ಕರ್ನಾಟಕ

ರಾಜಕೀಯ ಅಖಾಡದಲ್ಲಿ ನಾವೂ ಕುಸ್ತಿ ಆಡಿದವರು, ಪಟ್ಟುಗಳು ನಮಗೂ ಗೊತ್ತು: ಸಿದ್ದರಾಮಯ್ಯ

Pinterest LinkedIn Tumblr


ಬೆಂಗಳೂರು: ಬಿಜೆಪಿ ಆಪರೇಷನ್ ಕಮಲದಿಂದ ಸರ್ಕಾರಕ್ಕೆ ಯಾವುದೇ ಭಯವಿಲ್ಲ, ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ, ಸರ್ಕಾರ ಬೀಳುತ್ತದೆ ಎಂದು ಹೇಳಿಕೆಗಳೆಲ್ಲಾ ಮಾಧ್ಯಮಗಳ ವರದಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಇದರ ಬೆನ್ನಲ್ಲೆ ಪ್ರಸ್ತುತ ನಡೆಯುತ್ತಿರುವ ರಾಜ್ಯ ರಾಜಕೀಯ ವಿದ್ಯಮಾನಗಳ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ,

ರಾಜ್ಯದ ಕೆಲವು ಬಿಜೆಪಿ ಶಾಸಕರು ಕೂಡ ನಮ್ಮ ಸಂಪರ್ಕದಲ್ಲಿದ್ದಾರೆ, ನಾವೇನು ಕೈಕಟ್ಟಿ ಕೂತಿಲ್ಲ, ರಾಜಕೀಯ ಅಖಾಡದಲ್ಲಿ ನಾವು ಕುಸ್ತಿ ಆಡಿದವರು, ಪಟ್ಟುಗಳು ನಮಗೂ ಗೊತ್ತು ಎಂದು ಸಿದ್ದರಾಮಯ್ಯ ಖಾರವಾಗಿಯೇ ಟ್ವೀಟ್ ಮಾಡಿದ್ದಾರೆ.
ಬುಧವಾರ ಆರು ಶಾಸಕರು ರಾಜಿನಾಮೆ ನೀಡುವ ವದಂತಿ ಹಬ್ಬಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರು ಸರಣಿ ಸಭೆ ನಡೆಸುತ್ತಿದ್ದಾರೆ.
ರಾಜ್ಯದ ಕೆಲವು ಬಿಜೆಪಿ‌ ಶಾಸಕರು ಕೂಡಾ ನಮ್ಮ ಸಂಪರ್ಕದಲ್ಲಿದ್ದಾರೆ. ನಾವೇನು ಕೈಕಟ್ಟಿ ಕೂತಿಲ್ಲ.‌ ರಾಜಕೀಯದ ಅಖಾಡದಲ್ಲಿ‌ ನಾವೂ ಕುಸ್ತಿ ಆಡಿದವರು, ಪಟ್ಟುಗಳು ನಮಗೂ ಗೊತ್ತು

Comments are closed.