ಕರ್ನಾಟಕ

ರೌಡಿ ಲಕ್ಷ್ಮಣ ಕೊಲೆ ಪ್ರಕರಣ: ಆರು ಆರೋಪಿಗಳ ಬಂಧನ

Pinterest LinkedIn Tumblr


ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಭಾರೀ ಕುತೂಹಲ ಕೆರಳಿಸಿರುವ ರೌಡಿ ಲಕ್ಷ್ಮಣ್​​ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು 6 ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಲ್ಲಿ ಮದ್ದೂರಿನ ಜೆಡಿಎಸ್​​ ಘಟಕದ ನಾಯಕಿಯೊಬ್ಬರ ಮಗಳು ವರ್ಷಿಣಿ ಹೆಸರು ಪ್ರಮುಖವಾಗಿದೆ. ಕ್ಯಾಟ್ ರಾಜ, ಹೇಮಂತ್, ರೂಪೇಶ್, ದೇವರಾಜ ಅಲಿಯಾಸ್ ಕರಿಯ ಮತ್ತು ವಿಜಿ ಎಂಬುವವರು ಇತರ ಬಂಧಿತ ಆರೋಪಿಗಳಾಗಿದ್ದಾರೆ.

ಮಾರ್ಚ್​​ 7 ರಂದು ಹಾಡಹಗಲೇ ರೌಡಿ ಲಕ್ಷ್ಮಣನ ಕೊಲೆಯಾಗಿತ್ತು. ಕೊಲೆಯಲ್ಲಿ ವರ್ಷಿಣಿ ಎಂಬ ಯುವತಿಯ ಕೈವಾಡವಿದೆ ಎನ್ನಲಾಗಿದೆ.

‘ನನ್ನ ಪತಿ ಕೊಲೆ ಆಗುವ ಒಂದು ಗಂಟೆ ಮೊದಲು ವರ್ಷಿಣಿಯಿಂದ ವಾಟ್ಸ್‌ಆ್ಯಪ್‌ ಕರೆ ಬಂದಿತ್ತು. ನನ್ನ ಪತಿ ಕೊಲೆಗೆ ಆಕೆಯೇ ಕಾರಣ ಇರಬಹುದು’ ಎಂದು ಲಕ್ಷ್ಮಣನ ಹೆಂಡತಿ ಮಹಾಲಕ್ಷ್ಮಿ ಲೇಔಟ್‌ ಠಾಣೆ ಪೊಲೀಸರಿಗೆ ಹೇಳಿಕೆ ನೀಡಿದ್ದರು. ಈ ಹೇಳಿಕೆ ಆಧರಿಸಿ ಸಿಸಿಬಿ ಅಧಿಕಾರಿಗಳು ತನಿಖೆ ಮುಂದುವರಿಸಿ ಕೆಲ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು. ಬಳಿಕ ಸಿಸಿಬಿ ಪೊಲೀಸರು ಮಂಗಳವಾರ ವರ್ಷಿಣಿಯನ್ನು ಬಂಧಿಸಿದ್ದಾರೆ.

ಲಕ್ಷ್ಮಣ್​​​ ಅಂದು ಮನೆಯಿಂದ ಹೊರಡುವ ಮೊದಲು ವರ್ಷಿಣಿಯಿಂದ ವಾಟ್ಸ್‌ಆ್ಯಪ್‌ ಕರೆ ಬಂದಿದ್ದು, ಅವರು ಅದನ್ನು ಅಲ್ಲಿ ಸ್ವೀಕರಿಸದೇ, ಮನೆಯಿಂದ ಕೆಳಕ್ಕೆ ಹೋಗಿ ಸ್ವೀಕರಿಸಿದ್ದರು. ಆಕೆ ಲಂಡನ್‌ನಲ್ಲಿ ಇದ್ದಾಳೆ ಎಂದು ಹೇಳಿದ್ದನ್ನು ನಾನು ನಂಬಿದ್ದೆ. ಆದರೆ, ಆಕೆ ಲಂಡನ್‌ಗೆ ಹೋಗೇ ಇಲ್ಲ. ಇಲ್ಲೇ ಎಲ್ಲೋ ಇದ್ದುಕೊಂಡು ನನ್ನ ಕುಟುಂಬವನ್ನು ಹಾಳು ಮಾಡಿಬಿಟ್ಟಳು. ಇದನ್ನೆಲ್ಲ ಕೊಲೆ ಆದ ದಿನವೇ ಪೊಲೀಸರಿಗೆ ಹೇಳಿದ್ದೆ. ನಮ್ಮನ್ನು ‘ಅಕ್ಕ-ಅಂಕಲ್‌’ ಎಂದು ಮಾತಾಡಿಸಿಕೊಂಡೇ ಎಲ್ಲವನ್ನೂ ಮುಗಿಸಿಬಿಟ್ಟಳು. ನಮ್ಮ ಮನೆಯಲ್ಲಿ ಅವಳ ವಿಷಯಕ್ಕೆ ಬಿಟ್ಟರೇ ಬೇರೆ ಯಾವುದೇ ಕಾರಣಕ್ಕೆ ಜಗಳವಾಗುತ್ತಿರಲಿಲ್ಲ” ಎಂದು ಲಕ್ಷ್ಮಣ್‌ ಹೆಂಡತಿ ಚೈತ್ರಾ ಹೇಳಿದ್ದಾರೆ.

Comments are closed.