ಕರ್ನಾಟಕ

ನಾನು ಮಂಡ್ಯದ ಅಳಿಯನಲ್ಲ, ಮಗ; ನಿಖಿಲ್​ಗೆ ಅಭಿಷೇಕ್​

Pinterest LinkedIn Tumblr


ಮಂಡ್ಯ: ಇಲ್ಲಿವರನ್ನು ಮದುವೆ ಆಗಿ ಮಂಡ್ಯದವನಾಗಬೇಕಿಲ್ಲ . ನಾನು ಮಂಡ್ಯದ ಮಗ, ಮಂಡ್ಯದ ಅಳಿಯನಲ್ಲ ಎಂದು ಮೈತ್ರಿ ಅಭ್ಯರ್ಥಿ ನಿಖಿಲ್​ ವಿರುದ್ದ ಅಭಿಷೇಕ್​ ವಾಗ್ದಾಳಿ ನಡೆಸಿದರು.

ನಿಖಿಲ್​ ​ ಮಂಡ್ಯದ ಅಳಿಯವಾಗುವನು. ಈ ಕ್ಷೇತ್ರ ಅವರಿಗೆ ಹೊಸದಲ್ಲ. ಈ ಹಿಂದೆ ದೇವೇಗೌಡ ಎರಡನೇ ಕ್ಷೇತ್ರವಿದು ಎಂದು ಈ ಹಿಂದೆ ಕೆ.ಆರ್​ ಪೇಟೆ ಶಾಸಕ ಸುರೇಶ್​ ಗೌಡ ತಿಳಿಸಿದ್ದರು. ಇದಕ್ಕೆ ಪರೋಕ್ಷವಾಗಿ ಟಾಂಗ್​ ನೀಡಿದರು.

ಮದ್ದೂರು ತಾಲೂಕಿನ ಮರಳಿಗ ಗ್ರಾಮದಲ್ಲಿ ಪ್ರಚಾರ ನಡೆಸಿದ ವೇಳೆ ಜೆಡಿಎಸ್​ ನಾಯಕರ ವಿರುದ್ಧ ಹರಿಹಾಯ್ದ ಅವರು, ಸುಮಲತಾ ಮುಖದಲ್ಲಿ ನೋವು ಕಾಣುತ್ತಿಲ್ಲ ಎಂಬ ಸಿಎಂ ಟೀಕೆಗೆ ಖಾರವಾಗಿ ಪ್ರತಿಕ್ರಿಯಿಸಿದರು. ಮೈಕ್ ಮುಂದೆ ಟವಲ್ ಹಾಕಿಕೊಂಡು ಅಳಬೇಕೆ. ನಾವು ಅಳಲ್ಲ, ಜನರಿರುವರೆಗೂ ಯಾಕೆ ಅಳಬೇಕು? ಎಂದು ಪ್ರಶ್ನಿಸಿದರು.

ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂದು ಅವರಿಗೆ ಅರ್ಥವಾಗಿದೆ. ಹಾಗಾಗಿಅ 3 ಜನ ಸುಮಲತಾ ಹೆಸರಿನವರನ್ನುತಂದು ಚುನಾವಣಾ ಕಣಕ್ಕೆ ನಿಲ್ಲಿಸಿದ್ದಾರೆ. ಚುನಾವಣೆ ಗೆಲ್ಲಲು ಏನೇನೋ ಗಿಮಿಕ್ ಮಾಡುತ್ತಿದ್ದಾರೆ. ಇದನ್ನು ತಿಳಿಯದಷ್ಟು ದಡ್ಡರಲ್ಲ. ನಾವು ಏನೆಂದು ಏಪ್ರಿಲ್ 18ಕ್ಕೆ ತೋರಿಸೋಣ ಎಂದು ಗುಡುಗಿದರು.

ನಾವು ಚುನಾವಣೆಯಲ್ಲಿ ದುಡ್ಡು ಹಂಚಲ್ಲ, ಪ್ರೀತಿ ಹಂಚುತ್ತೇವೆ. ನಾವೇನೊ ಗಿಮಿಕ್​ ಮಾಡುತ್ತಿದ್ದಾರೆ ಎಂದು ಅವರು ಯೋಚಿಸುತ್ತಿದ್ದಾರೆ. ಇದನ್ನು ಮತದಾರರು ಸೂಕ್ಷ್ಮವಾಗಿ ಗಮನಿಸಬೇಕು. ಮತದಾನದ ವೇಳೆ ಹೆಸರು, ಚಿಹ್ನೆ ಗಮನಿಸಿ ವೋಟ್ ಮಾಡಬೇಕು. ಸ್ತ್ರೀಶಕ್ತಿ ಏನೆಂದು ಅವರಿಗೆ ನೀವು ತೋರಿಸಬೇಕು. ಮಂಡ್ಯ ಸ್ವಾಭಿಮಾನವನ್ನು ನೀವೇ ಕಾಪಾಡಬೇಕು. ಈ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಮನವಿ ಮಾಡಿದರು.

ಮೈತ್ರಿ ಅಭ್ಯರ್ಥಿಗೆ ವೋಟ್ ಹಾಕಿದ್ರೆ ಅಂಬರೀಶಣ್ಣನ ಆತ್ಮಕ್ಕೆ ಶಾಂತಿ ಸಿಗುತ್ತಂತೆ ಎಂದು ಹೇಳುತ್ತಿದ್ದಾರೆ. ಇದು ಯಾವ ಲೆಕ್ಕಾಚಾರ ಅಂತಾನೆ ಗೊತ್ತಾಗುತ್ತಿಲ್ಲ ಎಂದು ಡಿಕೆ ಶಿವಕುಮಾರ್​ ಕಿಡಿಕಾರಿದರು.

Comments are closed.