ಕರ್ನಾಟಕ

ಕಾಂಗ್ರೆಸ್ ಶಾಸಕಾಂಗ ಸಭೆಗೆ ಗೈರಾದ 4 ಶಾಸಕರ ಸ್ಥಾನಕ್ಕೆ ಕುತ್ತು!

Pinterest LinkedIn Tumblr


ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಸಭೆಗೆ 4 ಜನ ಶಾಸಕರು ಬಂದಿಲ್ಲ. ನಾರಾಯಣರಾವ್ ಓಡೋಡಿ ಬಂದು ಸಭೆ ಸೇರಿಕೊಂಡಿದ್ದಾರೆ. ಸಿದ್ದರಾಮಯ್ಯ ಪೋನ್ ಕರೆಗೆ ಅಕ್ಷರಶಃ ನಾರಾಯಣರಾವ್ ನಡುಗಿಹೋಗಿದ್ದರು.

ಕಾಂಗ್ರೆಸ್ ಬಳಿ ಇರುವ 80 ಶಾಸಕರ ಲೆಕ್ಕದಲ್ಲಿ ಗೋಕಾಕ್ ಶಾಸಕ, ಶಾಸಕ ಮಹೇಶ್ ಕುಮಟಳ್ಳಿ, ಡಾ.ಉಮೇಶ್ ಜಾಧವ್, ಬಿ.ನಾಗೇಂದ್ರ ಸಭೆಗೆ ಬಂದಿಲ್ಲ. ಉಮೇಶ್ ಜಾಧವ್ ಪತ್ರವೊಂದನ್ನು ಕಳಿಸಿದ್ದಾರೆ ಎನ್ನಲಾಗುತ್ತಿದೆ.

ಕಾಂಗ್ರೆಸ್ ಬಂಡಾಯಕ್ಕೆ ಹೊಸ ಟ್ವಿಸ್ಟ್ ಕೊಟ್ಟವರೆ ಇವರು

ಹಾಗಾದರೆ ಈ ರೆಬಲ್ ಶಾಸಕರು ಯಾವ ಶಿಕ್ಷೆಗೆ ಗುರಿಯಾಗಬಹುದು ಎಂಬ ಅನುಮಾನವೂ ವ್ಯಕ್ತವಾಗಿದೆ. ರಾಜ್ಯ ಕಾಂಗ್ರೆಸ್ ಮತ್ತು ಹೈಕಮಾಂಡ್ ಇವರ ಮೇಲೆ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬ ಚಿಂತನೆ ನಡೆಸಲಿದೆ.

ಆಯ್ಕೆ 1 ಪ್ರಾಥಮಿಕ ಸದಸ್ಯತ್ವದಿಂದ ವಜಾ: ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ವಜಾ ಮಾಡಬಹುದು. ಆದರೆ ಶಾಸಕ ಸ್ಥಾನಕ್ಕೆ ಯಾವುದೆ ಭಂಗ ತರಲು ಸಾಧ್ಯವಿಲ್ಲ.

ಆಯ್ಕೆ 2: ಸ್ಪೀಕರ್‌ಗೆ ದೂರು: ಶಾಸಕರು ಸರಿಯಾದ ರೀತಿಯಲ್ಲಿ ನಡೆದುಳ್ಳುತ್ತಿಲ್ಲ ಎಂದು ಸ್ಪೀಕರ್‌ಗೆ ದೂರು ನೀಡಿ ಅವರನ್ನು ಅನರ್ಹ ಮಾಡಿ ಎಂದು ಕೇಳಿಕೊಳ್ಳಬಹುದು.

Comments are closed.