ಕರ್ನಾಟಕ

ಹಲ್ಲೆ ಪ್ರಕರಣ: ವಜಾಗೊಂಡ ಕಂಪ್ಲಿ ಶಾಸಕ ಗಣೇಶ್​ ಜಾಮೀನು ಅರ್ಜಿ; ಜೈಲೇ ಗತಿ!

Pinterest LinkedIn Tumblr


ಬೆಂಗಳೂರು: ಈಗಲ್ಟನ್​ ರೆಸಾರ್ಟ್​ನಲ್ಲಿ ಕಾಂಗ್ರೆಸ್​ ಶಾಸಕ ಆನಂದ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ ಸಂಬಂಧ ಕಂಪ್ಲಿ ಗಣೇಶ್​ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ. ಹೀಗಾಗಿ ಶಾಸಕ ಗಣೇಶ್​ಗೆ ಜೈಲು ವಾಸ ಮುಂದುವರೆಯಲಿದೆ.

ಇಂದು ಬೆಳಗ್ಗೆ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾ.ರಾಮಚಂದ್ರ ಉದಾರ್ ಅವರು ತೀರ್ಪನ್ನು ಐದು ಗಂಟೆಗೆ ಕಾಯ್ದಿರಿಸಿದ್ದರು. ನಂತರ ಜಾಮೀನು ಅರ್ಜಿ ವಜಾಗೊಳಿಸಿ ಆದೇಶ ನೀಡಿದ್ದಾರೆ.

ಕಂಪ್ಲಿ ಗಣೇಶ ಪರ ವಕೀಲ ಸಿ.ಎಚ್​. ಹನುಮಂತರಾಯಪ್ಪ ವಾದ ಮಂಡಿಸಿದ್ದರು. ಆನಂದ್​ ಸಿಂಗ್​ ಕುಟುಂಬಸ್ಥರು ನೀಡಿರುವ ದೂರಿನಲ್ಲಿ ಘಟನೆ ನಡೆದಿರುವುದು ರಾತ್ರಿ 1 ಗಂಟೆಗೆ ಎಂದು ಉಲ್ಲೇಖಿಸಲಾಗಿದೆ. ಆದರೆ, ರೆಸಾರ್ಟ್​ನಲ್ಲಿ ಗಲಾಟೆ ನಡೆದಿರುವುದು ಮುಂಜಾನೆ 4.30ರ ಸುಮಾರಿಗೆ. ಇಲ್ಲಿ ಉದ್ದೇಶ ಪೂರ್ವಕವಾಗಿ ಸತ್ಯವನ್ನು ಮರೆಮಾಚಲಾಗಿದೆ. ಹೀಗಾಗಿ ಜಾಮೀನು ನೀಡುವಂತೆ ವಾದ ಮಂಡನೆ ಮಾಡಿದ್ದರು. ಬಿಡದಿ ಪೊಲೀಸರ ಪರ ಸರ್ಕಾರಿ ಅಭಿಯೋಜಕಿ ರಾಜೇಶ್ವರಿ ಪ್ರತಿವಾದ ಮಂಡಿಸಿದ್ದರು.

ಕಂಪ್ಲಿ ಗಣೇಶ್​ ನಡೆಸಿದರು ಎನ್ನಲಾದ ಹಲ್ಲೆಯಿಂದ ಆನಂದ್​ ಸಿಂಗ್​ ಕಣ್ಣು ಮತ್ತು ತಲೆಗೆ ಪೆಟ್ಟಾಗಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ಬಿಡದಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಕಂಪ್ಲಿ ಗಣೇಶ್​ ನಾಪತ್ತೆಯಾಗಿದ್ದರು. ಅವರಿಗಾಗಿ ಅಕ್ಕಪಕ್ಕದ ರಾಜ್ಯಗಳಲ್ಲೂ ಹುಡುಕಾಟ ನಡೆಸಿದ್ದ ಬಿಡದಿ ಪೊಲೀಸರು ತಿಂಗಳ ನಂತರ ಗುಜರಾತ್​ನಲ್ಲಿ ಬಂಧಿಸಿದ್ದರು. ನಂತರ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಅನಾರೋಗ್ಯದ ನಿಮಿತ್ತ ವಿಕ್ಟೋರಿಯಾ ಆಸ್ಪತ್ರೆ ಸೇರಿದ್ದ ಕಂಪ್ಲಿ ಗಣೇಶ್​ ಅಲ್ಲಿಂದಲೇ ಜಾಮೀನು ಅರ್ಜಿ ಸಲ್ಲಿಸಿದ್ದರು.

Comments are closed.