ ಇಂದು ಬೆಳಗ್ಗೆ ಬಿಜೆಪಿ ನಾಯಕ ಆರ್. ಅಶೋಕ್ ಜೊತೆಗೆ ಖಾಸಗಿ ವಿಮಾನದಲ್ಲಿ ಮುಂಬೈಗೆ ತೆರಳಿ ಅತೃಪ್ತರ ಪಡೆಗೆ ಸೇರ್ಪಡೆಗೊಳ್ಳುವ ಮೂಲಕ ಸಿಎಂ ಕುಮಾರಸ್ವಾಮಿಗೆ ಮತ್ತೊಂದು ಶಾಕ್ ನೀಡಿದ್ದಾರೆ ಎಂದುಕೊಂಡಿದ್ದರು ಆದರೆ ಹೆಚ್ ಕೆ ಪಾಟೀಲ್ ಮಾತ್ರ ಮುಂಬೈಗೆ ಸುಧಾಕರ್ ಕರೆದುಕೊಂಡು ಬರಲು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.

Comments are closed.