ಅಂತರಾಷ್ಟ್ರೀಯ

ಭಾರತೀಯ ಯುವತಿಯನ್ನು 4ನೇ ಮದುವೆಯಾಗಿ ಶಾಂತಿ ಸಂದೇಶ ಕಳಿಸಲು ಇಮ್ರಾನ್‌ ಖಾನ್‌ ಸಿದ್ಧತೆ!

Pinterest LinkedIn Tumblr


ಇಸ್ಲಾಮಾಬಾದ್‌: ನಾಲ್ಕನೇ ಮದುವೆಯಾಗಿ ಭಾರತಕ್ಕೆ ಶಾಂತಿ ಸಂದೇಶ ಕಳುಹಿಸಲು ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಗುಟ್ಟಾಗಿ ಸಿದ್ಧತೆ ನಡೆಸಿದ್ದಾರೆ.

ಈ ಬಾರಿ ಅವರು ಭಾರತೀಯ ಯುವತಿಯನ್ನೇ ಮದುವೆಯಾಗಲಿದ್ದು, ಭಾರತದ ಅಳಿಯನಾದ ಮೇಲೆ ಭಾರತ ತಮ್ಮ ದೇಶದ ಮೇಲೆ ದಾಳಿ ನಡೆಸದು ಎಂಬ ನಿರೀಕ್ಷೆ ಹೊಂದಿದ್ದಾರೆ. ಅಲ್ಲದೆ, ನಾಲ್ಕನೇ ಮದುವೆಯಾಗುವ ಮೂಲಕ ‘ನೊಂದ ಜೀವ, ಮತ್ತೆ ನೋಯಿಸಬೇಡಿ’ ಎಂದು ಎಮೋಷನಲ್‌ ಬ್ಲ್ಯಾಕ್‌ಮೇಲ್‌ ಮಾಡಲೂ ಸಂಚು ರೂಪಿಸಿದ್ದಾರೆ ಎನ್ನಲಾಗಿದೆ.

ಈಗಾಗಲೇ ಮೂವರನ್ನು ಮದುವೆಯಾಗಿ ಅವರು ಡೈವೊರ್ಸ್‌ ನೀಡಿದ್ದಾರೆ. ಭಾರತದ ಕಡೆಯಿಂದ ದಾಳಿ ನಡೆಸುವ ಭೀತಿಯಿರುವುದರಿಂದ ಅದನ್ನು ತಪ್ಪಿಸಿಕೊಳ್ಳಲು ಮದುವೆಯ ತಂತ್ರಕ್ಕೆ ಮೊರೆ ಹೋಗಿದ್ದಾರೆಂದು ಸುಳ್‌ಸುದ್ದಿ ಮೂಲಗಳು ಹೇಳಿವೆ.

Comments are closed.