
ಹಾಸನ: ಮೈತ್ರಿ ಸರ್ಕಾರದ ಅತೃಪ್ತ ನಾಯಕರು ರಾಜೀನಾಮೆ ನೀಡಿ, ರೆಸಾರ್ಟ್ ಸೇರಿದ್ದು, ರಾಜ್ಯ ಸರ್ಕಾರ ಸಂಕಟಕ್ಕೆ ಸಿಲುಕಿದ್ದು, ದೋಸ್ತಿ ಸರ್ಕಾರವನ್ನು ನೀನೇ ಕಾಪಾಡಪ್ಪ ದೇವ್ರೇ ಅಂತಾ ಸಚಿವ ಹೆಚ್.ಡಿ.ರೇವಣ್ಣ ಟೆಂಪಲ್ ರನ್, ಹೋಮ ಹವನ ಶುರುಹಚ್ಕೊಂಡಿದ್ದಾರೆ.
ಸರ್ಕಾರ ಸೇಫ್ ಆಗಿ ಇರಲಿ ಅಂತಾ ಶತ್ರುಸಂಹಾರ ಯಾಗ
ಸರ್ಕಾರ ಉಳಿಸಿಕೊಳ್ಳಲು ಸಚಿವ ಹೆಚ್.ಡಿ.ರೇವಣ್ಣ ಶತ್ರುಸಂಹಾರ ಯಾಗ ಮಾಡಿಸಿದ್ದಾರೆ. ಹಾಸನ ಜಿಲ್ಲೆ ಹೊಳೆನರಸೀಪುರದ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ಶತ್ರುಸಂಹಾರ ಯಾಗ, ಶತ ಚಂಡಿಕಾಯಾಗ, ಪ್ರತ್ಯಂಗೀರಾ ಹೋಮ, ಗಣಹೋಮ ಸೇರಿ ವಿವಿಧ ಯಜ್ಞ ಯಾಗ ಮಾಡಿಸಿದ್ದು, ಸರ್ಕಾರದ ಒಳಿತಿಗಾಗಿ ಪ್ರಾರ್ಥಿಸಿದ್ದಾರೆ.
ಹೋದ ವಾರ ಕೂಡ ಚಾಮುಂಡಿ ದೇವಿಯ ದರ್ಶನ ಪಡೆದಿದ್ದ ರೇವಣ್ಣ, ನಾಡದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ಅಲ್ಲದೇ, ಬರೀಗಾಲಲ್ಲಿ ವಿವಿಧ ದೇವಸ್ಥಾನ ಸುತ್ತಿದ್ದಲ್ಲದೇ, ವಿಧಾನಸೌಧಕ್ಕೂ ಕೂಡ ಚಪ್ಪಲಿ ಇಲ್ಲದೇ ಬಂದಿದ್ದರು.
ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅವಾಚ್ಯ ಪದಬಳಕೆ..!?
ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಹಲವು ದೇವಸ್ಥಾನಗಳಿಗೆ ಭೇಟಿ ಕೊಟ್ಟ ಸಚಿವ ರೇವಣ್ಣ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೋಗಿದ್ದ ರೇವಣ್ಣರ ಫೋಟೋ ತೆಗೆದ ಮಾಧ್ಯಮದ ಜೊತೆ ರೇವಣ್ಣ ಅಸಭ್ಯವಾಗಿ ವರ್ತಿಸಿದ್ದು, ದೇವಸ್ಥಾನದೊಳಗೆ ಅವಾಚ್ಯ ಶಬ್ಧ ಬಳಸಿದ್ದಾರೆ. ಅಲ್ಲದೇ, ಪೊಲೀಸರಿಗೆ ಹೇಳಿ, ಮಾಧ್ಯಮದವರು ತೆಗೆದಿದ್ದ ಫೋಟೋವನ್ನ ಡಿಲೀಟ್ ಮಾಡಿಸಿದ್ದಾರೆ.
ಅತೃಪ್ತರ ಕೆಂಗಣ್ಣಿನಿಂದು ರೇವಣ್ಣರನ್ನು ರಕ್ಷಿಸುತ್ತಾಳಾ ಮೂಕಾಂಬಿಕೆ ..?
ದೇವೇಗೌಡ ಕುಟುಂಬ ಕೊಲ್ಲೂರು ಮೂಕಾಂಬಿಕೆಯ ಪರಮಭಕ್ತರು.ಅದರಲ್ಲೂ ರೇವಣ್ಣ ಆಗಿದ್ದಾಂಗೆ ಈ ಕ್ಷೇತ್ರಕ್ಕೆ ಭೇಟಿ ನೀಡಿ ಚಂಡಿಕಾಹೋಮ ನಡೆಸುತ್ತಾರೆ. ಆದರೆ ಈ ಬಾರಿ ಚಂಡಿಕಾಹೋಮ ನಡೆಸಿಲ್ಲ, ಬದಲಿಗೆ ಯಾವುದೇ ಪೂರ್ವಸೂಚನೆ ಇಲ್ಲಿದೆ ಬಂದು ವಿಶೇಷ ಪೂಜೆ ನಡೆಸಿ ವಾಪಾಸಾಗಿದ್ದಾರೆ.
ಮಾಧ್ಯಮಗಳ ಜೊತೆಗೆ ಏನೂ ಮಾತನಾಡಲು ಬಯಸದ ರೇವಣ್ಣ, ವಿಡಿಯೋ ಚಿತ್ರೀಕರಣಕ್ಕೂ ಅವಕಾಶ ಕೊಟ್ಟಿಲ್ಲ. ಕೊಲ್ಲೂರಿಗೆ ತೆರಳುವ ಮಾರ್ಗ ಮಧ್ಯದಲ್ಲಿ ಆನೆಗುಡ್ಡೆ, ಹಾಗೂ ಹಟ್ಟಿ ಅಂಗಡಿ ಗಣಪತಿ ದೇವಸ್ಥಾನದಲ್ಲೂ ಪೂಜೆ ಸಲ್ಲಿಸಿ ವಿಶ್ವಾಸ ಮತದಲ್ಲಿ ಗೆಲುವಿಗೆ ಪ್ರಾರ್ಥಿಸಿದ್ದಾರೆ. ಅತೃಪ್ತರ ಕೆಂಗಣ್ಣಿನಿಂದು ರೇವಣ್ಣರನ್ನು ಮೂಕಾಂಬಿಕೆ ರಕ್ಷಿಸುತ್ತಾಳಾ, ಕಾದುನೋಡಬೇಕು.
Comments are closed.