ಕರ್ನಾಟಕ

2014ರ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಕೊಟ್ಟಿದ್ದ ಪ್ರಮುಖ ಭರವಸೆಗಳ ಪಟ್ಟಿ

Pinterest LinkedIn Tumblr


ಬೆಂಗಳೂರು: ಈಗ ಚುನಾವಣೆ ಘೋಷಣೆಯಾಗಿದೆ. ಎಲ್ಲಾ ಪಕ್ಷಗಳೂ ಪ್ರಣಾಳಿಕೆ ಬಿಡುಗಡೆಗೆ ಸಜ್ಜಾಗಿವೆ. ಪ್ರತೀ ಚುನಾವಣೆಯಲ್ಲೂ ಪ್ರತಿಯೊಂದು ಪಕ್ಷವೂ ತಾನು ಅಧಿಕಾರಕ್ಕೆ ಬಂದರೆ ಏನೆಲ್ಲಾ ಮಾಡುತ್ತೇವೆ ಎಂದು ತಿಳಿಸುವ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತವೆ. ಆದರೆ, ಅಧಿಕಾರಕ್ಕೆ ಬಂದ ನಂತರ ಈ ಪ್ರಣಾಳಿಕೆಯಲ್ಲಿನ ಯಾವ್ಯಾವ ಭರವಸೆಗಳು ಈಡೇರಿವೆ ಎಂಬುದು ಹೊಸ ಚುನಾವಣೆಯ ಪ್ರಮುಖ ಚರ್ಚಾ ವಿಷಯಗಳಲ್ಲಿ ಒಂದಾಗಬಹುದು. ಈ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷವು 2014ರ ಚುನಾವಣೆ ವೇಳೆ ಬಿಡುಗಡೆ ಮಾಡಿದ ಪ್ರಣಾಳಿಕೆಯ ಪ್ರಮುಖ ಅಂಶಗಳನ್ನು ಹಲವರು ಅವಲೋಕನ ನಡೆಸಿದ್ದಾರೆ. ಬಿಜೆಪಿಯ ಸೇರಿದಂತೆ ವಿವಿಧ ಪಕ್ಷಗಳ ಪ್ರಣಾಳಿಕೆಗಳ ಹೈಲೈಟ್ಸ್ ಇಲ್ಲಿದೆ.

2014ರ ಚುನಾವಣೆಯಲ್ಲಿ ಬಿಜೆಪಿಯ ಪ್ರಣಾಳಿಕೆ ಹೈಲೈಟ್ಸ್:
1) ವಿದೇಶಗಳಲ್ಲಿರುವ ಅದರಲ್ಲೂ ಸ್ವಿಸ್ ಬ್ಯಾಂಕ್​ಗಳಲ್ಲಿರುವ ಭಾರತೀಯರ ಕಪ್ಪು ಹಣವನ್ನು ದೇಶಕ್ಕೆ ವಾಪಸ್ ತರುವುದು
2) ಆಧುನಿಕ ತಂತ್ರಜ್ಞಾನದ ನೆರವಿನಿಂದ ರೈತರಿಗೋಸ್ಕರ ಇಡೀ ದೇಶಕ್ಕೆ ಒಂದು ಸಮಗ್ರ ರಾಷ್ಟ್ರೀಯ ಕೃಷಿ ಮಾರುಕಟ್ಟೆ ರಚಿಸುವುದು; ಬೆಲೆ ಸ್ಥಿರತೆಯ ಫಂಡ್ ಸ್ಥಾಪಿಸುವುದು.
3) ಇ-ಆಡಳಿತದ ಮೂಲಕ ಭ್ರಷ್ಟಾಚಾರವನ್ನು ನಿಯಂತ್ರಿಸುವುದು; ಹಾಗೆಯೇ ಇ-ಆಡಳಿತದಿಂದ ಗ್ರಾಮೀಣ ಭಾಗದಲ್ಲಿ ಐಟಿ ಉದ್ಯೋಗಗಳನ್ನು ಸೃಷ್ಟಿಸುವುದು.
4) ವಿವಿಧ ನೀತಿ ಪರಿಷ್ಕರಣೆ, ಬ್ಯಾಂಕಿಂಗ್ ಕ್ಷೇತ್ರಗಳ ಸುಧಾರಣೆ ಹೀಗೆ ವಿವಿಧ ಕ್ರಮಗಳ ಮೂಲಕ ಆರ್ಥಿಕ ಅಭಿವೃದ್ಧಿ ಸಾಧಿಸುವುದು.
5) ಆರೋಗ್ಯ ಕ್ಷೇತ್ರದ ಸುಧಾರಣೆಗಾಗಿ ಒಂದು ಸಮಗ್ರ ಆರೋಗ್ಯ ನೀತಿ ಜಾರಿಗೆ ತರುವುದು; ಸರಕಾರಿ ಆಸ್ಪತ್ರೆಗಳ ಆಧುನೀಕರಣ, ಪ್ರತಿಯೊಂದು ರಾಜ್ಯದಲ್ಲೂ ಎಐಐಎಂಎಸ್​ನಂತಹ ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳ ಸ್ಥಾಪಿಸುವುದು; ಯೋಗ ಮತ್ತು ಆಯುರ್ವೇದ ಮೂಲದ ಔಷಧಿಗಳ ಬಳಕೆಗೆ ಒತ್ತು ಕೊಡುವುದು
6) ತೆರಿಗೆ ಪದ್ಧತಿಯಲ್ಲಿ ಸುಧಾರಣೆ ತರುವುದು; ಸರಳ ತೆರಿಗೆಯ ವ್ಯವಸ್ಥೆ ರೂಪಿಸುವುದು; ಎಲ್ಲಾ ರಾಜ್ಯ ಸರಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಎಸ್​ಟಿ ಜಾರಿಗೆ ತರುವುದು.
7) ಕೃಷಿ, ಕೈಗಾರಿಕೆ, ಮಧ್ಯಮ-ಸಣ್ಣ ಉದ್ಯಮ ಮತ್ತು ಸೇವಾ ಕ್ಷೇತ್ರಗಳಲ್ಲಿ ಕಾರ್ಯಕ್ಷಮತೆ ಹೆಚ್ಚಿಸುದು ಹಾಗೂ ಹೊಸ ಉದ್ಯೋಗ ಸೃಷ್ಟಿಸುವುದು.
8) ಸರಕು ಸಾಗಣೆ ಮತ್ತು ಕೈಗಾರಿಕೆ ಕಾರಿಡಾರ್​ಗಳ ನಿರ್ಮಾಣಕ್ಕೆ ಒತ್ತು ಕೊಡುವುದು; ಹೊಸ ಹೆದ್ದಾರಿ ಮತ್ತು ರೈಲ್ವೆ ಮಾರ್ಗಗಳ ಮೂಲಕ ಈಶಾನ್ಯ ಪ್ರದೇಶಗಳು ಹಾಗೂ ಜಮ್ಮು ಕಾಶ್ಮೀರ ರಾಜ್ಯವನ್ನು ಭಾರತದ ಇತರೆ ಪ್ರದೇಶಗಳಿಗೆ ಸುಲಭ ಸಂಪರ್ಕ ಸಾಧ್ಯವಾಗಿಸುವುದು; ಈ ಮೂಲಕ ಈ ಪ್ರದೇಶಗಳ ಅಭಿವೃದ್ಧಿ ಸಾಧಿಸುವುದು.
9) ಕೇಂದ್ರ ಮತ್ತು ರಾಜ್ಯ ಸರಕಾರಗಳ ನಡುವೆ ಬಾಂಧವ್ಯ ವೃದ್ಧಿಸುವುದು; ರಾಜ್ಯಗಳ ನಿರ್ಧಾರಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುವುದು; ಟೀಮ್ ಇಂಡಿಯಾವೆಂದರೆ ಪ್ರಧಾನಿ ಜೊತೆ ದೆಹಲಿಯಲ್ಲಿರುವ ತಂಡವಷ್ಟೇ ಅಲ್ಲ, ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಇತರ ಅಂಗಗಳನ್ನೂ ಒಳಗೊಳ್ಳುವುದು.

ಇದನ್ನೂ ಓದಿ: ಡಿಕೆಶಿ ವಿರುದ್ಧವೇ ತಿರುಗಿಬಿದ್ದ ಮಂಡ್ಯ ಕಾಂಗ್ರೆಸ್ಸಿಗರು: ಜೆಡಿಎಸ್​​ಗೆ ನಮ್ಮ ಬೆಂಬಲವಿಲ್ಲ ಎಂದು ಖಡಕ್​​​ ಸಂದೇಶ!

ಕಾಂಗ್ರೆಸ್ ಪಕ್ಷ ಕೊಟ್ಟಿದ್ದ ಪ್ರಮುಖ ಭರವಸೆಗಳೇನು?
1) ಮುಂದಿನ 10 ವರ್ಷದಲ್ಲಿ ಮೂಲಭೂತ ಸೌಕರ್ಯಕ್ಕೆ 1 ಟ್ರಿಲಿಯನ್ ಡಾಲರ್ (ಸುಮಾರು 70 ಲಕ್ಷ ಕೋಟಿ ರೂ) ಬಂಡವಾಳ ಹೂಡಿಕೆಯಾಗುವಂತೆ ಮಾಡುವುದು
2) ಎಲ್ಲಾ ರಫ್ತು ತೆರಿಗೆಗಳನ್ನು ಮನ್ನಾ ಮಾಡುವುದು
3) ಆಯ್ದ ಹಾಗೂ ಅಗತ್ಯವಿರುವ ವಸ್ತುಗಳಿಗೆ ಮಾತ್ರ ಸಬ್ಸಿಡಿ ನೀಡುವುದು
4) ವಿದೇಶೀ ಬಂಡವಾಳ ಹೂಡಿಕೆಯ ಪ್ರಕ್ರಿಯೆ ಸರಳಗೊಳಿಸುವುದು
5) ರೈಲು ಸೇವೆ ಉತ್ತಮಗೊಳಿಸುವುದು;
6) ನಿರಂತರ ವಿದ್ಯುತ್ ಪೂರೈಕೆ
7) ಮುಂದಿನ 3 ವರ್ಷಗಳಲ್ಲಿ ಶೇ. 8ರ ವೇಗದಲ್ಲಿ ಆರ್ಥಿಕ ಅಭಿವೃದ್ಧಿ ಸಾಧಿಸುವುದು
8) 10 ಕೋಟಿ ಉದ್ಯೋಗ ಸೃಷ್ಟಿ
9) 100 ದಿನದಲ್ಲಿ ಜಿಎಸ್​ಟಿ ತೆರಿಗೆ ಪದ್ಧತಿ ಜಾರಿಗೆ ತರುವುದು
10) ಮಹಿಳಾ ಮೀಸಲಾತಿ ಕಾನೂನು ತರುವುದು

2014ರಲ್ಲಿ ಆಮ್ ಆದ್ಮಿ ಪಕ್ಷ ಕೊಟ್ಟಿದ್ದ ಕೆಲ ಭರವಸೆಗಳು:
1) ಭ್ರಷ್ಟಾಚಾರ ಮುಕ್ತ ದೇಶ
2) ಸರ್ವರಿಗೂ ಸುಲಭವಾಗಿ ಆರೋಗ್ಯ ಸೇವೆ ಸಿಗುವಂತೆ ಮಾಡುವುದು
3) ಸರ್ವರಿಗೂ ಶಿಕ್ಷಣ
4) ಗ್ರಾಮೀಣ ಆರ್ಥಿಕತೆಯ ಪುನಶ್ಚೇತನಕ್ಕೆ ಒತ್ತು
5) ಅತ್ಯಾಧುನಿಕ ಮಿಲಿಟರಿ ವ್ಯವಸ್ಥೆ

Comments are closed.