ಕರ್ನಾಟಕ

ನಾನು ಸಿಗಲಿಲ್ಲ ಎಂದು ಹೀಗೆಲ್ಲ ಮಾಡಿದ್ದಾನೆ: ಅಯೋಗ್ಯ ಸಿನ್ಮಾದ ಸಹ ನಟಿ ದೃಶ್ಯ

Pinterest LinkedIn Tumblr


ಬೆಂಗಳೂರು: ಅಯೋಗ್ಯ ಸಿನಿಮಾದ ಸಹ ನಟಿಯಾಗಿರುವ ದೃಶ್ಯಾರ ಮೇಲೆ ಕೆಲವೊಂದು ಆರೋಪಗಳು ಕೇಳಿ ಬಂದಿದ್ದವು. ಇದೀಗ ನಾನು ಸಿಗಲಿಲ್ಲ ಎಂದು ಪ್ರಶಾಂತ್ ಸುಳ್ಳು ಆರೋಪಗಳನ್ನು ಮಾಡಿದ್ದಾನೆ ಎಂದು ದೃಶ್ಯ ಪ್ರತ್ಯಾರೋಪ ಮಾಡಿದ್ದಾರೆ.

ಪ್ರಶಾಂತ್ ಎಂಬವರು ನನ್ನ ಮೇಲೆ ಕೆಲವು ಅರೋಪಗಳನ್ನು ಮಾಡಿದ್ದಾರೆ. ನಾನು ಮತ್ತು ಪ್ರಶಾಂತ್ ಕಳೆದ ಎರಡು ವರ್ಷಗಳಿಂದ ಲಿವಿಂಗ್ ರಿಲೇಶನ್ ಶಿಪ್‍ನಲ್ಲಿದ್ದೀವಿ ಎಂದು ಸುಳ್ಳು ಹೇಳಿದ್ದಾರೆ. ನನ್ನೊಂದಿಗೆ ಅವರ ಸಂಬಂಧವಿಲ್ಲ. ನಾನು ಕಿರುಕುಳ ನೀಡುತ್ತಿದ್ದೆ, ಬ್ಲ್ಯಾಕ್ ಮೇಲ್ ಮಾಡ್ತಿದ್ದೆ ಎಂಬ ಆರೋಪಗಳನ್ನು ನನ್ನ ಮೇಲೆ ಮಾಡಿದ್ದರಿಂದ ತುಂಬಾ ನೋವಾಗಿದೆ ಎಂದು ನಟಿ ದೃಶ್ಯ ಬೇಸರ ವ್ಯಕ್ತಪಡಿಸಿದರು.

ಪ್ರಶಾಂತ್ ಬಳಿ ನಾನು ಯಾವತ್ತು ಹಣ ಕೇಳಿಲ್ಲ. ಅವರು ಫೇಸ್‍ಬುಕ್ ಬಳಕೆ ಮಾಡೋದು ಇಲ್ಲ. ಅದು ಹೇಗೆ ಅವರ ಅಕೌಂಟ್ ಹ್ಯಾಕ್ ಆಗುತ್ತದೆ. ಈಗಾಗಲೇ ನಾನು ಸೈಬರ್ ಕ್ರೈಂನಲ್ಲಿ ದೂರು ದಾಖಲಿಸಿದ್ದೇನೆ. ರಾಜ್‍ಕುಮಾರ್ ಕುಟುಂಬಸ್ಥರ ಹೆಸರು ಬಳಸಿಕೊಂಡು ಓಡಾಡುತ್ತಿದ್ದಾರೆ. ರಾಜ್‍ಕುಮಾರ್ ಹೆಸರನ್ನು ದುರಪಯೋಗ ಮಾಡಿಕೊಳ್ಳುತ್ತಿದ್ದಾರೆ. ಮನೆಗೆ ಬಂದು ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದನು. ಅಲ್ಲದೇ ನನ್ನ ತಂದೆಗೂ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದರಿಂದ 2018ರಲ್ಲಿಯೇ ಕುಶಾಲನಗರದಲ್ಲಿ ಪ್ರಶಾಂತ್ ವಿರುದ್ಧ ದೂರು ದಾಖಲಿಸಿದ್ದೇನೆ ಎಂದರು.

ದೂರು ದಾಖಲಿಸಿದ್ದರ ಪ್ರತಿಕಾರಕ್ಕಾಗಿ ನನ್ನ ವಿರುದ್ಧ ಈ ರೀತಿ ಸೇಡು ತೀರಿಸಿಕೊಳ್ಳುತ್ತಿದ್ದಾನೆ. ನಾನು ಅವನಿಗೆ ಸಿಗಲಿಲ್ಲ ಎಂಬ ಒಂದೇ ಕಾರಣಕ್ಕೆ ಈ ರೀತಿ ನನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಹೇಳಿದ್ದಾರೆ.

Comments are closed.