ಕರ್ನಾಟಕ

ಬಳ್ಳಾರಿ ಬಿಜೆಪಿ ಅಭ್ಯರ್ಥಿಯಿಂದ ಬಾಡಿಗೆ ಮನೆ ಹುಡುಕಾಟ; ಮತ್ತೊಂದು ಮನೆ ಮಾಡಿದ ಕಾಂಗ್ರೆಸ್ ಅಭ್ಯರ್ಥಿ ವಿಎಸ್​ ಉಗ್ರಪ್ಪ

Pinterest LinkedIn Tumblr


ಬಳ್ಳಾರಿ: ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ವಿಳಾಸದ ಬಗ್ಗೆ ಚುನಾವಣಾ ಕಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಕಳೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಅಡ್ರೆಸ್ ಇಲ್ಲದವರು ಎಂದು ಬಿಜೆಪಿ ಜರಿದಿತ್ತು. ಆದರೀಗ ಬಿಜೆಪಿ ಅಭ್ಯರ್ಥಿಗೆ ಅಡ್ರೆಸ್​ಗಾಗಿ ಹುಡುಕಾಟ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಬಳ್ಳಾರಿ ನಿವಾಸಿಯಲ್ಲ. ಈ ಹಿನ್ನೆಲೆಯಲ್ಲಿ ಅವರ ಮನೆಗೆ ಹುಟುಕಾಟಕ್ಕೆ ಮುಂದಾಗಿದ್ದಾರೆ.

ಬಿಜೆಪಿ ಅಭ್ಯರ್ಥಿ ದಾವಣಗೆರೆ ಜಿಲ್ಲೆಯವರು

ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಪಕ್ಕದ ದಾವಣಗೆರೆ ಜಿಲ್ಲೆ. ಈ ಹಿಂದೆ ಬಳ್ಳಾರಿಯಲ್ಲಿದ್ದ ಹರಪನಹಳ್ಳಿಯ ಅವರ ಊರು ಸದ್ಯ ದಾವಣಗೆರೆಯಲ್ಲರುವುದರಿಂದ ಇಲ್ಲಿ ಮನೆ ಹುಡುಕಾಟಕ್ಕೆ ಅವರು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಟೀಕೆಗಳಿಂದ ತಪ್ಪಿಸಿಕೊಳ್ಳಲು ದೇವೇಂದ್ರಪ್ಪ ಮುಂದಾಗಿದ್ದಾರೆ.

ಉಗ್ರಪ್ಪ ಅವರಿಗೆ ವಲಸಿಗರು ಎಂದು ಟೀಕಿಸಿದ್ದ ಬಿಜೆಪಿ ಅವರಿಗೆ ಈಗ ದೇವೇಂದ್ರಪ್ಪ ವಲಸಿಗರಲ್ಲವಾ ಎಂಬ ಪ್ರಶ್ನೆಯನ್ನು ಕಾಂಗ್ರೆಸ್​ ಕೇಳಿದರು. ಇದಕ್ಕೆ ವಾದ ಮಂಡಿಸಿರುವ ಅವರು, ದೇವೇಂದ್ರಪ್ಪ ಪತ್ನಿ ಹೂವಿನಹಡಗಲಿ ತಾಲೂಕಿನ ನವಲಿ ಗ್ರಾಮ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಅಡ್ರೆಸ್ ಇಲ್ಲದವರು ಎಂದು ತೆಗಳಿ ಇದೀಗ ತಾವೇ ಮುಜುಗರಕ್ಕೊಳಗಾಗಬೇಕಾದ ಪರಿಸ್ಥಿತಿ ಎದುರಾಗಿದೆ.

ಮತ್ತೊಂದು ಬಾಡಿಗೆ ಮನೆ ಮಾಡಿದ ಉಗ್ರಪ್ಪ

ಬಳ್ಳಾರಿ ಸಂಸದರಾಗಿರುವ ಉಗ್ರಪ್ಪ ಮತ್ತೊಂದು ಬಾಡಿಗೆ ಮನೆ ಮಾಡಿ ಭರ್ಜರಿ ಪೂಜಾಕಾರ್ಯಕ್ರಮಗಳು ಮಾಡಿದ್ದಾರೆ. ಸದ್ಯ ಬಳ್ಳಾರಿಯೇ ತಮ್ಮ ಊರಾಗಿ ಮಾಡಿಕೊಂಡಿರುವ ಉಗ್ರಪ್ಪ ತಮ್ಮ ಚುನಾವಣಾ ಕಾರ್ಯಕ್ಕಾಗಿ ಮತ್ತೊಂದು ಮನೆ ಹುಡುಕಿಕೊಂಡಿದ್ದಾರೆ

ಬಳ್ಳಾರಿಯಲ್ಲಿ ಪುಟ್ಟ ಮನೆ ಇದ್ದ ಹಿನ್ನೆಲೆಯಲ್ಲಿ ಹೊಸಪೇಟೆಯಲ್ಲೊಂದು ಮತ್ತೊಂದು ಬಾಡಿಗೆ ಮನೆ ಮಾಡಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಮತ್ತೊಂದು ದೊಡ್ಡದಾದ ನಿವಾಸ ಹುಡುಕಿ ಉಗ್ರಪ್ಪ ಮನೆಮಂದಿಯೆಲ್ಲ ಪೂಜೆ ಮಾಡಿ ನಾನು ಬಳ್ಳಾರಿಯನವೇ, ಏಕಾಂಗಿಯಲ್ಲ ಎಲ್ಲರ ಸಹಕಾರವಿದೆ ಎಂದು ಪುನರುಚ್ಚರಿಸಿದರು.

Comments are closed.