ಮನೋರಂಜನೆ

ರೊಮ್ಯಾಂಟಿಕ್ ಮೂಡಿಗೆ ಜಾರಿಸುವ ಕಿಸ್ ಚಿತ್ರದ ಹಾಡು!

Pinterest LinkedIn Tumblr


ಬೆಂಗಳೂರು: ಎ.ಪಿ. ಅರ್ಜುನ್ ನಿರ್ದೇಶನದ ಕಿಸ್ ಚಿತ್ರದ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಶೀಲಾ ಸುಶೀಲ ಎಂಬ ಹಾಡು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಈಗ ಬಿಡುಗಡೆಯಾಗಿರೋ ಎರಡನೇ ಹಾಡು ಎಲ್ಲರನ್ನೂ ಹಾಯಾಗಿ ಮೆಲೋಡಿ ಮೂಡಿಗೆ ಜಾರುವಂತೆ ಮಾಡುವಷ್ಟು ಇಂಪಾಗಿದೆ!

ಎ ಪಿ ಅರ್ಜುನ್ ನೀನೇ ಮೊದಲು ನೀನೇ ಕೊನೆ ಎಂಬ ಹಾಡಿಗೆ ವಿ ಹರಿಕೃಷ್ಣ ಪುತ್ರ ಆದಿತ್ಯ ಸಂಗೀತ ಸಂಯೋಜನೆ ಮಾಡಿದ್ದಾನೆ. ಆದಿತ್ಯ ಮೊದಲ ಹಾಡಿನಲ್ಲಿಯೇ ಭರವಸೆಯನ್ನೂ ಹುಟ್ಟಿಸಿದ್ದಾನೆ. ನಾಯಕ ವಿರಾಟ್ ಮತ್ತು ನಾಯಕಿ ಶ್ರೀಲೀಲಾ ಅವರಂತೂ ರೊಮ್ಯಾಂಟಿಕ್ ಮೂಡಿನಲ್ಲಿ ಮುದ್ದು ಮುದ್ದಾಗಿ ನಟಿಸಿದ್ದಾರೆ. ಶ್ರೇಯಾ ಘೋಶಾಲ್ ಹಾಡಿರೋ ಈ ಹಾಡೂ ಕೂಡಾ ಮೊದಲ ಹಾಡಿನಂತೆಯೇ ಹಿಟ್ ಆಗೋ ಎಲ್ಲ ಲಕ್ಷಣಗಳೂ ದಟ್ಟವಾಗಿವೆ.

ಕಿಸ್ ಹಾಡುಗಳ ಖದರ್ ಎಂಥಾದ್ದೆಂಬುದು ಶೀಲ ಸುಶೀಲಾ ಹಾಡಿನ ಮೂಲಕವೇ ಸಾಬೀತಾಗಿದೆ. ಈ ಸಿನಿಮಾದಲ್ಲಿ ಒಟ್ಟು ಆರು ಹಾಡುಗಳಿವೆ. ಶ್ರೇಯಾ ಘೋಶಾಲ್ ಸೇರಿದಂತೆ ಅನೇಕರ ಮಾಧುರ್ಯ ತುಂಬಿದ ಕಂಠದಲ್ಲಿ ಈ ಹಾಡುಗಳು ಮೂಡಿ ಬಂದಿವೆ. ಇದರಲ್ಲಿ ಒಂದೊಂದೇ ಹಾಡುಗಳನ್ನು ವಾರಕ್ಕೊಂದು ಸಲ ಬಿಡುಗಡೆ ಮಾಡಲು ಅರ್ಜುನ್ ಮುಂದಾಗಿದ್ದಾರೆ. ನೀನೇ ಮೊದಲು ನೀನೇ ಕೊನೆ ಮೂಲಕ ಎರಡನೇ ಹಾಡು ಹೊರ ಬಂದಿದೆ. ಮುಂದಿನ ವಾರ ಮತ್ತೊಂದು ಹಾಡು ಬಿಡುಗಡೆಯಾಗಲಿದೆ.

Comments are closed.