ಕ್ರೀಡೆ

ಚೊಚ್ಚಲ ಕ್ರಿಕೆಟ್ ವಿಶ್ವಕಪ್‌ ಗೆದ್ದ ಕ್ರಿಕೆಟ್ ಜನಕ ಇಂಗ್ಲೆಂಡ್; ರೋಚಕ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಕನಸು ಭಗ್ನ!

Pinterest LinkedIn Tumblr

ಐಸಿಸಿ 2019 ಏಕದಿನ ವಿಶ್ವಕಪ್‌ನಲ್ಲಿ ಕ್ರಿಕೆಟ್ ಜನಕ ಇಂಗ್ಲೆಂಡ್‌ನ ದೀರ್ಘ ಕಾಯುವಿಕೆಗೆ ಇದಕ್ಕಿಂತಲೂ ಉತ್ತಮವಾದ ಫಿನಿಶಿಂಗ್ ಟಚ್ ಬೇರೊಂದು ಸಿಗಲಾರದು. ರೋಚಕ ಫೈನಲ್ ಮುಖಾಮುಖಿಯಲ್ಲಿ ಎರಡೆರಡು ಬಾರಿ ಟೈನಲ್ಲಿ ಅಂತ್ಯಗೊಂಡ ಪಂದ್ಯದಲ್ಲಿ ಬೌಂಡರಿ ಆಧಾರದಲ್ಲಿ ಗೆಲುವು ದಾಖಲಿಸಿರುವ ಇಂಗ್ಲೆಂಡ್ ನೂತನ ವಿಶ್ವ ಚಾಂಪಿಯನ್ ಎನಿಸಿಕೊಂಡಿದೆ. ಇನ್ನೊಂದೆಡೆ ನ್ಯೂಜಿಲೆಂಡ ಚೊಚ್ಚಲ ವಿಶ್ವಕಪ್ ಕನಸು ಭಗ್ನಗೊಂಡಿದೆ.

ಲಂಡನ್: ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯ ನ್ಯೂಜಿಲ್ಯಾಂಡ್ ಮತ್ತು ಆತಿಥೇಯ ಇಂಗ್ಲೆಂಡ್ ನಡುವೆ ರೋಚಕ ಟೈ ಆಗಿತ್ತು. ನಂತರ ನಡೆದ ಸೂಪರ್ ಓವರ್ ನಲ್ಲಿ ಇಂಗ್ಲೆಂಡ್ 1 ರನ್ ಗಳಿಂದ ಗೆದ್ದು ಚೊಚ್ಚಲ ಬಾರಿಗೆ ಕ್ರಿಕೆಟ್ ವಿಶ್ವಕಪ್ ಗೆ ಮುತ್ತಿಟ್ಟಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್ ನಿಗದಿತ ಓವರ್ ನಲ್ಲಿ 8 ವಿಕೆಟ್ ಕಳೆದುಕೊಂಡು 241 ರನ್ ಮಾತ್ರ ಪೇರಿಸಿತ್ತು. ಇನ್ನು 242 ರನ್ ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಸಹ ನಿಗದಿತ ಓವರ್ ಮುಕ್ತಾಯಕ್ಕೆ 241 ರನ್ ಪೇರಿಸಿ ಪಂದ್ಯವನ್ನು ಟೈ ಮಾಡಿಕೊಂಡಿತ್ತು. ಹೀಗಾಗಿ ಸೂಪರ್ ಓವರ್ ನೀಡಲಾಯಿತು. ಮೊದಲಿಗೆ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಓವರ್ ಮುಕ್ತಾಯಕ್ಕೆ 15 ರನ್ ಪೇರಿಸಿ ನ್ಯೂಜಿಲ್ಯಾಂಡ್ ಗೆ ಗೆಲ್ಲಲು 16 ರನ್ ಗುರಿ ನೀಡಿತು. ಈ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲ್ಯಾಂಡ್ 14 ರನ್ ಮಾತ್ರ ಪೇರಿಸಿ 1 ರನ್ ಗಳಿಂದ ಸೋಲಿಗೆ ಶರಣಾಯಿತು.

ನ್ಯೂಜಿಲ್ಯಾಂಡ್ ಪರ ಮಾರ್ಟಿನ್ ಗುಪ್ಟಿಲ್ 19, ನಿಕೋಲಾಸ್ 55, ಕೇನ್ ವಿಲಿಯಮ್ಸನ್ 30, ಲ್ಯಾಥಂ 47, ನಿಶಾಮ್ 19 ರನ್ ಬಾರಿಸಿದ್ದಾರೆ.

ಇಂಗ್ಲೆಂಡ್ ಪರ ಬೌಲಿಂಗ್ ನಲ್ಲಿ ಪ್ಲುಂಕೆಟ್ ಮತ್ತು ವೋಕ್ಸ್ ತಲಾ 3 ವಿಕೆಟ್ ಪಡೆದಿದ್ದಾರೆ. ಆರ್ಚರ್ ಮತ್ತು ಮಾರ್ಕ್ ವುಡ್ ತಲಾ 1 ವಿಕೆಟ್ ಪಡೆದಿದ್ದಾರೆ.

Comments are closed.