ಕರ್ನಾಟಕ

2019ರ ಚುನಾವಣೆ: ವಿವಿ ಪ್ಯಾಟ್​ ಬಳಕೆ; ಏನಿದು ಹೊಸ ತಂತ್ರಜ್ಞಾನ?

Pinterest LinkedIn Tumblr
Officials en Monday.

ಬೆಂಗಳೂರು: ಕಾಂಗ್ರೆಸ್​ ಪಕ್ಷ ಈ ಹಿಂದಿನಿಂದಲೂ ಚುನಾವಣೆ ಸೋತ ಕಡೆಗಳಲ್ಲೆಲ್ಲಾ ಇವಿಎಂ ಟ್ಯಾಂಪರಿಂಗ್​ ಮಾಡಲಾಗುತ್ತಿದೆ ಎಂಬ ಆರೋಪ ಮಾಡಿಕೊಂಡು ಬಂದಿದೆ. ಆದರೆ ಇವಿಎಂ ನಿಜಕ್ಕೂ ಟ್ಯಾಂಪರ್​ ಮಾಡಬಹುದೇ? ಮತ್ತು ಅದನ್ನು ವಿವಿಪ್ಯಾಟ್​ ಅಳವಡಿಕೆಯಿಂದ ತಡೆಯಬಹುದೇ? ಇವಿಎಂಗಳ ಮೇಲಿನ ಆರೋಪ ವಿವಿ ಪ್ಯಾಟ್‌ಗಳನ್ನು ಅಳವಡಿಸಿದ ನಂತರವೂ ಮುಂದುವರೆಯಲಿದೆಯೇ? ಇಷ್ಟಕ್ಕೂ ಈ ವಿವಿ ಪ್ಯಾಟ್‌ ಎಂದರೇನು? ಅದಕ್ಕೆ ಉತ್ತರ ಇಲ್ಲಿದೆ.

ಏನಿದು ವಿವಿ ಪ್ಯಾಟ್‌?:

ವೋಟರ್‌ ವೆರಿಫೈಡ್‌ ಪೇಪರ್‌ ಆಡಿಟ್‌ ಟ್ರೇಲ್‌ (ವಿವಿಪ್ಯಾಟ್‌) ಇವಿಎಂಗಳಿಗೆ ಅಳವಡಿಸುವುದರಿಂದ ಮತದಾರರಿಗೆ ತಮ್ಮ ಮತ ಯಾರಿಗೆ ಹೋಗಿದೆ ಎಂಬ ಬಗ್ಗೆ ಮಾಹಿತಿ ಸಿಗುತ್ತದೆ. ಈ ವಿವಿಪ್ಯಾಟ್‌ಗಳು ಸ್ವತಂತ್ರ್ಯ ಪರಿಶೀಲನಾ ಯಂತ್ರವಾಗಿದ್ದು, ಇವಿಎಂನಲ್ಲಿ ಒತ್ತಿದ ಮತ ಯಾವ ಪಕ್ಷದ ಯಾವ ಅಭ್ಯರ್ಥಿಗೆ ಹೋಗಿದೆ ಎಂಬುದನ್ನು ತೋರಿಸುತ್ತದೆ. ಜತೆಗೆ ಮತಗಳನ್ನು ನಾಶಪಡಿಸುವ ಅಥವಾ ಮತ್ತೊಬ್ಬ ಅಭ್ಯರ್ಥಿಗೆ ಹೋಗುವಂತೆ ಮಾಡುವ ಕುತಂತ್ರಗಳನ್ನೂ ತಡೆಯುತ್ತದೆ.

ಬೆಂಗಳೂರಿನ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಮತ್ತು ಹೈದರಾಬಾದಿನ ಎಲೆಕ್ಟ್ರಾನಿಕ್ಸ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಜಂಟಿಯಾಗಿ ಇವುಗಳನ್ನು ತಯಾರಿಸಿವೆ. ಸುಮಾರು 3173.47 ಕೋಟಿ ರೂ. ವೆಚ್ಚದಲ್ಲಿ ಚುನಾವಣಾ ಆಯೋಗ ಇವುಗಳನ್ನು ರೂಪಿಸಲು ಯೋಜನೆ ಹಾಕಿಕೊಂಡಿತ್ತು.

ವಿವಿಪ್ಯಾಟ್‌ ಬಳಕೆ ಹೇಗೆ?:

ವಿವಿ ಪ್ಯಾಟ್‌ ಪ್ರಿಂಟರ್‌ಗಳಂತೆ ಕಾರ್ಯನಿರ್ವಹಿಸುತ್ತದೆ. ಇವಿಎಂಗಳ ಬ್ಯಾಲಟ್‌ ಯೂನಿಟ್‌ಗಳಿಗೆ ವಿವಿ ಪ್ಯಾಟನ್ನು ಅಳವಡಿಸಿರುತ್ತಾರೆ. ಮತದಾರ ಮತಯಂತ್ರದಲ್ಲಿ ಮತವನ್ನು ಒತ್ತಿದಾಗ ವಿವಿಪ್ಯಾಟ್‌ನಿಂದ ಒಂದು ರಶೀದಿ ಪ್ರಿಂಟ್‌ ಆಗಿ ಹೊರಬರುತ್ತದೆ. ಏಳು ಸೆಕಂಡ್‌ಗಳ ಕಾಲ ಆ ಸ್ಲಿಪ್‌ ಹಾಗೆಯೇ ಇರುತ್ತದೆ.

ಆ ಏಳು ಸೆಕಂಡ್‌ಗಳ ಒಳಗೆ ಮತದಾರ ತಾನು ಹಾಕಿದ ಮತ ತನ್ನಿಷ್ಟದ ಅಭ್ಯರ್ಥಿಗೇ ಹೋಗಿದೆಯಾ ಇಲ್ಲವಾ ಎಂಬುದನ್ನು ನೋಡಿಕೊಳ್ಳಬಹುದು. ಆದರೆ ಏಳು ಸೆಕಂಡ್‌ಗಳ ನಂತರ ಅದು ಮತ್ತೆ ಬಾಕ್ಸ್‌ ಒಳಗೆ ಹೋಗುತ್ತದೆ. ಸ್ಲಿಪ್‌ ಮತದಾರನ ಕೈಗಾಗಲೀ ಅಥವಾ ಇನ್ನೊಬ್ಬರ ಕೈಗಾಗಲೀ ಸಿಗುವುದಿಲ್ಲ. ಆದ್ದರಿಂದ ಮತದಾರನ ಮತ ರಹಸ್ಯವಾಗಿಯೇ ಉಳಿಯುತ್ತದೆ.

ಜತೆಗೆ ಬ್ಯಾಲಟ್‌ ಸ್ಲಿಪ್‌ ಬೂತ್‌ ಅಧಿಕಾರಿಗೆ ಸಿಗುವುದೂ ತೀರಾ ವಿರಳ ಎನ್ನಲಾಗಿದೆ.

ಉಪಯೋಗವೇನು?:

ವಿವಿಪ್ಯಾಟ್‌ ಬಳಕೆಯಿಂದ ಮತದಾರರಿಗೆ ತಮ್ಮ ಮತ ಯಾರಿಗೆ ಹೋಗಿದೆ ಎಂಬುದು ತಿಳಿಯುತ್ತದೆ. ಹಾಗೇನಾದರೂ ತಮ್ಮ ಇಚ್ಚೆಯ ಅಭ್ಯರ್ಥಿಗಲ್ಲದೇ ಬೇರೆ ಅಭ್ಯರ್ಥಿಗೆ ಮತ ಹೋಗಿದ್ದೇ ಆದಲ್ಲಿ, ಅಲ್ಲಿಯೇ ಇರುವ ಚುನಾವಣಾ ಬೂತ್‌ ಅಧಿಕಾರಿಯ ಗಮನಕ್ಕೆ ತರಬಹುದು. ಜತೆಗೆ ಅಧಿಕಾರಿ ಮತದಾರರು ನೀಡುವ ದೂರನ್ನು ದಾಖಲಿಸಬೇಕು ಮತ್ತು ಮತ ಎಣಿಕೆ ಸಮಯದಲ್ಲಿ ಅದನ್ನು ಪರಿಗಣಿಸಬೇಕು.

ಈ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಒಟ್ಟೂ 56,696 ಮತಗಟ್ಟೆಗಳು ಇರಲಿದ್ದು 4.96 ಕೋಟಿ ಮತದಾರರಿದ್ದಾರೆ. ಇವಿಎಂ ವಿರೂಪಗೊಳಿಸುವ ಮೂಲಕ ಬಿಜೆಪಿ ಅಧಿಕಾರ ಪಡೆಯುತ್ತಿದೆ ಎಂಬ ಆರೋಪಗಳಿಗೆ ಈ ಬಾರಿ ಸರಿಯಾದ ಉತ್ತರ ಸಿಗಲಿದೆ.

ಚುನಾವಣಾ ಆಯೋಗ ಹೇಳುವ ಪ್ರಕಾರ ಇವಿಎಂ ಟ್ಯಾಂಪರ್‌ ಮಾಡಲು ಸಾಧ್ಯವಿಲ್ಲ, ಜತೆಗೆ ವಿವಿ ಪ್ಯಾಟ್‌ಗಳನ್ನು ಅಳವಡಿಸುವುದರಿಂದ ಮತದಾನ ಮತ್ತಷ್ಟು ಪಾರದರ್ಶಕವಾಗಲಿದೆ ಎನ್ನುತ್ತದೆ ಚುನಾವಣಾ ಆಯೋಗ.

ಇವಿಎಂ ಬಗ್ಗೆ ಆರೊಪ ಮಾಡುತ್ತಿದ್ದವರಲ್ಲಿ ಮುಂಚೂಣಿಯಲ್ಲಿದ್ದವರು ಕಾಂಗ್ರೆಸ್‌ ಮುಖಂಡರು. ಈಗ ಕಾಂಗ್ರೆಸ್‌ ವಿವಿಪ್ಯಾಟ್‌ ಅಳವಡಿಕೆಗೆ ಯಾವ ಪ್ರತಿಕ್ರಿಯೆ ನೀಡಲಿದೆ ಎಂಬುದನ್ನು ಕಾದು ನೋಡಬೇಕು. ಜತೆಗೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದು ಅಲ್ಪಾವಧಿಯಲ್ಲಿ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ಯತ್ನಿಸುತ್ತಿದ್ದಾರೆ. ಬಹಿರಂಗ ಪ್ರಚಾರಕ್ಕೆ ಗುರುವಾರ ಸಂಜೆ 6 ಗಂಟೆಗೆ ಅಂತಿಮ ತೆರೆಬಿದ್ದ ನಂತರ ಮನೆಮನೆಗಳಿಗೆ ಅಭ್ಯರ್ಥಿಗಳು ಭೇಟಿ ನೀಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ಸಹ ಅಭ್ಯರ್ಥಿಗಳು ಬಳಕೆ ಮಾಡುತ್ತಿದ್ದಾರೆ.

ಐದು ವರ್ಷಗಳ ಬಳಿಕ ಮತ್ತೆ ಚುನಾವಣಾ ಕಾವು ಏರಿದ್ದು, ಯಾವ ಪಕ್ಷ ಬಹುಮತ ಪಡೆಯಲಿದೆ ಎಂಬುದು ಕುತೂಹಲಕಾರಿಯಾಗಿದೆ.

ಒಟ್ಟಾರೆ ಪ್ರಕ್ರಿಯೆಯನ್ನು ಚುನಾವಣಾ ಆಯೋಗ ಕಟ್ಟುನಿಟ್ಟಿನಿಂದ ನಡೆಸುವ ಹೊಣೆ ಹೊತ್ತಿದೆ. ಈ ಸಮಯದಲ್ಲಿ ಇವಿಎಂಗಳ ಬಗ್ಗೆ ಬಂದಿರುವ ಆರೋಪವನ್ನು ಅದು ತೊಳೆದುಕೊಳ್ಳುವ ಪ್ರಯತ್ನ ಮಾಡಿದೆ. ಹೀಗಾಗಿಯೇ, ಭಾನುವಾರದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಸುನೀಲ್​ ಅರೋರ, ವಿವಿಪ್ಯಾಟ್ ಬಳಕೆ ಬಗ್ಗೆ ಜನರಿಗೆ ಮಾಹಿತಿ ನೀಡಿ ಎಂದು ವಿಶೇಷವಾಗಿ ಮನವಿ ಮಾಡಿದ್ದಾರೆ.

Comments are closed.