ಕರ್ನಾಟಕ

ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ನಾಮಪತ್ರ ಸಲ್ಲಿಕೆ ಸಂದರ್ಭ ಕಾರ್ಯಕರ್ತರು ಕೇಸರಿ ಪೇಟಾ ತೊಟ್ಟಿದ್ದು ಯಾಕೆ ಗೊತ್ತಾ?

Pinterest LinkedIn Tumblr


ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಅವರ ನಾಮಪತ್ರ ಸಲ್ಲಿಕೆಯ ವೇಳೆ ಅವರ ಬೆಂಬಲಿಗರು ಕೇಸರಿ ಪೇಟಾ ತೊಟ್ಟು, ಕುಂಕುಮ ಇಟ್ಟುಕೊಂಡು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.

ಇಂದು ರಿಜ್ವಾನ್ ಅರ್ಷದ್ ಅವರು ನಾಮಪತ್ರ ಸಲ್ಲಿಸಲು ಮೆರವಣಿಗೆ ಮೂಲಕ ಬೆಂಬಲಿಗರೊಂದಿಗೆ ಸಾಗುತ್ತಿದ್ದರು. ಈ ವೇಳೆ ಅವರ ಬೆಂಬಲಿಗರೇ ಕೇಸರಿ ಪೇಟ ಹಾಗೂ ಕೇಸರಿ ಕುಂಕುಮ ತೊಟ್ಟು ರ್ಯಾಲಿಯಲ್ಲಿ ಭಾಗಿಯಾಗಿದ್ದ ದೃಶ್ಯ ಕಂಡುಬಂದಿತ್ತು. ಬಿಜೆಪಿ ಮಾತ್ರ ಹಿಂದೂಗಳ ಧ್ವನಿಯಲ್ಲ, ಕಾಂಗ್ರೆಸ್ ಕೂಡ ಹಿಂದೂಗಳ ಪರವಿದೆ ಎಂದು ಸಂದೇಶ ಸಾರಲು ರಿಜ್ವಾನ್ ಅರ್ಷದ್ ಬೆಂಬಲಿಗರು ಕುಂಕುಮ, ಪೇಟಾ ಧರಿಸಿದ್ದರು.

ರಿಜ್ವಾನ್ ಅವರು ಕೇವಲ ಮುಸ್ಲಿಮರ ಪರವಾಗಿ ಮಾತ್ರ ಇರಲ್ಲ, ಹಿಂದೂಗಳ ಪರ ಕೂಡ ನಿಲ್ಲುತ್ತಾರೆ. ಇದರ ಸಂಕೇತವಾಗಿ ಕೇಸರಿ ಪೇಟಾ, ಕೇಸರಿ ಕುಂಕುಮ ತೊಟ್ಟಿದ್ದೇವೆ ಎಂದು ಹೇಳಿದ ರಿಜ್ವಾನ್ ಬೆಂಬಲಿಗರು ಕೇಸರಿ ಕೇವಲ ಬಿಜೆಪಿಯ ಸ್ವತ್ತಲ್ಲ ಎಂದು ಹೇಳಿ ಕಿಡಿಕಾರಿದರು.

Comments are closed.