
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಬಿಜೆಪಿಗೆ ಆಹ್ವಾನಿಸಿದ್ದಾರೆ ಎಂದು ಇಂದು ಮುಂಜಾನೆ ಸುದ್ದಿ ಪ್ರಸಾರವಾಗಿತ್ತು. ಆದರೆ ಇದೀಗ ಯಡಿಯೂರಪ್ಪ ಬಿಜೆಪಿ ಸೇರ್ಪಡೆಯ ವಿಚಾರವನ್ನು ನಿರಾಕರಿಸಿದ್ದಾರೆ.
ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಲಕ್ಷ್ಮಿ ಹೆಬ್ಬಾಳಕರ್ ಬಿಜೆಪಿ ಸೇರುತ್ತಾರೆ ಎಂದು ಹೆಸರು ಕೇಳಿ ಬರುತ್ತಿದೆ ಆದರೆ ಅವರನ್ನು ಸೇರಿಸಿಕೊಳ್ಳುವುದಕ್ಕೆ ನನಗೆ ತಲೆ ಕೆಟ್ಟಿದ್ಯಾ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಂಗೇನು ತಲೆ ಕೆಟ್ಟಿದ್ಯಾ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಸೇರಿಸಿಕೊಳ್ಳೋದಕ್ಕೆ, ಅವರ ಸಲುವಾಗಿಯೇ ಶಾಸಕರು ಮುಂಬೈ ಹೋಗಿರೋದು. ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಪ್ರಶ್ನೆಯೇ ಇಲ್ಲಾ ಎಂದು ಕಿಡಿಕಾರಿದರು.
ನಾನು ಈಗ ರೇಸಾರ್ಟ್ ಗೆ ಹೋಗುತ್ತಾ ಇದ್ದೇನೆ, ನಂತರದ ರಾಜಕೀಯ ಬೆಳವಣಿಗೆ ನೋಡಿಕೊಂಡು ಮತ್ತೆ ಮಾತನಾಡುತ್ತಾನೆ. ಇನ್ನೂ ಇದೇ ವೇಳೆ ಎಂಟಿಬಿ ನಾಗರಾಜ್ ಕುರಿತು ಪ್ರತಿಕ್ರಯಿಸಲಿಲು ನಿರಾಕರಣೆ ಮಾಡಿದರು. ರೇಸಾರ್ಟ್ ಕಡೆ ಹೊರಟ ಯಡಿಯೂರಪ್ಪ ಎಸ್ಕಾರ್ಟ್ ಬಿಟ್ಟು ಡಾಲರ್ಸ್ ಕಾಲೋನಿಯಿಂದ ತೆರಳಿದರು.
ಲಕ್ಷ್ಮಿ ಹೆಬ್ಬಾಳ್ಕರ್ ವರ್ಸಸ್ ಸಾಹುಕರ್ ಫೈಟ್ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರಕ್ಕೆ ಮುಹೂರ್ತ ಇಟ್ಟಿದೆ ಅನ್ನುವ ಹೇಳಿಕೆಯನ್ನು ಬಿಎಸ್ವೈ ಕೊಟ್ಟಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್ ಬಿಜೆಪಿಗೆ ಬರುತ್ತಾರೆ ಅನ್ನುವ ಊಹಾಪೋಹದ ಬಗ್ಗೆ ಸ್ಪಷ್ಟನೆ ಕೊಡುವ ಸಂದರ್ಭದಲ್ಲಿ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ತಲೆಕೆಟ್ಟಿದ್ಯಾ, ಅವರಿಂದಲೇ ಅತೃಪ್ತರು ಮುಂಬೈ ಸೇರಿದ್ದಾರೆ ಎಂದು ಬಿಎಸ್ವೈ ಹೊಸ ಬಾಂಬ್ ಸಿಡಿಸಿದ್ದಾರೆ.
Comments are closed.