ಕರ್ನಾಟಕ

ನಿಮ್ಮ ಮಡಿಲಲ್ಲಿ ಮಲಗಿ ಜೋರಾಗಿ ಅಳಬೇಕು – ಬಿಗ್‍ಬಾಸ್ ಸೀಸನ್ 5ರ ಸ್ಪರ್ಧಿ

Pinterest LinkedIn Tumblr


ಬೆಂಗಳೂರು: ಬಿಗ್‍ಬಾಸ್ ಸೀಸನ್ 5ರ ಸ್ಪರ್ಧಿ, ಕಿರುತೆರೆ ನಟಿ ಆಶಿತಾ ಚಂದ್ರಪ್ಪ ಅವರು ತನ್ನ ತಾಯಿಯನ್ನು ನೆನಪಿಸಿಕೊಂಡು ಒಂದು ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.

ಆಶಿತಾ ಅವರ ತಾಯಿ ಕೆಲವು ದಿನಗಳ ಹಿಂದೆ ಮೃತಪಟ್ಟಿದ್ದಾರೆ. ಆದ್ದರಿಂದ ತಮ್ಮ ತಾಯಿ ಕಳೆದುಕೊಂಡ ನೋವಿನಲ್ಲಿ ಆಶಿತಾ ಇನ್ ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಹಾಕುವ ಮೂಲಕ ತಮ್ಮ ಅಳಲನ್ನು ಹಂಚಿಕೊಂಡಿದ್ದಾರೆ.

ಇನ್ ಸ್ಟಾಗ್ರಾಂ ಪೋಸ್ಟ್:
“ಅಮ್ಮಾ ನೀವು ನಮ್ಮನ್ನು ಬಿಟ್ಟು ಹೋಗಿ 13 ದಿನಗಳು ಕಳೆದಿವೆ. ಆದರೂ ನೀವಿಲ್ಲದೇ ಪ್ರತಿದಿನವೂ ತುಂಬಾ ಕಠಿಣ ಅನ್ನಿಸುತ್ತಿದೆ. ನೀವು ನಮ್ಮನ್ನು ಅಗಲಿ ಹೋಗಿದ್ದರು, ಮೇಲಿನಿಂದ ನಮ್ಮನ್ನು ನೋಡುತ್ತಿದ್ದೀರಿ ಅಂತ ಗೊತ್ತು. ನಾವು ಅಳುವುದನ್ನು ನೋಡುತ್ತಿದ್ದೀರ. ಅಷ್ಟೇ ಅಲ್ಲದೇ ಎಂದಿನಂತೆ ನಮ್ಮನ್ನು ಬೈಯುತ್ತಾ ಇರುತ್ತೀರಾ, ಆದರೆ ನಾವು ಈಗ ಅದನ್ನು ಕೇಳಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಐ ಮಿಸ್ ಯೂ ಅಮ್ಮಾ.. ಎಂದು ದುಃಖದಿಂದ ಹೇಳಿಕೊಂಡಿದ್ದಾರೆ.

ಅಮ್ಮಾ.. ನೀವಿಲ್ಲದ ನನ್ನ ಜೀವನ ಎಂದಿನಂತೆ ಇಲ್ಲವಾಗಿದೆ. ಪ್ರತಿದಿನ ನಿದ್ದೆ ಮಾಡಲು ಆಗುತ್ತಿಲ್ಲ. ನಿದ್ದೆಯಿಲ್ಲದ ದಿನಗಳು ಯಾವಾಗ ಕೊನೆಯಾಗುತ್ತದೊ ಗೊತ್ತಿಲ್ಲ. ಅಮ್ಮಾ..ನಾನು ನಿಮ್ಮ ಮಡಿಲಲ್ಲಿ ಮಲಗಿ ಜೋರಾಗಿ ಅಳಬೇಕು ಅನ್ನಿಸುತ್ತಿದೆ. ಐ ಲವ್ ಯು, ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಅಮ್ಮಾ…” ಎಂದು ಆಶಿತಾ ತಾಯಿಯನ್ನು ನೆನಪಿಸಿಕೊಂಡು ಅವರ ಫೋಟೋ ಹಾಕಿ ಪೋಸ್ಟ್ ಮಾಡಿದ್ದಾರೆ.

ಆಶಿತಾ ಬಿಗ್‍ಬಾಸ್ ಸೀಸನ್ 5ನೇ ಆವೃತ್ತಿಯಲ್ಲಿ ಸ್ಪರ್ಧಿಯಾಗಿ ಬಿಗ್ ಮನೆಗೆ ಹೋಗಿದ್ದರು. ಸದ್ಯಕ್ಕೆ ಆಶಿತಾ ಖಾಸಗಿ ವಾಹಿನಿಯ ಧಾರಾವಾಹಿಗಳಲ್ಲಿ ಅಭಿನಯಿಸುತ್ತಿದ್ದಾರೆ.

Comments are closed.