ಕರ್ನಾಟಕ

ನಟಿ ರಾಗಿಣಿ ವಿಷಯವಾಗಿ ಹೊಡೆದಾಡಿಕೊಂಡ ಕೇಸ್‍ಗೆ ಹೊಸ ಟ್ವಿಸ್ಟ್..!

Pinterest LinkedIn Tumblr


ಬೆಂಗಳೂರು: ನಟಿ ರಾಗಿಣಿ ಸ್ನೇಹಿತರ ಗಲಾಟೆ ಪ್ರಕರಣ ಇದೀಗ ಹೊಸ ಟ್ವಿಸ್ಟ್ ಪಡೆದುಕೊಂಡಿದೆ. ತುಪ್ಪದ ಬೆಡಗಿ ಗೆಳೆಯ ರವಿಗೆ ಆತನ ಪತ್ನಿಯೇ ಫೋನ್ ಕರೆ ಮಾಡಿ ಎಚ್ಚರಿಕೆ ನೀಡಿದ್ದರು. ಆ ಬೆನ್ನಲ್ಲೇ ರವಿಗೆ ಥಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪತಿ ರವಿಗೆ ಕರೆ ಮಾಡಿದ ಪತ್ನಿ, ನೀನು ರಾಗಿಣಿ ಜೊತೆ ಹೋಗಿದ್ದೀಯಾ? ನಿನಗೆ ಯಾರಾದ್ರೂ ಬಂದು ಒದೆ ಕೊಡುತ್ತಾರೆ. ನನ್ನ ಬಾಳು ಹಾಳು ಮಾಡಿದ್ದೀಯ. ನಿನ್ನನ್ನ ನಾನು ಬಿಡಲ್ಲ. ಮದುವೆ ಆಗಿ ಬೇರೆ ಹುಡುಗಿಯರ ಜೊತೆ ಸುತ್ತಾಡುತ್ತಿದ್ದಿ. ನಿನಗೆ ಏನು ಮಾಡಿದ್ರೂ ಬುದ್ಧಿ ಬರಲ್ಲ. ನೀನು ಎಲ್ಲಿದ್ದೀಯ ಎಂದು ಗೊತ್ತು. ಅಲ್ಲಿಗೆ ಬಂದು ಒಬ್ಬ ಬುದ್ಧಿ ಕಲಿಸುತ್ತಾನೆ ಎಂದು ಪತ್ನಿಯೇ ರವಿಗೆ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ. ಈ ವಾರ್ನಿಂಗ್ ಬಳಿಕ ಹೋಟೆಲ್‍ಗೆ ಬಂದಿದ್ದ ರವಿಗೆ ಗಣಿ ಉದ್ಯಮಿ ಶಿವಕುಮಾರ್ ಥಳಿಸಿದ್ದಾರೆ ಎನ್ನಲಾಗಿದೆ.

ಏನಿದು ಪ್ರಕರಣ?:
ಬೆಂಗಳೂರಿನ ಖಾಸಗಿ ಹೋಟೆಲ್ ರಿಟ್ಜ್ ಕಾರ್ಲ್ ಟನ್ ನಲ್ಲಿ ಸ್ಯಾಂಡಲ್ ವುಡ್ ನಟಿ ರಾಗಿಣಿ ದ್ವಿವೇದಿಗಾಗಿ ಇಬ್ಬರು ಗೆಳೆಯರಾದ ಉದ್ಯಮಿ ಶಿವಪ್ರಕಾಶ್ ಚಿಪ್ಪಿ ಹಾಗೂ ಆರ್ ಟಿಒ ಅಧಿಕಾರಿ ರವಿ ಕಿತ್ತಾಡಿಕೊಂಡಿದ್ದರು. ಶನಿವಾರ ರಾತ್ರಿ ಹೋಟೆಲ್ ನಲ್ಲಿ ಶಿವಪ್ರಕಾಶ್ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ನಟಿ, ತಮ್ಮ ಗೆಳೆಯ ರವಿಯೊಂದಿಗೆ ಹೋಟೆಲ್‍ಗೆ ತೆರಳಿದ್ದರು. ಇದನ್ನು ಕಂಡ ಶಿವಪ್ರಕಾಶ್, ರವಿಯೊಂದಿಗೆ ಕಿರಿಕ್ ಮಾಡಿಕೊಂಡಿದ್ದಾರೆ. ಅಲ್ಲದೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ. ಇಬ್ಬರ ನಡುವೆ ಆರಂಭವಾದ ಜಗಳ ತಾರಕಕ್ಕೇರಿ ಬಳಿಕ ಬಿಯರ್ ಬಾಟಲಿಯಿಂದ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಘಟನೆಯಿಂದ ಗಾಯಗೊಂಡ ಬಳಿಕ ರವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ನಂತರ ಅಶೋಕ ನಗರ ಪೊಲೀಸ್ ಠಾಣೆಗೆ ತೆರಳಿ ಲಿಖಿತ ದೂರು ನೀಡಿದ್ದಾರೆ. ರವಿ ನೀಡಿದ ದೂರಿನ ಅನ್ವಯ ಪೊಲೀಸರು ಎಫ್‍ಐಆರ್ ದಾಖಲಿಸಿ ಶಿವಪ್ರಕಾಶ್ ರನ್ನು ವಿಚಾರಣೆಗೆ ಒಳಪಡಿಸಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದುಬಂದಿತ್ತು.

ನಟಿ ರಾಗಿಣಿ ದ್ವಿವೇದಿ ಮೊದಲು ಉದ್ಯಮಿ ಶಿವಪ್ರಕಾಶ್ ನನ್ನ ಪ್ರೀತಿಸುತ್ತಿದ್ದರು. ಆದರೆ ಆ ಬಳಿಕ ಕೋರಮಂಗಲ ಆರ್ ಟಿಒ ಕಚೇರಿಯಲ್ಲಿ ಆಫೀಸರ್ ಆಗಿ  ಕಾರ್ಯನಿರ್ವಹಿಸುತ್ತಿರುವ ರವಿ ಅವರೊಂದಿಗೆ ಒಡನಾಟ ಹೆಚ್ಚಿತ್ತು. ರಾತ್ರಿ ನಡೆದ ಗಲಾಟೆಯ ಬಳಿಕ ಶಿವಪ್ರಕಾಶ್, ರಾಗಿಣಿ ಅವರ ಬಳಿ ಇದ್ದ ಮರ್ಸಿಡೀಸ್ ಬೆಂಜ್ ಕಾರು ಕಿತ್ತುಕೊಂಡಿದ್ದಾರೆ. ರಾಗಿಣಿ ಅವರ ಬಳಿ ಇದ್ದ ಕಾರನ್ನು ಶಿವಪ್ರಕಾಶ್ ಕೊಡಿಸಿದ್ದರು ಎನ್ನಲಾಗಿದ್ದು, ಆದ್ದರಿಂದಲೇ ಕಾರನ್ನು ಕಿತ್ತುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು.

Comments are closed.