ಕ್ರೀಡೆ

ಸಂಜು ಭರ್ಜರಿ ಶತಕ ವ್ಯರ್ಥ; ಹೈದರಾಬಾದ್‌ಗೆ ತಲೆಬಾಗಿದ ರಾಜಸ್ಥಾನ ರಾಯಲ್ಸ್

Pinterest LinkedIn Tumblr

ಹೈದರಾಬಾದ್: ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2019 ಆವೃತ್ತಿಯ ಪಂದ್ಯದಲ್ಲಿ ರಾಜಸ್ಥಾನದ ಸಂಜು ಸ್ಯಾಮ್ಸನ್ ಚೊಚ್ಚಲ ಶತಕದ ಹೊರತಾಗಿಯೂ ಹೈದರಾಬಾದ್ ಐದು ವಿಕೆಟ್ ಗಳ ಜಯ ದಾಖಲಿಸಿದೆ.

ಹೈದರಾಬಾದ್ ಗೆ ಶುಕ್ರವಾರದ ಪಂದ್ಯದ ಗೆಲುವು ಈ ಆವೃತ್ತಿಯಲ್ಲಿ ಸಿಕ್ಕಿದ ಮೊದಲ ಜಯವಾಗಿದೆ. ಅತ್ತ ಕಡೆ ಅಜಿಂಕ್ಯ ರಹಾನೆ ನೇತೃತ್ವದ ರಾಜಸ್ಥಾನ ಸತತ ಎರಡನ್ಬೇ ಸೋಲಿಗೆ ಗುರಿಯಾಗಿದೆ.

ಮೊದಲು ಬ್ಯಾಟಿಂಗ್ ನಡೆಸಿದ್ದ ರಾಜಸ್ಥಾನದ ಪರ ಸಂಜು ಸ್ಯಾಮ್ಸನ್ 102*) ಅದ್ಭುತ ಶತಕ ಸಿಡಿಸಿದ್ದರೆ ಅಜಿಂಕ್ಯ ರಹಾನೆ (70) ರನ್ ಗಳಿಸಿ ನಿಗದಿತ ಇಪ್ಪತ್ತು ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 198 ರನ್ ಕಲೆ ಹಾಕಿತ್ತು.

ರಾಜಸ್ಥಾನದ ಬೃಹತ್ ಗುರಿ ಬೆನ್ನತ್ತಿದ ಹೈದರಾಬಾದ್ ಡೇವಿಡ್ ವಾರ್ನರ್ (69), ಜಾನಿ ಬೈರ್‌ಸ್ಟೋವ್ (45) ಹಾಗೂ ವಿಜಯ್ ಶಂಕರ್ (35) ಉತ್ತಮ ಪ್ರದರ್ಶನದೊಡನ್ವೆ 19.ಓವರ್ ನಲ್ಲಿ 5 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿ ಗುರಿ ಸಾಧಿಸಿದೆ.

ಹೈದರಾಬಾದ್ ನ ಡೇವಿಡ್ ವಾರ್ನರ್ 2 ಸಿಕ್ಸರ್ ಹಾಗೂ 9 ಬೌಂಡರಿ ನೆರವಿನೊಡನೆ 37 ಎಸೆತಕ್ಕೆ 69 ರನ್ ಗಳಿಸಿ ಮಿಂಚಿದ್ದರು. ಅತ್ತ ರಾಜಸ್ಥಾನದ ಪರವಾಗಿ ಸಂಜು 4 ಸಿಕ್ಸರ್, 10 ಬೌಂಡರಿಗಳ ಸಹಾಯದಿಂದ 55 ಎಸೆತದಲ್ಲೇ 102 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ಇದು ಸಂಜು ಐಪಿಎಲ್ ನಲ್ಲಿ ಗಳಿಸಿದ್ದ ಚೊಇಚ್ಚಲ ಶತಕಾವಾಗಿತ್ತು. ಇದಲ್ಲದೆ ರಾಜಸ್ಥಾನ್ ನಾಯಕ ರೆಹಾನೆ 3ಸಿಕ್ಸರ್, 4 ಬೌಂಡರಿನ್ ಸಿಡಿಸಿ 49 ಎಸೆತಕ್ಕೆ 70 ರನ್ ಕಲೆಹಾಕಿದ್ದರು.

ಇನ್ನು ಹೈದರಾಬಾದ್ ಪರ ವಿಜಯ ಶಂಕರ್ ೯35), ಕೇನ್ ವಿಲಿಯಮ್ಸ್ (14), ರಶೀದ್ ಖಾನ್ (15), ಯೂಸುಫ್ ಪಠಾಣ್ (16) ರನ್ ಗಳಿಸಿದ್ದರು.

ರಾಜಸ್ಥಾನದ ಬೌಲರ್ ಗಳಾದ ಶ್ರೇಯಸ್ ಗೋಪಾಲ್ 3, ಬೆನ್ ಸ್ಟ್ರೋಕ್ಸ್ ಹಾಗೂ ಜಯದೇವ್ ಉನದ್ಕಟ್ ತಲಾ ಒಂದೊಂ<ದು ವಿಕೆಟ್ ಪಡೆಇದ್ದರು. ಹೈದರಾಬಾದ್ ಪರ ರಶೀದ್ ಕಾನ್ ಹಾಗೂ ನದೀ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದ್ದರು.

Comments are closed.