ಕರ್ನಾಟಕ

ತಾವು ಹುಟ್ಟಿ, ಬೆಳೆದ ಊರಿಗಾಗಿ ಅಭಿಮಾನಿಗಳಲ್ಲಿ ರಾಕಿಂಗ್ ಸ್ಟಾರ್ ಮನವಿ

Pinterest LinkedIn Tumblr


ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ತಾವು ಬೆಳೆದ ಸಾಂಸ್ಕೃತಿಕ ನಗರಿ ಮೈಸೂರಿಗಾಗಿ ಅಭಿಮಾನಿಗಳ ಬಳಿ ಒಂದು ಮನವಿಯನ್ನು ಮಾಡಿಕೊಂಡಿದ್ದಾರೆ.

ಫೇಸ್‍ಬುಕ್ ನಲ್ಲಿ ಲೈವ್ ಬಂದು ಮಾತನಾಡುವ ಮೂಲಕ ಸ್ವಚ್ಛತಾ ಅಭಿಯಾದಲ್ಲಿ ಮೈಸೂರಿಗಾಗಿ ವೋಟ್ ಮಾಡಿ. ಸ್ವಚ್ಛತಾ ಸರ್ವೇಕ್ಷಣದಲ್ಲಿ ಮೈಸೂರನ್ನು ನಂಬರ್ 1 ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದ್ದಾರೆ.

ವಿಡಿಯೋದಲ್ಲೇನಿದೆ?:
ಎಲ್ಲರಿಗೂ ನಮಸ್ಕಾರ, ಮೈಸೂರು ಸಾಂಸ್ಕೃತಿಕ ರಾಜಧಾನಿ, ನಮ್ಮ ನಾಡಿನ ಹೆಮ್ಮೆಯಾಗಿದೆ. ನಮಗೆಲ್ಲ ಮೈಸೂರು ಎಂದಾಕ್ಷಣ ಮೊದಲು ನೆನಪಾಗುವುದು ದಸರಾ. ವಿಶ್ವದಾದ್ಯಂತ ದಸರಾ ಖ್ಯಾತಿ ಪಡೆದಿದೆ. ಅಷ್ಟೇ ಅಲ್ಲದೇ ಮೈಸೂರು ಪಾಕ್, ಸಿಲ್ಕ್ ಮತ್ತು ಮೈಸೂರು ಮಲ್ಲಿಗೆ ಎಲ್ಲವೂ ಖ್ಯಾತಿ ಪಡೆದಿದೆ. ಮೈಸೂರು ಎಂದಾಕ್ಷಣ ಅದಕ್ಕೊಂದು ಇತಿಹಾಸ, ಸೊಗಡಿದೆ.

ಹೊರ ದೇಶದವರು ಕೂಡ ಮೈಸೂರಿನ ಬಗ್ಗೆ ಮಾತನಾಡುತ್ತಾರೆ. ಅವರು ಕೂಡ ಮೈಸೂರಿನಲ್ಲಿ ಇರಬೇಕು ಎಂದು ಇಷ್ಟಪಡುತ್ತಾರೆ, ಅಷ್ಟು ಒಳ್ಳೆಯ ನಗರವಾಗಿದೆ. ನಾನು ಹುಟ್ಟಿ ಬೆಳೆದಂತಹ ಊರಾಗಿದ್ದು, ನನಗೆ ತುಂಬಾ ಅಟಾಚ್‍ಮೆಂಟ್ ಇದೆ. ನಾನು ಮೈಸೂರಿನವ ಎಂದು ಹೇಳುವುದಕ್ಕೆ ತುಂಬಾ ಹೆಮ್ಮೆಯಾಗುತ್ತವೆ ಎಂದು ಹೇಳಿದ್ದಾರೆ.

ಇತ್ತೀಚೆಗೆ ಸ್ವಚ್ಛತಾ ಅಭಿಯಾನದಲ್ಲಿ ಮೈಸೂರು ಸ್ವಚ್ಛ ಸರ್ವೇಕ್ಷಣದಲ್ಲಿ ನಂಬರ್ 1 ಸ್ಥಾನ ಪಡೆದುಕೊಂಡಿತ್ತು. ಈಗ 2019ರ ಸ್ವಚ್ಛತಾ ಸರ್ವೇಕ್ಷಣದ ಪೋಲ್ ನಡೆಯುತ್ತಿದೆ. ಆದ್ದರಿಂದ ನಾವೆಲ್ಲರೂ ಮೈಸೂರನ್ನು ಹೇಗೆ ಸ್ವಚ್ಛವಾಗಿ ಇಟ್ಟುಕೊಂಡಿದ್ದೀವಿ ಎಂಬುದನ್ನು ಸ್ವಚ್ಛತಾ ಸರ್ವೇಕ್ಷಣ ವೆಬ್ ಸೈಟಿನಲ್ಲಿ ಅಥವಾ ಅಲ್ಲಿಗೆ ಹೋಗಿ ವೋಟ್ ಮಾಡುವ ಮೂಲಕ ಜಾಗೃತಿ ಮೂಡಿಸಬೇಕು. ನಾವು ಸ್ಚಚ್ಛತೆಯನ್ನು ಕಾಪಾಡುತ್ತಿದ್ದೇವೆ ಜೊತೆಗೆ ಜನರು ಕೂಡ ಸಹಾಯ ಮಾಡುತ್ತಿದ್ದಾರೆ ಎಂಬುದನ್ನು ನಾವು ತೋರಿಸಿ ಕೊಡಬೇಕಾಗುತ್ತದೆ ಎಂದಿದ್ದಾರೆ.

ಮತ್ತೆ ಮೈಸೂರನ್ನು ನಂಬರ್ 1 ಆಗಬೇಕು. ಆದ್ದರಿಂದ ಮೈಸೂರು ನಂಬರ್ 1 ಮಾಡುವುದು ನಿಮ್ಮೆಲ್ಲರ ಕರ್ತವ್ಯವಾಗಿದೆ. ವೋಟ್ ಮಾಡುವುದರ ಜೊತೆಗೆ ಸಿಟಿಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ದಯವಿಟ್ಟು ಎಲ್ಲರೂ ಎರಡು ನಿಮಿಷ ಸಮಯ ಮಾಡಿಕೊಂಡು ವೆಬ್ ಸೈಟ್‍ಗೆ ಹೋಗಿ ವೋಟ್ ಮಾಡಿ. ನಾನು ಕೂಡ ವೋಟ್ ಮಾಡುತ್ತಿದ್ದೇನೆ. ಇದು ನನ್ನ ಕಡೆಯಿಂದ ಮನವಿ, ಧನ್ಯವಾದಗಳು ಎಂದು ಹೇಳಿದ್ದಾರೆ.

Comments are closed.