ಕರ್ನಾಟಕ

ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನ ಜೋಡಿಗೆ ನಿಶ್ಚಿತಾರ್ಥ!

Pinterest LinkedIn Tumblr


ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಶೋನ ಕ್ಯೂಟ್ ಕಪಲ್ ಗೋವಿಂದೇ ಗೌಡ ಹಾಗೂ ದಿವ್ಯಾಶ್ರೀ ಅವರ ನಿಶ್ಚಿತಾರ್ಥ ಭಾನುವಾರ ನೆರವೇರಿದೆ.

ಗೋವಿಂದೇ ಗೌಡ ಹಾಗೂ ದಿವ್ಯಾಶ್ರೀ ಭಾನುವಾರ ಬೆಂಗಳೂರಿನ ಮುದ್ದಿನಪಾಳ್ಯದಲ್ಲಿರುವ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಒಬ್ಬರನೊಬ್ಬರು ತಮ್ಮ ಉಂಗುರವನ್ನು ಬದಲಾಯಿಸಿಕೊಂಡಿದ್ದಾರೆ. ಇವರಿಬ್ಬರ ನಿಶ್ಚಿತಾರ್ಥ ಸರಳವಾಗಿ ನಡೆದಿದ್ದು, ಕುಟುಂಬಸ್ಥರು ಹಾಗೂ ಆಪ್ತ ಸಂಬಂಧಿಕರು ಮಾತ್ರ ಆಗಮಿಸಿದ್ದರು.

ಗೋವಿಂದೇ ಗೌಡ ಹಾಗೂ ದಿವ್ಯಾಶ್ರೀ ಕಾರ್ಯಕ್ರಮದಲ್ಲಿ ಒಳ್ಳೆಯ ಸ್ನೇಹಿತರಾಗಿದ್ದರು. ಅಲ್ಲದೇ ಇವರಿಬ್ಬರ ಕುಟುಂಬದವರು ಕೂಡ ಒಳ್ಳೆಯ ಸ್ನೇಹ ಸಂಬಂಧವನ್ನು ಹೊಂದಿದ್ದಾರೆ. ಇಬ್ಬರ ಕುಟುಂಬದವರು ತಮ್ಮ ಮಕ್ಕಳ ಮದುವೆಗಾಗಿ ಜೀವನ ಸಂಗಾತಿಯನ್ನು ಹುಡುಕಾಡುತ್ತಿದ್ದರು.

ಈ ವೇಳೆ ದಿವ್ಯಾಶ್ರೀ ಅವರ ತಂದೆ ಗೋವಿಂದೇ ಗೌಡ ಜೊತೆ ತಮ್ಮ ಮಗಳ ಮದುವೆ ಮಾಡಲು ನಿರ್ಧರಿಸಿದ್ದರು. ಬಳಿಕ ಇಬ್ಬರ ಕುಟುಂಬದವರು ಸೆಪ್ಟೆಂಬರ್ ತಿಂಗಳಿನಲ್ಲಿ ಮದುವೆಯ ಮಾತುಕತೆ ನಡೆಸಿ ಭಾನುವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ದಿವ್ಯಾಶ್ರೀ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯವರಾಗಿದ್ದು, ಮಾರ್ಚ್ 14ರಂದು ಶೃಂಗೇರಿಯಲ್ಲಿ ಇವರ ಮದುವೆ ನಡೆಯಲಿದೆ. ದಿವ್ಯಾಶ್ರೀ ಅವರು ಪುಣ್ಯಾತ್ ಗಿತ್ತೀಯರು ಚಿತ್ರದಲ್ಲಿ ನಟಿಸಿದರೆ, ಗೋವಿಂದೇ ಗೌಡ ಅವರು ಕೆಜಿಎಫ್ ಸಿನಿಮಾದಲ್ಲಿ ನಟಿಸಿದ್ದಾರೆ.

Comments are closed.